‘ಗುರು-ಶಿಷ್ಯ ಪದಕಕ್ಕೆ ಸಂಬಂಧಿಸಿದ ಸೇವೆಯನ್ನು ಮಾಡುವಾಗ ನಾನು ೩ ರೇಖಾಚಿತ್ರಗಳನ್ನು ಬಿಡಿಸಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ತೋರಿಸಿದೆನು. ಆಗ ಅವರು ನನ್ನಿಂದ ಅಧ್ಯಯನವನ್ನು ಮಾಡಿಸಿಕೊಂಡರು. ಸಚ್ಚಿದಾನಂದ ಪರಬ್ರಹ್ಮ ಡಾ ಜಯಂತ ಆಠವಲೆಯವರ ಮಾರ್ಗದರ್ಶನಕ್ಕೆ ಅನುಸಾರ ಕಲಾಕೃತಿಯಲ್ಲಿ ಬದಲಾವಣೆಗಳನ್ನು ಮಾಡುವಾಗ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.
೧. ರೇಖಾಚಿತ್ರಗಳು
೧ ಅ. ಆಕೃತಿ ೧ : ಈ ಕಲಾಕೃತಿಯಲ್ಲಿ ಗುರುಗಳ ಗಡ್ಡವನ್ನು ತೋರಿಸಿರಲಿಲ್ಲ (ಪದಕದ ಆಕಾರ ಚಿಕ್ಕದಾಗಿದ್ದರಿಂದ ಗುರುಗಳ ಮುಖದ ಆಕಾರ ಸರಿಯಾಗಿ ಕಾಣಿಸಬೇಕು, ಈ ದೃಷ್ಟಿಯಿಂದ ಗಡ್ಡವನ್ನು ತೋರಿಸಿರಲಿಲ್ಲ)
೧ ಆ. ಆಕೃತಿ ೨ : ಇದರಲ್ಲಿ ಗುರುಗಳ ಗಡ್ಡ ತೋರಿಸಲಾಗಿತ್ತು.
೧ ಇ. ಆಕೃತಿ ೩ : ಇದು ಅಂತಿಮ ಕಲಾಕೃತಿಯಾಗಿದೆ.
೨. ‘ಗಡ್ಡ ಬಿಡುವುದು/ ಬೆಳೆಸುವುದು, ಇದು ಅಸಾತ್ತ್ವಿಕವಾಗಿದ್ದರೂ, ಈ ನಿಯಮ ಸಾಮಾನ್ಯ ವ್ಯಕ್ತಿಗಳಿಗೆ ಅನ್ವಯಿಸುತ್ತದೆ; ಆದರೆ ಗುರು ಅಥವಾ ಸಂತರಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅವರಿಗೆ ‘ಗಡ್ಡವನ್ನು ಬಿಡುವುದು ಇದು ಚೈತನ್ಯವನ್ನು ಪ್ರಕ್ಷೇಪಿಸುವ ಒಂದು ಮಾಧ್ಯಮವಾಗಿರುತ್ತದೆ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು : ಪ.ಪೂ ಡಾಕ್ಟರರು ‘ಆಕೃತಿ ೧ ಮತ್ತು ‘೨ ಇವೆರಡರಲ್ಲಿ ಯಾವುದನ್ನು ನೋಡಿ ಒಳ್ಳೆಯ ದೆನಿಸುತ್ತದೆ ಎಂದು ಪರಿಶೀಲಿಸಲು ಹೇಳಿದರು. ಆಗ ನನಗೆ ‘ಆಕೃತಿ ೧ ಕ್ಕಿಂತ ‘ಆಕೃತಿ ೨ ಅನ್ನು ನೋಡಿ ಒಳ್ಳೆಯದೆನಿಸಿತು. ‘ಗಡ್ಡವನ್ನು ಬಿಡುವುದು, ಅಸಾತ್ತ್ವಿಕವಾಗಿದ್ದರೂ, ಆಕೃತಿ ೨ ಅನ್ನು ನೋಡಿ ಏಕೆ ಒಳ್ಳೆಯದೆನಿಸುತ್ತದೆ ? ಎಂದೆನಿಸಿದಾಗ ಪ.ಪೂ. ಡಾಕ್ಟರರು ಅದರ ಹಿಂದಿನ ಶಾಸ್ತ್ರವನ್ನು ಹೇಳಿದರು, ಅವರು ವಿವರಿಸುತ್ತಾ, “ಗಡ್ಡವನ್ನು ಬಿಡುವುದು, ಅಸಾತ್ವಿಕ ಎಂಬ ನಿಯಮವು ಸಾಮಾನ್ಯ ವ್ಯಕ್ತಿಗಳಿಗಾಗಿದೆ. ಗುರು ಅಥವಾ ಸಂತರಿಗೆ ಈ ನಿಯಮ ಅನ್ವಯಿಸುವುದಿಲ್ಲ; ಏಕೆಂದರೆ ಅವರಿಗೆ ಇದು ಚೈತನ್ಯ ವನ್ನು ಪ್ರಕ್ಷೇಪಿಸುವ ಮಾಧ್ಯಮವಾಗಿರುತ್ತದೆ, ಎಂದರು.
೩. ‘ಆಕೃತಿ ೨ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಬದಲಾವಣೆ: ಪ.ಪೂ. ಡಾಕ್ಟರರು ಶಿಷ್ಯನ ಆಕಾರವನ್ನು ಚಿಕ್ಕದಾಗಿಸಲು ಹೇಳಿದರು. ಅವರು “ಗುರುಗಳಿಗಿಂತ ಶಿಷ್ಯನು ದೊಡ್ಡದಾಗಿ ಕಾಣಿಸಬಾರದು ಎಂದು ಹೇಳಿದರು.
೪. ಸಾಧಕಿಯು ಕಲಾಕೃತಿ ಚೆನ್ನಾಗಿ ಆಗಲು ಬುದ್ಧಿಯ ಸ್ತರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದರೂ ಅವಳಿಗೆ ಸಮಾಧಾನ ವೆನಿಸದಿರುವುದು ಮತ್ತು ಕಲಾಕೃತಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಬದಲಾವಣೆಗಳನ್ನು ಮಾಡಿದ ಬಳಿಕ ಸಾಧಕಿಗೆ ಒಳ್ಳೆಯದೆನಿಸುವುದು ಮತ್ತು ಶರಣಾಗತಭಾವ ಅರಿವಾಗುವುದು : ಈ ಮೊದಲು ನಾನು ಕಲಾಕೃತಿ ಚೆನ್ನಾಗಿ ಆಗಲು ಬುದ್ಧಿಯ ಸ್ತರದಲ್ಲಿ ಕಲಾಕೃತಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಯೂ ಸಮಾಧಾನ ಅನಿಸುತ್ತಿರಲಿಲ್ಲ. – ಕು. ಸಿದ್ಧಿ ಮಹೇಂದ್ರ ಕ್ಷತ್ರಿಯ ನನಗೆ ‘ಅದರಲ್ಲಿ ಏನೋ ಕೊರತೆ ಇದೆ ಎಂದು ಅನಿಸುತ್ತಿತ್ತು. ಪ.ಪೂ. ಡಾಕ್ಟರರು ಹೇಳಿದಂತೆ ಶಿಷ್ಯನ ಆಕಾರವನ್ನು ಚಿಕ್ಕದು ಮಾಡಿದಾಗ ಕಲಾಕೃತಿಯನ್ನು ನೋಡಿ ನನಗೆ ಒಳ್ಳೆಯ ದೆನಿಸತೊಡಗಿತು. ನನಗೆ ಪ.ಪೂ. ಡಾಕ್ಟರರ ‘ಗುರುಗಳಿಗಿಂತ ಶಿಷ್ಯನು ದೊಡ್ಡವನಂತೆ ಕಾಣಿಸ ಬಾರದು, ಎನ್ನುವ ವಾಕ್ಯ ನೆನಪಾಯಿತು. ‘ನಮ್ಮ ಜೀವನ ದಲ್ಲಿ ಗುರುಗಳಿಗಿಂತ ದೊಡ್ಡದು ಯಾವುದೂ ಇಲ್ಲ, ಎಂದರಿವಾಗಿ ನನಗೆ ಭಾವಜಾಗೃತಿಯಾಯಿತು. ‘ಈಗ ಈ ಕಲಾಕೃತಿಯು ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು, ಎಂದು ನನಗೆ ಅನಿಸಿತು, ಹಾಗೆಯೇ ಅದರತ್ತ ನೋಡಿ ನನಗೆ ಸಮಾಧಾನವೆನಿಸುತ್ತಿತ್ತು. ಕಲಾಕೃತಿಯತ್ತ ನೋಡಿದಾಗ ನನಗೆ ಶರಣಾಗತಭಾವದ ಅರಿವಾಗುತ್ತಿತ್ತು.
೫. ಕಲಾಕೃತಿಯಲ್ಲಿ ಬದಲಾವಣೆಗಳನ್ನು ಮಾಡಿ ಅದನ್ನು ಪರಾತ್ಪರ ಗುರು ಡಾ. ಆಠವಲೆಯವರಿಗೆ ತೋರಿಸಿದಾಗ ಅವರು “ಈಗ ಚೆನ್ನಾಗಿದೆ ಎಂದರು. ಆಗ ‘ಕಲಾಕೃತಿಯ ಮಾಧ್ಯಮದಿಂದ ಗುರುಗಳು ನಮ್ಮಲ್ಲಿರುವ ಕೊರತೆಯನ್ನು ದೂರ ಗೊಳಿಸಿ ನಮ್ಮನ್ನು ರೂಪಿಸುತ್ತಾರೆ, ಎನ್ನುವುದು ನನಗೆ ಕಲಿಯಲು ಸಿಕ್ಕಿತು.
೬. ಮಹಾನ್ ಗುರುಗಳ ಚರಣಗಳಲ್ಲಿ ವ್ಯಕ್ತಪಡಿಸಿದ ಕೃತಜ್ಞತೆ
ಕಲೆಗೆ ಸಂಬಂಧಿಸಿದ ಜ್ಞಾನವನ್ನು ನೀಡುವವರು ಅನೇಕರಿದ್ದಾರೆ; ಆದರೆ ಪ.ಪೂ. ಡಾಕ್ಟರರು ಕಲೆಗೆ ಸಂಬಂಧಿಸಿದ ಸೇವೆಯನ್ನು ಮಾಡುವ ನಮ್ಮೆಲ್ಲ ಸಾಧಕರಿಗೆ ಕಲೆಗೆ ಸಂಬಂಧಿಸಿದ ಜ್ಞಾನದ ಜೊತೆಗೆ ಅಧ್ಯಾತ್ಮದ ವಿವಿಧ ಮಜಲುಗಳನ್ನೂ ಕಲಿಸುತ್ತಾರೆ. ನಮ್ಮ ಅಜ್ಞಾನವನ್ನು ದೂರಗೊಳಿಸುವ ಮತ್ತು ಕಲೆಯ ಮಾಧ್ಯಮದಿಂದ ಸಾಧನೆಯನ್ನು ಕಲಿಸುವ ಇಂತಹ ಗುರುಗಳು, ಏಕಮೇವಾದ್ವಿತೀಯರಾಗಿದ್ದಾರೆ. ಈ ಅಮೂಲ್ಯ ಮಾರ್ಗ ದರ್ಶನಕ್ಕಾಗಿ ನಾವು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇವೆ.
– ಕು. ಸಿದ್ಧಿ ಮಹೇಂದ್ರ ಕ್ಷತ್ರಿಯ (೨೦೨೨ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೩೪ ವರ್ಷಗಳು) ಸನಾತನ ಆಶ್ರಮ, ರಾಮನಾಥಿ, ಗೋವಾ (೧೪.೪.೨೦೨೩)