‘ಸಲಿಂಗಕಾಮ’ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಮೂಲಕ ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಷಡ್ಯಂತ್ರ ! – ಪೂ. (ಡಾ.) ಶಿವನಾರಾಯಣ ಸೇನ, ಉಪಸಚಿವ, ಶಾಸ್ತ್ರ-ಧರ್ಮ ಪ್ರಚಾರ ಸಭೆ, ಬಂಗಾಳ

ಪೂ. (ಡಾ.) ಶಿವನಾರಾಯಣ ಸೇನ, ಉಪಸಚಿವ, ಶಾಸ್ತ್ರ-ಧರ್ಮ ಪ್ರಚಾರ ಸಭೆ, ಬಂಗಾಳ

ಎಲ್ಲಿ ‘ರಾಮ’ ಇರುತ್ತಾನೆ ಅಲ್ಲಿ ‘ಕಾಮ’ ಇರುವುದಿಲ್ಲ ಮತ್ತು ಎಲ್ಲಿ ‘ಕಾಮ’ ಇರುತ್ತದೆ ಅಲ್ಲಿ ‘ರಾಮ’ ಇರುವುದಿಲ್ಲ. ಪಾಶ್ಚಾತ್ಯದಲ್ಲಿ ಮೋಕ್ಷದ ಪರಿಕಲ್ಪನೆ ಎಲ್ಲಿಯೂ ಇಲ್ಲ. ಕಾಮ ಎಂದರೆ ಮಾಯೆ ಮತ್ತು ಮಾಯೆ ಜೀವಕ್ಕೆ ಬಹಳ ದುಃಖ ನೀಡುತ್ತದೆ. ‘ಸಲಿಂಗ ಕಾಮ’ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಇದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದೆ. ಇದರಿಂದ ಭಾರತದಲ್ಲಿನ ಕುಟುಂಬ ವ್ಯವಸ್ಥೆ ನಾಶವಾಗುತ್ತಿದೆ. ಕಲಿಯುಗದ ಪ್ರಭಾವದಿಂದ ಇಂತಹ ಘಟನೆಗಳು ಹೆಚ್ಚುತ್ತಿವೆ. ಕಲಿಯ ಪ್ರಭಾವದಿಂದ ‘ಇಷ್ಟ’ ಇದು ‘ಅನಿಷ್ಟ’ ಅನಿಸುತ್ತದೆ ಮತ್ತು ‘ಅನಿಷ್ಟ’ ಇದು ‘ಇಷ್ಟ’ ಅನಿಸುತ್ತದೆ. ‘ಸಲಿಂಗಕಾಮ’ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಇದರ ಬಗ್ಗೆ ಕೂಡ ಅದೇ ನಡೆಯುತ್ತಿದೆ. ಬೆಂಕಿಗೆ ತುಪ್ಪ ಹಾಕಿದರೆ, ಹೇಗೆ ಅಗ್ನಿ ಹೆಚ್ಚು ಪ್ರಜ್ವಲಿಸುತ್ತದೆ, ಅದೇ ರೀತಿ ಭೋಗಗಳು ತೃಪ್ತಿಯಾಗದೆ ಇನ್ನೂ ಹೆಚ್ಚುತ್ತವೆ. ನಮ್ಮ ಸಂಸ್ಕೃತಿ ಭೋಗವಾದಿಯಲ್ಲ, ಅದು ನಿವೃತ್ತಿ ಪೋಷಕವಾಗಿದೆ. ಭಾರತೀಯ ವರ್ಣ ವ್ಯವಸ್ಥೆ ಕೂಡ ನಿವೃತ್ತಿ ಪೋಷಕವಾಗಿದೆ. ಅಲ್ಲಾವುದ್ದೀನ್ ಖಿಲಜಿ, ಇವನ ಕೈಗೆ ಸಿಗಬಾರದೆಂದು ರಾಣಿ ಪದ್ಮಿನಿ ಸಹಿತ ೧೬ ಸಾವಿರ ಮಹಿಳೆಯರು ಅಗ್ನಿ ಪ್ರವೇಶ ಮಾಡಿದರು, ಹೀಗೆ ಭಾರತದ ಮಹಾನ್ ಸಂಸ್ಕೃತಿಯಾಗಿದೆ. ‘ಸಲಿಂಗಕಾಮ’ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಷಡ್ಯಂತ್ರವಾಗಿದೆ ಎಂದು ಬಂಗಾಳದ ಶಾಸ್ತ್ರ ಧರ್ಮ ಪ್ರಚಾರ ಸಭೆಯ ಉಪಸಚಿವ ಪೂ. (ಡಾ.) ಶಿವನಾರಾಯಣ ಸೇನ್ ಇವರು ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೆಯ ದಿನ(೧೯.೬.೨೦೨೪ ರಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.