ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭಹಸ್ಥದಿಂದ “ಪ್ರತ್ಯಕ್ಷ ಸಾಧನೆ ಕಲಿಸುವಪಧ್ದತಿ” ಇದರ ಇ-ಪುಸ್ತಕದ ಪ್ರಕಾಶನ !

ಸನಾತನ ‘ಆಧ್ಯಾತ್ಮಿಕ ಅಭ್ಯಾಸವನ್ನು ಕಲಿಸುವ ವಿಧಾನ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಭಾಗವತಾಚಾರ್ಯ (ವಕೀಲ) ಶ್ರೀ ರಾಜೀವ್ ಕೃಷ್ಣಜೀ ಮಹಾರಾಜ್ ಝಾ, ಪಿ.ಪಿ. ಭಾಗೀರಥಿ ಮಹಾರಾಜ್, ಪೂಜ್ಯ ಸಂತ ಶ್ರೀ ರಾಮ್ ಜ್ಞಾನದಾಸ್ ಮಹತ್ಯಗಿ, ವಕೀಲ (ಪಂಡಿತ್) ಹರಿಶಂಕರ್ ಜೈನ್, ಮಹಂತ್ ದೀಪಕ್ ಗೋಸ್ವಾಮಿ

ರಾಮನಾಥಿ (ಫೋಂಡ), ೨೪ ಜೂನ್ (ವಾರ್ತೆ.) – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಕೊನೆಯ ದಿನ ಅಂದರೆ ಜೂನ್ 22 ರಂದು ಅಮರಾವತಿಯ ಶ್ರೀ ಮಹಾಕಾಳಿಮಾತಾ ಶಕ್ತಿಪೀಠ ಪ್ರತಿಷ್ಠಾನದ ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭ ಹಸ್ತದಿಂದ “ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಭೋಧನೆಗಳು” (ಸಂಪುಟ ೧) : ‘ಸಾಧನೆ ಪ್ರತ್ಯಕ್ಷ ಕಲಿಸುವ ಪಧ್ಧತಿ’ ಇದರ ಮರಾಠಿ ಮತ್ತು ಹಿಂದಿ ಭಾಷೆಯ ‘ಇ- ಪುಸ್ತಕ’ ಪ್ರಕಾಶಿಸಲಾಯಿತು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಸಂಭಾಜಿ ನಗರದ ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನದ ಅಧ್ಯಕ್ಷ ಶ್ರೀ ಕಮಲೇಶ ಕಠಾರಿಯಾ, ಉತ್ತರ ಪ್ರದೇಶದ ಜಂಬಾಜ ಹಿಂದೂ ಸ್ತಾನಿ ಸೇವಾ ಸಮಿತಿಯ ಉಪಾಧ್ಯಕ್ಷ ವಕೀಲ ಅಲೋಕ ತಿವಾರಿ ಮತ್ತು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂಜ್ಯ. ರಮಾನಂದ ಗೌಡ ಇವರುಗಳು ಉಪಸ್ಥಿತರಿದ್ದರು. ಈ ಪುಸ್ತಕವು “ಅಮೆಜಾನ್” ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.