ಅಮೇರಿಕಾ ಭಾರತವನ್ನು ಓಲೈಸುವ ಹೇಳಿಕೆ ನೀಡಬಾರದಂತೆ !

ನರೇಂದ್ರ ಮೋದಿ, ಜೋ ಬಾಯಡೆನ್ ಮತ್ತು ಶಹಬಾಜ್ ಷರೀಫ್

ಇಸ್ಲಾಮಾಬಾದ – ಅಮೇರಿಕಾವು ಪಾಕಿಸ್ತಾನದ ವಿರೋಧದಲ್ಲಿ ಭಾರತದ ಓಲೈಕೆಯ ಹೇಳಿಕೆ ನೀಡಬಾರದು, ಎಂದು ಪಾಕಿಸ್ತಾನದ ಹೊಟ್ಟೆ ಉರಿಯನ್ನು ವ್ಯಕ್ತಪಡಿಸಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೇರಿಕಾದ ಪ್ರವಾಸದ ಸಮಯದಲ್ಲಿ ಪ್ರಸಾರಗೊಳಿಸಿರುವ ಸಂಯುಕ್ತ ಮನವಿಯಲ್ಲಿ ‘ಪಾಕಿಸ್ತಾನವು ತನ್ನ ಭೂಮಿಯನ್ನು ಭಯೋತ್ಪಾದನೆಯ ದಾಳಿಗಾಗಿ ಉಪಯೋಗಿಸದಂತೆ ಕಾಳಜಿ ವಹಿಸಬೇಕು ಹಾಗೂ ‘ಅಲ್ ಕೈದಾ, ಇಸ್ಲಾಮಿಕ್ ಸ್ಟೇಟ್, ಲಷ್ಕರ್ ಎ ತೋಯ್ಬಾ, ಜೈಶೆ-ಎ-ಮಹಮ್ಮದ್, ಮತ್ತು ಹಿಜಬುಲ್ ಮುಜಾಹಿದ್ದಿನ್ ಇವುಗಳ ಸಹಿತ ಎಲ್ಲಾ ಭಯೋತ್ಪಾದಕ ಸಂಘಟನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಕರೆ ನೀಡಿತ್ತು. ಇದರಿಂದ ಪಾಕಿಸ್ತಾನಕ್ಕೆ ಇರಿಸುಮುರಿಸು ಉಂಟಾಗಿದೆ.

ಈ ಸಯುಕ್ತ ಮನವಿಯನ್ನು ನಿಷೇಧಿಸಲು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ಇತ್ತಿಚೆಗೆ ಪಾಕಿಸ್ತಾನದಲ್ಲಿನ ಅಮೆರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಟ್ ಮಿಲರ್ ಇವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮ್ಯಾಟ್ ಮಿಲರ್ ಇವರು, ‘ಪಾಕಿಸ್ತಾನವು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿಕೆ ನೀಡಿದರು.