‘ಯಾವ ಅನ್ನವನ್ನು ಒಂದು ದಿನದ ಹಿಂದೆ ಬೇಯಿಸಿರುತ್ತಾರೆಯೋ ಮತ್ತು ಆ ನಂತರ ರಾತ್ರಿ ಕಳೆದು ಹೋದರೆ, ಮರುದಿನ ಅದಕ್ಕೆ ‘ತಂಗಳನ್ನ’ ಎನ್ನುತ್ತಾರೆ. ಇಂತಹ ಅನ್ನ ತಿಂದರೆ ಅಜೀರ್ಣ, ಆಮ್ಲಪಿತ್ತ, ಹೊಟ್ಟೆ ಉಬ್ಬುವುದು, ವಾಯು ಆಗುವುದು, ಮಲಬದ್ಧತೆ, ನಿರುತ್ಸಾಹ ಮುಂತಾದ ಅನೇಕ ರೋಗಗಳಾಗುತ್ತವೆ. ಆಹಾರ ಜೀರ್ಣವಾಗಲು ಇಂತಹ ತೊಂದರೆಗಳು ಆಗಬಾರದೆಂದು ಮುಂದಿನ ಎಚ್ಚರಿಕೆಯನ್ನು ವಹಿಸಬೇಕು. ರಾತ್ರಿ ಅನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಯಿಸಬಾರದು.
ರಾತ್ರಿ ಸ್ವಲ್ಪ ಕಡಿಮೆ ತಿಂದರೂ ನಡೆಯುತ್ತದೆ; ಆದರೆ ಎಷ್ಟು ಬೇಕೋ ಅಷ್ಟೇ ಅನ್ನವನ್ನು ಬೇಯಿಸುವುದರಿಂದ ಮರುದಿನ ಅದು ಉಳಿಯುವುದಿಲ್ಲ ಹಾಗೂ ಅದು ವ್ಯರ್ಥವಾಗುವುದಿಲ್ಲ; ಆದುದರಿಂದ ಮರುದಿನ ಆ ತಂಗಳು ಅನ್ನ ತಿನ್ನಬೇಕಾಗುವುದಿಲ್ಲ.
ಸದ್ಯದ ಅತಿ ವೇಗದ ಜೀನವ ಶೈಲಿಯಲ್ಲಿ ಅನೇಕ ಗೃಹಿಣಿಯರಿಗೆ ಬೆಳಗ್ಗೆ ಚಪಾತಿ ಮಾಡಲು ಹಿಟ್ಟು ಕಲಸಲು ಸಮಯವಿರುವುದಿಲ್ಲ; ಆದುದರಿಂದ ಅವರು ರಾತ್ರಿಯೇ ಹಿಟ್ಟನ್ನು ಕಲಸಿ ಆ ಹಿಟ್ಟನ್ನು ತಂಪುಪೆಟ್ಟಿಗೆಯಲ್ಲಿ ಬಹಳ ದಿನ ಇಡುತ್ತಾರೆ ಮತ್ತು ಅವಶ್ಯಕತೆಗನುಸಾರ ಅದರಿಂದ ಚಪಾತಿಗಳನ್ನು ಮಾಡುತ್ತಾರೆ.
ಇಂತಹ ಈ ತಂಗಳು ಅನ್ನವು ಪಿತೃದೋಷವನ್ನುಂಟು ಮಾಡುತ್ತದೆ. ವೈಜ್ಞಾನಿಕದೃಷ್ಟಿಯಲ್ಲಿ ತಂಗಳು ಅನ್ನವು ಜಂತುಗಳನ್ನು ಉತ್ಪನ್ನ ಮಾಡುತ್ತದೆ ಮತ್ತು ಜೀರ್ಣ ಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಆದುದರಿಂದ ಮೇಲೆ ಹೇಳಿದಂತೆ ತಂಪು ಪೆಟ್ಟಿಗೆಯಲ್ಲಿಟ್ಟ ತಂಗಳು ಹಿಟ್ಟಿನ ಚಪಾತಿಗಳನ್ನು ತಿನ್ನದೆ ಪ್ರತಿದಿನ ಹಿಟ್ಟು ಕಲಸಿ, ಹೊಸ ಚಪಾತಿಗಳನ್ನೇ ತಿನ್ನಬೇಕು.
ಇದಕ್ಕೆ ಮಧ್ಯಮ ಮಾರ್ಗವೆಂದರೆ ಮರುದಿನದ ಚಪಾತಿಗಳ ಪೂರ್ವಸಿದ್ಧತೆಯೆಂದು ಹಿಂದಿನ ರಾತ್ರಿ ಹಿಟ್ಟು, ಉಪ್ಪು, ಮತ್ತು ಎಣ್ಣೆಯನ್ನು ಅವಶ್ಯತೆಗನುಸಾರ ಒಟ್ಟುಗೂಡಿಸಿಡಬೇಕು. ಮರುದಿನ ಆ ಮಿಶ್ರಣದಲ್ಲಿ ಕೇವಲ ನೀರು ಹಾಕಿ ಹಿಟ್ಟು ಕಲಸಬೇಕು ಮತ್ತು ಅದರ ಚಪಾತಿಗಳನ್ನು ಮಾಡಬೇಕು.
ಈ ರೀತಿಯಾಗಿ ತಂಗಳನ್ನ ತಿನ್ನದೇ ಆರೋಗ್ಯ ಕಾಪಾಡಬೇಕು !’
– ವೈದ್ಯ ಸಮೀರ ಮುಕುಂದ ಪರಾಂಜಪೆ, ಖೆರ್ಡೀ ದಾಪೋಲಿ, ರತ್ನಾಗಿರಿ. (೧೨.೧.೨೦೨೩)