ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ೩ ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಇವರು ಪ್ರಧಾನಿಯವರಿಗೆ ಭೇಟಿಗಾಗಿ ಆಹ್ವಾನಿಸಿದ್ದಾರೆ. ಈ ರೀತಿ ಭೇಟಿಗಾಗಿ ಅಮೆರಿಕದಿಂದ ಆಹ್ವಾನ ಪಡೆದ ಮೋದಿಯವರು ಮೂರನೇ ಭಾರತೀಯ ಪ್ರಧಾನಿಯಾಗಿದ್ದಾರೆ.
ಹಿಂದೆ ೧೯೬೩ ರಲ್ಲಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ೨೦೦೯ ರಲ್ಲಿ ಡಾ. ಮನಮೋಹನ್ ಸಿಂಗ್ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಪ್ರಧಾನಿ ಮೋದಿ ಅವರು ೩ ದಿನಗಳಲ್ಲಿ ೧೦ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಜೂನ್ ೨೧ ರಂದು ನ್ಯೂಯಾರ್ಕ್ ನಲ್ಲಿ ಯೋಗ ದಿನದ ಪ್ರಯುಕ್ತ ಯೋಗಾಸನ ಮಾಡಲಿದ್ದಾರೆ. ಈ ಪ್ರಯಾಣದಲ್ಲಿ ಭಾರತ ಮತ್ತು ಅಮೇರಿಕಾ ನಡುವೆ ರಕ್ಷಣೆ, ತಂತ್ರಜ್ಞಾನ, ಕಾರ್ಯತಂತ್ರ ಮತ್ತು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಪ್ರಧಾನಿ ಮೋದಿ ಅವರು ಅಮೆರಿಕಾದ ೨೦ ಸಂಸ್ಥೆಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ.
ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಸಂಬಂಧಗಳನ್ನು ಗಾಢವಾಗಿಸಲು ನಾವು ಬಯಸುತ್ತೇವೆ. ಎಂದು ಅಮೆರಿಕಾಗೆ ತೆರಳುವ ಮುನ್ನ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.