‘ಬಹಳಷ್ಟು ತಥಾಕಥಿತ ಹಿಂದು ಧರ್ಮಾಭಿಮಾನಿಗಳು ‘ಗೋಶಾಲೆ ಮತ್ತು ದೇವಸ್ಥಾನಗಳನ್ನು ಕಟ್ಟುವುದು, ಹಾಗೆಯೇ ಹಿಂದೂಗಳ ಸಭೆಗಳನ್ನು ತೆಗೆದುಕೊಳ್ಳುವುದು, ದೇವಸ್ಥಾನಗಳಲ್ಲಿ ಭಜನೆ, ಕೀರ್ತನೆ, ಪ್ರವಚನಗಳು ಮತ್ತು ‘ಲವ್ ಜಿಹಾದ್ನ ವ್ಯಾಖ್ಯಾನಗಳನ್ನು ಆಯೋಜಿಸುತ್ತಾರೆ ಮತ್ತು ಅವರಿಗೆ ‘ನಾನು ಹಿಂದೂ ಧರ್ಮಕ್ಕಾಗಿ ಬಹಳ ದೊಡ್ಡ ಕಾರ್ಯವನ್ನು ಮಾಡುತ್ತೇನೆ, ಎಂದು ಅನಿಸುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಅವರಿಂದ ಯಾವುದೇ ಕಾರ್ಯವಾಗಿರುವುದಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಹಿಂದೂ ಅಧಿವೇಶನಗಳಿಗೆ ಬಂದ ಕೆಲವು ಹಿಂದೂ ಧರ್ಮಾಭಿಮಾನಿಗಳಿಂದ ನಮಗೆ ಆಗಿರುವಂತಹ ಅನುಭವಗಳನ್ನು ಮುಂದೆ ಕೊಟ್ಟಿದ್ದೇವೆ.
೧. ಹಿಂದೂ ಧರ್ಮಾಭಿಮಾನಿಗಳ ಅಹಂಕಾರ !
ಅ. ಹಿಂದೂ ಧರ್ಮಕ್ಕಾಗಿ ಅತ್ಯಲ್ಪ ಕಾರ್ಯವನ್ನು ಮಾಡುವ ಓರ್ವ ಕೀರ್ತನಕಾರರು ಹಿಂದೂ ಅಧಿವೇಶನದಲ್ಲಿ ‘ನಾವು ಎಷ್ಟು ದೊಡ್ಡ ಕಾರ್ಯವನ್ನು ಮಾಡುತ್ತೇವೆ !, ಎಂಬುದನ್ನು ಹೇಳುತ್ತಿರುತ್ತಾರೆ.
ಆ. ದೇಶದ ಒಂದು ಸಮಸ್ಯೆಯ ಸಂದರ್ಭದಲ್ಲಿ ಕಾರ್ಯವನ್ನು ಮಾಡುವ ಓರ್ವ ನ್ಯಾಯವಾದಿಗಳ ಭಾಷಣದಲ್ಲಿ ‘ನಾನು ಇದನ್ನು ಮಾಡಿದೆ, ನಾನು ಅದನ್ನು ಮಾಡಿದೆ, ಎಂಬ ನನ್ನತನದ ಅಂಶಗಳಿರುತ್ತವೆ. ವಾಸ್ತವದಲ್ಲಿ ಅನೇಕ ಹಿಂದುತ್ವವಾದಿಗಳ ಕಾರ್ಯವು ಇವರಿಗಿಂತ ಅನೇಕ ಪಟ್ಟು ಹೆಚ್ಚಿದೆ.
೨. ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಸಾಧನೆಯ ಮಹತ್ವ ತಿಳಿಯದ ಮತ್ತು ಅದರಿಂದ ದಾರಿ ತಪ್ಪಿದ ಹಿಂದುತ್ವನಿಷ್ಠರು !
ಅ. ಓರ್ವ ವಿಚಾರವಂತರು, ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ಮಾಡುವ ಹಿಂದೂ ನೇತಾರರು ಸಾಧನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವುದಕ್ಕಿಂತ ರಾಜಕೀಯ ವರ್ಚಸ್ಸನ್ನು ಸೃಷ್ಟಿಸಿ ರಾಜಕೀಯ ಪಕ್ಷಗಳಿಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಒತ್ತಾಯಿಸಬೇಕು, ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆ. ‘ರಾಜಕೀಯ ಮಾಧ್ಯಮದಿಂದ ಹಿಂದೂ ರಾಷ್ಟ್ರ ಬರುವುದು, ‘ಘರವಾಪಸಿ ಮಾಡಿದರೆ, ಮಾತ್ರ ಹಿಂದೂ ರಾಷ್ಟ್ರ ಬರಬಹುದು, ‘ಕೇವಲ ನಾಮಜಪವನ್ನು ಮಾಡಿದರೆ ಸಾಕು, ಹಿಂದೂ ರಾಷ್ಟ್ರ ಬರುತ್ತದೆ, ಎಂದೂ ಕೆಲವರ ಹೇಳಿಕೆ ಇರುತ್ತದೆ.
ಇ. ಹಿಂದುತ್ವದ ಕಾರ್ಯಕ್ಕಾಗಿ ವ್ಯವಹಾರವನ್ನು ನಿಲ್ಲಿಸಿದ ಓರ್ವ ಬುದ್ಧಿಜೀವಿಯು ‘ಬೌದ್ಧಿಕ ಸ್ತರದಲ್ಲಿ ಹಿಂದೂ ರಾಷ್ಟ್ರವು ಬರುವುದು, ಎಂದು ವಿಶ್ಲೇಷಿಸುತ್ತಿದ್ದರು. ‘ಆಧ್ಯಾತ್ಮಿಕ ಸ್ತರದಲ್ಲಿ ಏನೂ ಆಗಲಾರದು, ಎಂದು ಅವರ ಹೇಳಿಕೆಯಾಗಿತ್ತು.
ಈ. ಓರ್ವ ಸ್ವಯಂನಿವೃತ್ತ ಐ.ಎ.ಎಸ್. ಸರಕಾರಿ ಅಧಿಕಾರಿ ಯೊಬ್ಬರು ‘ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸಮಾಜದಲ್ಲಿನ ಜನರು ಸಾಧಕರಾಗುವುದು ಮಹತ್ವದ್ದಾಗಿದೆ, ಎಂಬುದನ್ನು ತಿಳಿದುಕೊಳ್ಳುವುದು ಬಿಟ್ಟು ರಾಜಕೀಯ ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ವಿಚಾರ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ಉ. ಹಿಂದುತ್ವನಿಷ್ಠ ನ್ಯಾಯವಾದಿಗಳೊಬ್ಬರು, ‘ಒಂದು ಹಿಂದುತ್ವನಿಷ್ಠ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಸಿಕ್ಕಿದರೆ, ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು, ಎಂದು ಅಭಿಪ್ರಾಯಪಟ್ಟರು.
ಊ. ‘ಕಾನೂನಿನಲ್ಲಿ ಸುಧಾರಣೆ ಮಾಡಿದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಾಗುವುದು, ಎಂದು ಓರ್ವ ಹಿಂದುತ್ವನಿಷ್ಠರು ಹೇಳುತ್ತಾರೆ.
ಎ. ಕೆಲವು ಧರ್ಮ ಪ್ರೇಮಿಗಳಿಗೆ, ‘ಈಗ ಯುದ್ಧದ ಸಮಯ ಹತ್ತಿರ ಬಂದಿದೆ. ಈಗ ಸನಾತನದ ಸಾಧಕರು ಸಾಧನೆಯನ್ನು ಏಕೆ ಹೇಳುತ್ತಾರೆ ? ಈಗ ಸಾಧನೆಯನ್ನು ಮಾಡಿ ಯಾವುದೇ ಉಪಯೋಗವಿಲ್ಲ, ಎಂದು ಹೇಳುತ್ತಾರೆ.
೩. ಹಿಂದೂ ಅಧಿವೇಶನಗಳ ಕಾಲಾವಧಿಯಲ್ಲಿ ನನ್ನನ್ನು ಭೇಟಿಯಾಗಲು ಬಂದ ಬಹಳಷ್ಟು ಜನರು ಸಾಧನೆಯನ್ನು ಮಾಡದಿರುವ ಮತ್ತು ಅಹಂಕಾರಿಗಳಾಗಿರುತ್ತಾರೆ.
ಹಿಂದೂಗಳ ಅಧೋಗತಿಗೆ ಮುಖ್ಯ ಕಾರಣವೆಂದರೆ, ಧರ್ಮಶಿಕ್ಷಣದ ಅಭಾವ. ಹಿಂದೂ ಧರ್ಮಕ್ಕಾಗಿ ನಿಜವಾದ ಕಾರ್ಯವೆಂದರೆ ಸ್ವತಃ ಸಾಧನೆ ಮಾಡಿ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ಕೊಡುವುದು ಮತ್ತು ಅವರಿಂದ ಸಾಧನೆ ಮಾಡಿಸಿಕೊಳ್ಳುವುದು. ಇದನ್ನು ತಥಾಕಥಿತ ಹಿಂದು ಧರ್ಮಾಭಿಮಾನಿಗಳು ಮಾಡದ ಕಾರಣ ಅವರಿಂದ ಧರ್ಮ ರಕ್ಷಣೆಯ ಯಾವುದೇ ಕಾರ್ಯವಾಗುವುದಿಲ್ಲ. ಹಿಂದೂಗಳ ರಕ್ಷಣೆಗಾಗಿ ‘ಹಿಂದೂಗಳಿಂದ ಧರ್ಮದ ಅಧ್ಯಯನ ಮತ್ತು ಸಾಧನೆ ಮಾಡಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಆ ದೃಷ್ಟಿಯಿಂದ ಹಿಂದು ಜನಜಾಗೃತಿ ಸಮಿತಿಯು ಅಲ್ಲಲ್ಲಿ ಧರ್ಮಶಿಕ್ಷಣ ವರ್ಗಗಳನ್ನು ಮತ್ತು ಸನಾತನ ಸಂಸ್ಥೆಯು ಸತ್ಸಂಗ ಗಳನ್ನು ತೆಗೆದುಕೊಳ್ಳುತ್ತಿದೆ. ಸಾಧನೆಯಿಂದ ನಮಗೆ ಈಶ್ವರನ ಆಶೀರ್ವಾದ, ಹಾಗೆಯೇ ದೇವತೆಗಳ ಶಕ್ತಿ ಸಿಗುತ್ತದೆ ಮತ್ತು ಕಾರ್ಯವು ಹೆಚ್ಚು ಪ್ರಭಾವಶಾಲಿ ಮತ್ತು ಹೆಚ್ಚು ಫಲದಾಯಕ ವಾಗುತ್ತದೆ. ಇದರ ಸಾಕಾರ ಉದಾಹರಣೆ ಎಂದರೆ ಛತ್ರಪತಿ ಶಿವಾಜಿ ಮಹಾರಾಜರು ! ಆದುದರಿಂದ ಯಾರಿಗೆ ‘ಧರ್ಮಕ್ಕಾಗಿ ಏನಾದರೂ ಮಾಡಬೇಕು, ಎಂದು ಅನಿಸುತ್ತದೆಯೋ, ಅವರು ತಮ್ಮ ಮನಸ್ಸಿಗೆ ಬಂದಂತೆ ಮಾಡುವುದಕ್ಕಿಂತ ಧರ್ಮಶಿಕ್ಷಣ ವರ್ಗ ಅಥವಾ ಸತ್ಸಂಗಗಳಲ್ಲಿ ಕಲಿಸಿದಂತೆ ಸಾಧನೆ ಮಾಡಬೇಕು.ವಾನರರು ರಾಮನಾಮವನ್ನು ಉಚ್ಚರಿಸುತ್ತಾ ಕಲ್ಲುಗಳನ್ನು ನೀರಿನಲ್ಲಿ ಎಸೆದಾಗ ಅವು ತೇಲಿದವು ಮತ್ತು ಅವುಗಳಿಂದಲೇ ರಾಮಸೇತುವೆ ನಿರ್ಮಾಣವಾಯಿತು. ಈ ಉದಾಹರಣೆಯಿಂದ ಬೋಧ ಪಡೆದು ನಾವು ಸಾಧನೆ ಎಂದು ನಾಮಜಪ ಮಾಡುತ್ತಾ ಕಾರ್ಯ ಮಾಡಿದರೆ ಹಿಂದೂ ಧರ್ಮದ ರಕ್ಷಣೆಯ ಮತ್ತು ಪ್ರಚಾರದ ಯೋಗ್ಯ ಕಾರ್ಯ ಬೇಗನೆ ಆಗುವುದು.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ