ರಾಮನಾಥ ದೇವಸ್ಥಾನ – ಡಿಸೆಂಬರ್ ೨೫ ಮತ್ತು ೨೬, ೨೦೨೧ ರಲ್ಲಿ ರಾಯಪುರದಲ್ಲಿ ಧರ್ಮ ಸಂಸತ್ತಿನ ಆಯೋಜನೆ ಮಾಡಲಾಗಿದ್ದು. ಆ ಧರ್ಮಸಂಸತ್ತಿನಲ್ಲಿ ಗಾಂಧೀಜಿಯ ಬಗ್ಗೆ ಕಥಿತ ವಿವಾದಿತ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕಾಲಿಚರಣ ಮಹಾರಾಜ ಇವರನ್ನು ಛತ್ತೀಸ್ಗಡ ಪೋಲೀಸರು ಬಂಧಿಸಿದರು ಮತ್ತು ಅವರ ವಿರುದ್ಧ ರಾಷ್ಟ್ರಧ್ರೋಹದ ಆರೋಪ ದಾಖಲಿಸಿದರು. ಇದರ ವಿರುದ್ಧ ಸಾಧು ಸಂತರು ಮತ್ತು ಹಿಂದುತ್ವನಿಷ್ಠ ಸಂಘಟನೆಯಿಂದ ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಭೂಪೇಶ ಬಘೆಲ ಇವರ ತಂದೆ ನಂದಕುಮಾರ ಬಘೆಲ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ; ಆದರೆ ಗಾಂಧೀಜಿಯವರ ಬಗ್ಗೆ ಕಥಿತ ಟೀಕಿಸಿರುವ ಪ್ರಕರಣದಲ್ಲಿ ಕಾಲಿಚರಣ ಮಹಾರಾಜರ ಮೇಲೆ ಕ್ರಮ ಕೈಗೊಳ್ಳಲಾಯಿತು. ಇದರಿಂದ ಛತ್ತಿಸ್ಗಡ್ ಸರಕಾರಕ್ಕೆ ಪ್ರಭು ಶ್ರೀ ರಾಮನಗಿಂತಲೂ ಗಾಂಧೀಜಿ ಹೆಚ್ಚು ಮಹತ್ವದವರು ಎಂದು ಅನಿಸುತ್ತದೆ. ರಾಜ್ಯದಲ್ಲಿ ಹಿಂದೂ ದೇವತೆಗಳ ವಿಡಂಬನೆಯಾದಾಗ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದೆ ಸರಕಾ ಮೊದಲು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಧಾರ್ಮಿಕ ಸಂತರು ಮತ್ತು ಹಿಂದುತ್ವನಿಷ್ಠ ನಾಯಕರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ನಂದಕುಮಾರ ಬಘೆಲ ಇವರು ಬ್ರಾಹ್ಮಣರ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು. ಆಗ ಹಿಂದುತ್ವನಿಷ್ಠರು ರಾಜ್ಯ ಮಟ್ಟದಲ್ಲಿ ತೀವ್ರ ಆಂದೋಲನ ನಡೆಸಿದರು. ಆಗ ಒತ್ತಡದಲ್ಲಿ ನಂದಕುಮಾರ ಬಘೆಲ ಇವರನ್ನು ೩ ದಿನಕ್ಕಾಗಿ ಬಂಧನದಲ್ಲಿ ಇರಿಸಲಾಯಿತು, ಎಂದು ರಾಯಪುರ(ಛತ್ತಿಸ್ಗಢ) ಇಲ್ಲಿಯ ‘ಶ್ರೀ ನೀಲಕಂಠ ಸೇವಾ ಸಂಸ್ಥಾನ’ದ ಸಂಸ್ಥಾಪಕ ಪಂ. ನೀಲಕಂಠ ತ್ರಿಪಾಠಿ ಮಹಾರಾಜರು ಅಸಮಾಧಾನ ವ್ಯಕ್ತಪಡಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೆಯ ದಿನ (೧೯.೬.೨೦೨೩ ರಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.