ರಾಮನಾಥ (ಫೋನ್ದ), ಜೂನ್ 21 (ವಾರ್ತೆ.) – ಭಾರತದಲ್ಲಿನ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಕಾಶ್ಮೀರದಲ್ಲಿನ ಕೇಸರಿಯ ಕೃಷಿ, ಹಿಮಾಚಲ ಪ್ರದೇಶದ ಸೆಬುವಿನ ಕೃಷಿ, ರಾಜಸ್ಥಾನದಲ್ಲಿನ ತಿನಿಸುಗಳ ಉದ್ಯೋಗ, ಉತ್ತರಪ್ರದೇಶದಲ್ಲಿನ ಪಾನ ಮಸಾಲಾ ಉದ್ಯೋಗ, ಗುಜರಾತಿನ ಎಣ್ಣೆಯ ಉದ್ಯೋಗ, ಕರ್ನಾಟಕದಲ್ಲಿನ ಚಂದನದ ಕೃಷಿ, ಕೇರಳದಲ್ಲಿನ ತೆಂಗಿನಕಾಯಿಯ ಕೃಷಿ ಇತ್ಯಾದಿ ಮಹತ್ವದ ಅರ್ಥವ್ಯವಸ್ಥೆಯು ಮುಸಲ್ಮಾನರ ಬಳಿ ಇದೆ. ಇದು ಕೇವಲ ಯೋಗಾಯೋಗವಾಗಿರದೇ ಸನಾತನ ಹಿಂದೂ ಧರ್ಮ ಮತ್ತು ಹಿಂದೂಗಳ ಮೇಲೆ ಮಾಡಲಾಗುವ `ಪ್ರಯೋಗ’ (ಷಡ್ಯಂತ್ರ)ವಾಗಿದೆ. ಇದರಿಂದಾಗಿ ಭಾರತದಲ್ಲಿನ ಈ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಳ್ಳಬೇಕಿದೆ. ಹಿಂದೂಗಳಿಗೆ ತಿಳಿಸಿ ಹೇಳಬೇಕಿದೆ ಮತ್ತು ಇದರ ವಿರುದ್ಧ ಹೋರಾಡಬೇಕಿದೆ, ಎಂದು ದೆಹಲಿಯ ಅರ್ಥಶಾಸ್ತ್ರಜ್ಞರಾದ ಋಷಿ ವಶಿಷ್ಠರವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 6 ನೇ ದಿನದಂದು ಕರೆ ನೀಡಿದರು.
(ಸೌಜನ್ಯ – Hindu Janajagruti Samiti)
ಅವರು ಮುಂದುವರಿದು,
1. ಯಾವುದೇ ರೀತಿಯ ಅಭಿಯಾನವನ್ನು ನಡೆಸಲು, ಸಂಘರ್ಷ ಮಾಡಲು ಹಣದ ಅವಶ್ಯಕತೆ ಇರುತ್ತದೆ. ಧನದ ಮಾಧ್ಯಮದಿಂದ ಸಂಘರ್ಷವನ್ನು ಆರಂಭಿಸಬಹುದು, ಅದನ್ನು ಬೆಂಬಲಿಸಬಹುದು. ಹಿಂದೂಗಳು `ಡಿಜಿಟಲ್’ ಅರ್ಥವ್ಯವಸ್ಥೆಯ ಅಧ್ಯಯನ ಮಾಡಿ ಅದನ್ನು ನಿರ್ಮಿಸಬೇಕಿದೆ.
2. ಭಾರತದಲ್ಲಿನ 2-3 ದೊಡ್ಡ ದೇವಸ್ಥಾನಗಳ ಅರ್ಥವ್ಯವಸ್ಥೆಯು ಭಾರತದ ಸಂಪೂರ್ಣ ರಾಷ್ಟ್ರೀಯ ಉತ್ಪನ್ನಕ್ಕಿಂತಲೂ ಹೆಚ್ಚಿದೆ. ಶೇ. 95 ರಷ್ಟು ಹಿಂದೂಗಳು ದೇವಸ್ಥಾನಗಳಿಗೆ ದಾನ ಮಾಡುತ್ತಾರೆ. ಅವರನ್ನು ಈ ಸಂಘರ್ಷದಲ್ಲಿ ಸಹಭಾಗಿಯಾಗಿಸಬಹುದು. ಅವರನ್ನು ಸಂಘಟಿಸಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಟ್ರಸ್ಟ್ ನ್ನು ಸ್ಥಾಪಿಸಿ ಇಂತಹ ಹಿಂದೂಗಳನ್ನು ಸಮಾನ ಅಂಶಗಳಲ್ಲಿ ಸಂಘಟಿಸಿದರೆ ಇಸ್ಲಾಮಿ ಷಡ್ಯಂತ್ರವನ್ನು ತಡೆಯಬಹುದು.
3. ಭಾರತದಲ್ಲಿನ ಮುಸಲ್ಮಾನರ ಸಂಖ್ಯೆಯು ಹೆಚ್ಚಿರುವುದಾಗಿ ಹೇಳಲಾಗುತ್ತದೆ. ಒಂದು ಊರಿನ ಜನಗಣತಿಗಾಗಿ ಸರಕಾರಿ ಅಧಿಕಾರಿಗಳು ಹೋಗುತ್ತಾರೆ. ಆಗ ಒಂದು ಮನೆ, ಒಬ್ಬ ಮುಸಲ್ಮಾನ ಪುರುಷನಿಗೆ ಮೂವರು ಹೆಂಡತಿಯರು, 10 ಮಕ್ಕಳನ್ನು ತೋರಿಸಲಾಗುತ್ತದೆ. ಇನ್ನೊಂದು ಮನೆಗೆ ಹೋದಾಗ ಅದೇ ಜನರನ್ನು ಕುಟುಂಬದಲ್ಲಿ ತೋರಿಸಲಾಗುತ್ತದೆ ಮತ್ತು ಆ ಸಂಖ್ಯೆಯ ಆಧಾರದಲ್ಲಿ ಸರಕಾರದಿಂದ ಅನುದಾನ, ಅನ್ನಧಾನ್ಯಗಳನ್ನು ಪಡೆಯಲಾಗುತ್ತದೆ. ಅದೇ ಧಾನ್ಯವನ್ನು ಆ ಊರಿನ ಹಿಂದೂಗಳಿಗೆ ಮುಸಲ್ಮಾನರು ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇದೂ ಕೂಡ ಅರ್ಥವ್ಯವಸ್ಥೆಯ ಸಂದರ್ಭದಲ್ಲಿನ ಒಂದು ಷಡ್ಯಂತ್ರವಾಗಿದೆ.
4. ಭಾರತದಲ್ಲಿರುವ ಎಲ್ಲ `ಮೆಟ್ರಿಮೋನಿಯಲ್’ ಸಂಕೇತಸ್ಥಳಗಳಲ್ಲಿ (ವಿವಾಹ ಬೆಸೆಯುವ ಸಂಕೇತಸ್ಥಳ) ಶೇ. 80 ರಷ್ಟು ಮಾಲಿಕತ್ವವು ಇಸ್ಲಾಮಿ ದೇಶಗಳ ಬಳಿಯಿದೆ. ಇವುಗಳ ಮಾಧ್ಯಮದಿಂದ ಲವ್ ಜಿಹಾದನ್ನು ಪ್ರೋತ್ಸಾಹಿಸಲಾಗುತ್ತದೆ. ಇದರಿಂದಾಗಿ ಹಿಂದೂಗಳು ತಮ್ಮದೇ `ಮೆಟ್ರಿಮೋನಿಯಲ್’ ಸಂಕೇತಸ್ಥಳಗಳನ್ನು ಆರಂಭಿಸಬೇಕು.
5. ಆರ್ಯ ಚಾಣಕ್ಯರು ಅರ್ಥವ್ಯವಸ್ಥೆಯ ಬಗ್ಗೆ 3 ಅಂಶಗಳನ್ನು ಹೇಳಿದ್ದಾರೆ – ಭಾವ, ಸ್ವಭಾವ ಮತ್ತು ಅಭಾವ. ಭಾವ ಅಂದರೆ ಜನ್ಮದಿಂದ ನಾವು ಹಿಂದೂಗಳಾಗಿದ್ದೇವೆ, ಸ್ವಭಾವ ಅಂದರೆ ಸಾಂಸ್ಕೃತಿಕ ದೃಷ್ಟಿಯಿಂದ ನಾವು ಸನಾತನಿ ಹಿಂದೂಗಳಾಗಿದ್ದೇವೆ; ಆದರೆ ನಮ್ಮಲ್ಲಿ ನಮ್ಮ ಅರ್ಥವ್ಯವಸ್ಥೆಯ ಅಭಾವವಿದೆ. ಭಾರತೀಯ ನಾಣ್ಯ ಚಲಾವಣೆಯ ಮೇಲೆ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಗುರುಗೋವಿಂದ ಸಿಂಹರ ಛಾಯಾಚಿತ್ರಗಳಿರಬೇಕು. ಅಲ್ಲಿರುವ ಮ. ಗಾಂಧಿಯವರ ಚಿತ್ರವೇ ಅಭಾವವಾಗಿದೆ.