ರೋಮ (ಇಟಲಿ) – ಇಟಲಿ ಸರಕಾರವು ಮಸೀದಿಯ ಹೊರಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜಅನ್ನು ನಿಷೇಧಿಸುವ ಕಾನೂನು ರೂಪಿಸುವ ಒಂದು ಮಾದರಿ ತಯಾರಿಸಿದೆ. ಸರಕಾರ ನಗರ ನಿಯೋಜನೆ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಈ ಕಾನೂನು ಜಾರಿ ಮಾಡಲಿದೆ. ಈ ಮೂಲಕ ಸಾರ್ವಜನಿಕ ಸ್ಥಳಗಳಿಗೆ ಪ್ರಾರ್ಥನಾ ಸ್ಥಳಗಳ ರೂಪ ನೀಡಲು ನಿಷೇಧಿಸಲಾಗುವುದು. ಸರಕಾರವು ಮತಾಂತರ ವಿರೋಧಿ ಕಾನೂನು ರೂಪಿಸುವುದಕ್ಕಾಗಿ ಕೂಡ ಅದರ ಮಾದರಿ ತಯಾರಿಸಿದೆ. ಸರಕಾರದಿಂದ ಈ ಕಾನೂನು ಅಂಗೀಕರಿಸಿದರೆ ಮಸೀದಿ ಅಲ್ಲದೆ ಉದ್ಯೋಗಿಕ ಕಂಪನಿಗಳು, ಗೋದಾಮಗಳು, ಗ್ಯಾರೇಜ್, ಮಸೀದಿಯ ಹೊರಗಿನ ಜಾಗ, ಮೈದಾನ, ರಸ್ತೆ ಮುಂತಾದ ಸ್ಥಳಗಳಲ್ಲಿ ನಮಾಜ ಮೇಲೆ ನಿಷೇಧ ಹೇರಲಾಗುವುದು.
#Italy proposes draft law to ban #Muslim Prayers outside #Mosques#MuslimPrayers https://t.co/6BmbBSVlBb
— News Bharati (@eNewsBharati) June 16, 2023
ಕಾನೂನು ಬಾಹಿರ ಮಸೀದಿಗಳ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುವುದು !
ಸರಕಾರವು ನಮಾಜ ಕುರಿತು ಕಾನೂನು ರೂಪಿಸಿದ ನಂತರ ಇಟಲಿಯಲ್ಲಿನ ಎಲ್ಲಾ ಮಸೀದಿಯ ಪರಿಶೀಲನೆ ನಡೆಸುವ ಅಧಿಕಾರ ಸರಕಾರಕ್ಕೆ ಸಿಗಲಿದೆ. ಈ ಮೂಲಕ ಈ ಮಸೀದಿಗಳಿಗೆ ಧನಸಹಾಯ ಎಲ್ಲಿಂದ ದೊರೆಯುತ್ತದೆ ? ಇದರ ಮಾಹಿತಿ ಸಿಗಲಿದೆ ಹಾಗೂ ಈ ಮಸೀದಿ ಅಧಿಕೃತವಾಗಿದೆಯೋ ಅಥವಾ ಅನಧಿಕೃತವಾಗಿದೆಯೋ ? ಇದು ಕೂಡ ತಿಳಿದು ಬರುವುದು. ಈ ಕಾನೂನು ಅಂಗೀಕಾರವಾದನಂತರ ಅನಧಿಕೃತ ಮಸೀದಿಗಳಿಗೆ ಬೀಗ ಹಾಕಲಾಗುವುದು. ಇಟಲಿಯಲ್ಲಿನ ಅನೇಕ ಮಸೀದಿಗಳು ಗೋದಾಮಿನ ಮೇಲೆ ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ. ಆದ್ದರಿಂದ ಈ ಕಾನೂನಿನಲ್ಲಿ, ಕೈಗಾರಿಕಾ ಕ್ಷೇತ್ರ, ಗೋದಾಮಗಳು, ಗ್ಯಾರೇಜ್ ಮುಂತಾದ ಸ್ಥಳಗಳ ಉಪಯೋಗ ಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಿದರೆ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.
(ಸೌಜನ್ಯ – Zee News)
ರೋಮದಲ್ಲಿನ ಮಂಗಲಿಯಾನ ಮಸೀದಿಯ ಇಮಾಮ್ ಸಾಮಿ ಸಲೇಂ ಇವರು, ಮುಸಲ್ಮಾನರ ಕುರಿತು ಸ್ಪಷ್ಟವಾಗಿ ಭೇದಭಾವ ಮಾಡುವ ಮಾದರಿಯು ಇಟಲಿಯ ಸಂವಿಧಾನ ಗೌರವಿಸುವುದಿಲ್ಲ. ಇಟಲಿಯ ಸಂವಿಧಾನವು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರೀಕನ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
Italy’s right-wing party prepares draft law to ban Muslim prayer spaces outside of mosqueshttps://t.co/fpkNCMXR5W
— Yeni Şafak English (@yenisafakEN) June 12, 2023
ಮತಾಂತರ ವಿರೋಧಿ ಕಾನೂನು ಕೂಡ ರೂಪಿಸಲಾಗುವುದು !
ಇಟಲಿಯ ಪ್ರಧಾನಮಂತ್ರಿ ಜಿಯೋರ್ಜಿಯಾ ಮೆಲೋನಿ ಇವರು ಚುನಾವಣೆಯಲ್ಲಿ ಮುಸಲ್ಮಾನ ನಿರಾಶ್ರಿತರನ್ನು ತಡೆಯುವದಕ್ಕಾಗಿ ಕಾನೂನು ರೂಪಿಸುವ ಆಶ್ವಾಸನೆ ನೀಡಿದ್ದರು. ಸದ್ಯ ಇಟಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನಿರಾಶ್ರಿತ ಮುಸಲ್ಮಾನರಿಂದ ಮತ್ತು ಅವರಿಂದ ನಡೆಸಲಾಗುವ ಮತಾಂತರದ ಚಟುವಟಿಕೆಯಿಂದ ಸ್ಥಳೀಯ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರಕಾರವು ಮತಾಂತರ ವಿರೋಧಿ ಕಾನೂನು ರೂಪಿಸುವುದಕ್ಕಾಗಿ ಮಾದರಿ ಸಿದ್ಧಪಡಿಸಿದೆ.
ಸಂಪಾದಕೀಯ ನಿಲುವುಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ? ಇತರ ಸಮಯದಲ್ಲಿ ಭಾರತೀಯರು ಪಶ್ಚಿಮಾತ್ಯರ ಅಂಧಾನುಕರಣೆ ಮಾಡಲಾಗುತ್ತಿರುವಾಗ ಈಗ ಅಲ್ಲಿಯ ಒಳ್ಳೆಯ ಮತ್ತು ಕಾನೂನಿನ ಅನುಕರಣೆ ಮಾಡಿದರೆ ಅದು ದೇಶಕ್ಕೆ ಲಾಭದಾಯಕವೇ ಆಗುವುದು ! |