ಚೀನಾವು ಜೈವಿಕ ಆಯುಧ ಎಂದು ಕೊರೊನಾ ರೋಗಾಣು ನಿರ್ಮಿಸಿತ್ತು !

ಚೀನಾದ ವುಹಾನ್ ಪ್ರಯೋಗಾಲಯದಲ್ಲಿನ ಚೀನಾದ ವಿಜ್ಞಾನಿಯ ದಾವೆ !

ನವದೆಹಲಿ – ಚೀನಾದ ವುಹಾನ ನಗರದಲ್ಲಿನ ಒಂದು ಪ್ರಯೋಗ ಶಾಲೆಯಲ್ಲಿನ ವಿಜ್ಞಾನಿ ದಾವೆ ಮಾಡಿದ್ದಾರೆ, ‘ಚೀನಾ ಕೋವಿಡ್ ೧೯ ಈ ರೋಗಾಣು ಜೈವಿಕ ಆಯುಧ ಎಂದು ತಯಾರಿಸಿತ್ತು. ಚೀನಾದ ಈ ರೋಗಾಣು ಉದ್ದೇಶ ಪೂರ್ವಕವಾಗಿ ಪಸರಿಸಲಾಗಿತ್ತು.’ ವಿಜ್ಞಾನಿ ಚಾವೋ ಶಾವೋ ಇವರು ಇಂಟರ್ ನ್ಯಾಷನಲ್ ಪ್ರೆಸ್ ಅಸೋಸಿಯೇಷನ್’ನ ಸದಸ್ಯ ಜನಿಫರ್ ಜೆಂಗ್ ಇವರ ಜೊತೆಗೆ ಒಂದು ಸಂದರ್ಶನದಲ್ಲಿ ದಾವೆ ಮಾಡಿದ್ದಾರೆ. ವಿಶೇಷವೆಂದರೆ ಚೀನಾ ಮೇಲೆ ಈ ಹಿಂದೆ ಕೂಡ ಈ ರೀತಿಯ ಆರೋಪ ಮಾಡಲಾಗಿತ್ತು. ಚೀನಾ ಪ್ರತಿ ಬಾರಿಯೂ ಈ ಆರೋಪ ತಳ್ಳಿ ಹಾಕುತ್ತಾ ಕೊರೋನಾ ರೋಗಾಣು ಮಾಂಸ ಮಾರಾಟದ ಮಾರುಕಟ್ಟೆಯಿಂದ ಹರಡಿರುವ ದಾವೆ ಮಾಡಿದೆ.

೧. ವಿಜ್ಞಾನಿ ಶಾವೋ ಇವರು, ವಿಜ್ಞಾನಿಗಳಿಗೆ ಚೀನಾದಿಂದ ವುಹಾನ್ ಪ್ರಯೋಗ ಶಾಲೆಯಲ್ಲಿ ಅತ್ಯಂತ ಪ್ರಭಾವಿ ರೋಗಾಣು ಕಂಡುಹಿಡಿಯಲು ಹೇಳಿತ್ತು. ನನ್ನ ಅಲ್ಲಿಯ ಸಹಯೋಗಿ ಶಾನ್ ಚವೋ ಇವರು, ಒಬ್ಬ ಹಿರಿಯ ವಿಜ್ಞಾನಿಯೂ ಅವರಿಗೆ ಕೊರೀನಾದ ೪ ವಿಧದ ರೋಗಾಣು ನೀಡಿದ್ದರು. ಅದರಲ್ಲಿ ಯಾವುದು ಹೆಚ್ಚು ವೇಗವಾಗಿ ಹರಡಲು ಸಾಧ್ಯ ?, ಅದನ್ನು ಕಂಡು ಹಿಡಿಯಲು ಹೇಳಿತ್ತು ಎಂದು ಹೇಳಿದರು.

೨. ಚಾವೋ ಶಾವೊ ಇವರು, ಅವರ ಕೆಲವು ಸಹೊದ್ಯೋಗಿಗಳು ೨೦೧೯ ರಲ್ಲಿ ವುಹಾನ್ ನಲ್ಲಿ ಆಯೋಜಿಸಿರುವ ವಿಶ್ವ ಸೈನ್ಯ ಸ್ಪರ್ಧೆಯ ಸಮಯದಲ್ಲಿ ನಾಪತ್ತೆಯಾಗಿದ್ದರು. ಅವರೆಲ್ಲರೂ ವಿವಿಧ ದೇಶದಿಂದ ಬಂದಿರುವ ಆಟಗಾರರ ಪರೀಕ್ಷೆ ಮಾಡುವುದಕ್ಕಾಗಿ ವಿವಿಧ ಹೋಟೆಲ್ ಗಳಿಗೆ ಹೋಗಿದ್ದರು. ಯಾವುದೇ ವ್ಯಕ್ತಿಯ ಪರೀಕ್ಷೆಗೆ ವಿಜ್ಞಾನಿಗಳನ್ನು ಕಳುಹಿಸಲಾಗುವುದಿಲ್ಲ, ಡಾಕ್ಟರರು ಹೋಗುತ್ತಾರೆ. ಈ ವಿಜ್ಞಾನಿಗಳಿಗೆ ಕೊರೋನಾ ರೋಗಾಣು ಹರಡುವುದಕ್ಕಾಗಿ ಕಳುಹಿಸಲಾಗಿತ್ತು. ಏಪ್ರಿಲ್ ೨೦೨೦ ರಲ್ಲಿ ನನಗೆ ಶಿನಜಿಯಾಂಗ ಪ್ರಾಂತ್ಯದಲ್ಲಿ ಕಾರಾಗೃಹದಲ್ಲಿರುವ ಉಘುರ್ ಮುಸಲ್ಮಾನರ ಪರೀಕ್ಷೆ ಮಾಡುವುದಕ್ಕಾಗಿ ಕಳುಹಿಸಲಾಗಿತ್ತು. ಆರೋಗ್ಯ ಪರಿಶೀಲನೆ ನಡೆಸಿ ಅವರನ್ನು ಬೇಗನೆ ಬಿಡುಗಡೆ ಗೊಳಿಸಿರಿ ಎಂದು ಅವರಿಗೆ ಹೇಳಲಾಗಿತ್ತು ಎಂದು ಹೇಳಿದರು.