ಬಂಗಾಳದಲ್ಲಿ ಪಂಚಾಯತ ಚುನಾವಣೆಗಾಗಿ ಕೇಂದ್ರೀಯ ಪಡೆಯ ನಿಯೋಜನೆ ಸೂಕ್ತ ! – ಸರ್ವೋಚ್ಚ ನ್ಯಾಯಾಲಯದ ನಿರ್ಣಯ

ಕೋಲಕಾತಾ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಬೆಂಬಲ

ಮಮತಾ ಬ್ಯಾನರ್ಜಿ

ನವದೆಹಲಿ – ಬಂಗಾಳ ರಾಜ್ಯದಲ್ಲಿ ಮುಂದಿನ ತಿಂಗಳಿನಲ್ಲಿ ನಡೆಯುವ ಪಂಚಾಯತ ಚುನಾವಣೆಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯಬಾರದು ಎಂದು ಕೋಲಕಾತಾ ಉಚ್ಚ ನ್ಯಾಯಾಲಯವು ರಾಜ್ಯದ ಚುನಾವಣಾ ಆಯೋಗಕ್ಕೆ, ಸುರಕ್ಷತೆಗಾಗಿ ಕೇಂದ್ರೀಯ ಪಡೆಯನ್ನು ನಿಯೋಜಿಸಬೇಕು ಎಂದು ಆದೇಶ ನೀಡಿದೆ. ಈ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿ `ಉಚ್ಚ ನ್ಯಾಯಾಲಯ ತೀರ್ಪು ನೀಡಿರುವ ಹಿಂದಿರುವ ಕಾರಣ ಚುನಾವಣೆಯನ್ನು ಮುಕ್ತ ವಾತಾವರಣದಲ್ಲಿ ಮತ್ತು ನಿಷ್ಪಕ್ಷವಾಗಿ ನಡೆಸುವ ಉದ್ದೇಶವಿದೆ. ಒಂದೇ ದಿನ ರಾಜ್ಯದ ಪಂಚಾಯತಿ ಚುನಾವಣೆಗಳಿರುವುದರಿಂದ ಈ ರೀತಿ ಮಾಡುವುದು ಆವಶ್ಯಕವಾಗಿದೆ’ ಎಂದು ಹೇಳಿದೆ.

ಬಂಗಾಳ ರಾಜ್ಯದಲ್ಲಿ ಜುಲೈ 8 ರಂದು ಪಂಚಾಯತ ಚುನಾವಣೆಗಳು ನಡೆಯಲಿವೆ. ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಎರಡು ಗುಂಪುಗಳ ನಡುವೆ ಕೆಲವು ದಿನಗಳ ಹಿಂದೆ 100 ಸ್ಥಳಗಳಲ್ಲಿ ಹಿಂಸಾಚಾರಗಳು ನಡೆದಿದ್ದವು. ಆ ಸಮಯದಲ್ಲಿ ಗುಂಪಿನವರು ಪರಸ್ಪರರ ಮೇಲೆ ಬಾಂಬ್ ಎಸೆದಿದ್ದರು.

ಸಂಪಾದಕೀಯ ನಿಲುವು

ಪಂಚಾಯತ ಮಟ್ಟದ ಚುನಾವಣೆಗಾಗಿ ಕೇಂದ್ರೀಯ ಪಡೆಯನ್ನು ನಿಯೋಜಿಸಬೇಕಾಗುತ್ತಿದೆ. ಇದನ್ನು ಗಮನಿಸಿದರೆ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಕೆಳಮಟ್ಟಕ್ಕೆ ತಲುಪಿದೆಯೆನ್ನುವುದು ಸಿದ್ಧವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರವು ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !