ವಿದ್ಯಾಧಿರಾಜ ಸಭಾಗೃಹ, ಜೂನ್ 20 (ವಾರ್ತೆ) – 2022 ರಲ್ಲಿ ಶ್ರೀರಾಮನವಮಿಯ ದಿನ ನವ ದೆಹಲಿಯಲ್ಲಿ ಜಹಾಂಗಿರಪುರಿಯಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸುತ್ತಾ ಕಲ್ಲುತೂರಾಟ ನಡೆಸಿದರು. ಈ ದಾಳಿ ಮಾಡುವವರು. ಗುಜರಿ ಅಂಗಡಿಯವರು ಬಾಂಗ್ಲಾದೇಶದ ನುಸುಳುಕೋರರಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅನ್ಸಾರ ಎಂಬ ಮುಸಲ್ಮಾನನನ್ನು ಬಂಧಿಸಿದ್ದಾರೆ. ಅನ್ಸಾರನ ಮೊಕದ್ದಮೆ ನಡೆಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿನ ೫ ಹೆಸರಾಂತ ನ್ಯಾಯವಾದಿಗಳು ಬೆಂಬಲಕ್ಕೆ ನಿಂತರು. ಈ ನ್ಯಾಯವಾದಿ ಒಂದು ಮೊಕದ್ದಮೆಯ ವಿಚಾರಣೆಗೆ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಿದ್ದರು, ಅಂತಹ ನ್ಯಾಯವಾದಿ ಒಬ್ಬ ಗುಜರಿ ಅಂಗಡಿ ಮುಸಲ್ಮಾನನ ಮೊಕದ್ದಮೆ ನಡೆಸುವುದಕ್ಕೆ ಹೇಗೆ ಸಿದ್ಧನಾದರು ? ಇದರ ಮಾಹಿತಿ ಪಡೆದಾಗ, ‘ಜಮಿಯತ್ ಉಲೇಮಾ-ಎ-ಹಿಂದ’ ಈ ಸಂಸ್ಥೆಯಿಂದ ಈ ನ್ಯಾಯವಾದಿಗಳಿಗೆ ಹಣ ನೀಡಿರುವುದು ತಿಳಿದು ಬಂದಿತು. ಪ್ರಯಾಗರಾಜದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯಲ್ಲಿ ೫೬ ಜನರು ಸಾವನ್ನಪ್ಪಿದರು. ಈ ಪ್ರಕರಣದಲ್ಲಿ ೩೦ ಮುಸಲ್ಮಾನರಿಗೆ ಶಿಕ್ಷೆ ವಿಧಿಸಲಾಯಿತು. ಇವರೆಲ್ಲರ ಮೊಕದ್ದಮೆ ಕೂಡ, ಜಮೀಯತ ಉಲೇಮ-ಎ-ಹಿಂದ ನಿಂದ ನಡೆಸಲಾಗಿತ್ತು. ಈ ಸಂಸ್ಥೆಯ ಬಳಿ ಈ ಹಣ ಹಲಾಲ್ ಉತ್ಪನ್ನದ ಖರೀದಿಯಿಂದ ಬರುತ್ತದೆ. ಕೂದಲು ಕತ್ತರಿಸುವುದು, ತರಕಾರಿ ಖರೀದಿಸುವುದು, ಇದಕ್ಕಾಗಿ ಹಿಂದೂಗಳು ಇತರ ಧರ್ಮದವರಿಗೆ ಹಣ ನೀಡುತ್ತಿದ್ದಾರೆ. ಆ ಹಣ ಜಮೀಯತ್ ಉಲೆಮಾ-ಎ-ಹಿಂದ ವರೆಗೆ ತಲುಪುತ್ತದೆ ಮತ್ತು ಇದೇ ಹಣ ಭಯೋತ್ಪಾದಕರ ಮೊಕದ್ದಮೆ ನಡೆಸಲು ಉಪಯೋಗಿಸಲಾಗುತ್ತದೆ. ಲವ್ ಜಿಹಾದ್ ದ ಆರೋಪಿಗಳನ್ನು ಬಿಡುಗಡೆಗೊಳಿಸುವುದಕ್ಕೆ ಇದೆ ಹಣದಿಂದ ನ್ಯಾಯವಾದಿಗಳ ಗುಂಪು ಸಿದ್ಧಗೊಳಿಸಲಾಗುತ್ತದೆ. ಈ ರೀತಿ ಹಿಂದೂಗಳ ವಿರುದ್ಧ ಅರ್ಥವ್ಯವಸ್ಥೆ ನಿರ್ಮಾಣವಾಗಿದೆ. ಈ ರೀತಿ ರಾಷ್ಟ್ರ ಮತ್ತು ಹಿಂದೂ ಧರ್ಮ ವಿರೋಧಿ ಶಕ್ತಿಯ ಬಲೆ ಸಂಪೂರ್ಣ ದೇಶಾದ್ಯಂತ ಪಸರಿಸಿದೆ. ಈ ಸಂಕಷ್ಟದ ವಿರುದ್ಧ ಹೋರಾಡಲು ಹಿಂದೂಗಳು ಜಾತಿಭೇದ ಮರೆತು ಒಟ್ಟಾಗಿ ಸೇರಬೇಕು, ಎಂದು ಹಿಂದೂ ಈಕೋಸಿಸ್ಟಮ್ ನ ಸಂಸ್ಥಾಪಕ ಶ್ರೀ. ಕಪಿಲ ಮಿಶ್ರಾ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೆಯ ದಿನದ ಭಾಗದಲ್ಲಿ ಹೇಳಿದರು.
(ಸೌಜನ್ಯ – Hindu Janajagruti Samiti)