ಬೌದ್ಧಿಕ ಯುದ್ಧ ಹೋರಾಡುವದಕ್ಕಾಗಿ ಆಚಾರ್ಯ ಚಾಣಕ್ಯರ ಬುದ್ಧಿವಂತಿಕೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ನಮ್ಮಲ್ಲಿ ಇರುವುದು ಅವಶ್ಯಕ ! – ಸಂತೋಷ್ ಕೆಂಚಂಬಾ, ಸಂಸ್ಥಾಪಕ ಅಧ್ಯಕ್ಷ, ರಾಷ್ಟ್ರ ಧರ್ಮ ಸಂಘಟನೆ

ರಾಮನಾಥಿ – ದೇಶದಲ್ಲಿ ಸುಳ್ಳು ಕಥೆಗಳನ್ನು (ನೆರೆಟಿವ್ಸ್) ರಚಿಸಿ ಅದನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಮೂಲಕ ವೈಚಾರಿಕ ದಾಳಿ ನಡೆಯುತ್ತಿದೆ. ಇದು ‘ಸೈಬರ್ ಜಿಹಾದ್’ ಆಗಿದೆ. ಈ ‘ಕಥಾ ಯುದ್ಧ’ ಬರೆಹರಿಸುವುದಕ್ಕಾಗಿ ಯೋಗ್ಯ ಕಥೆ ಸಿದ್ಧಪಡಿಸಿ ಅದರ ಪ್ರಸಾರ ಮಾಡಬೇಕಾಗುವುದು. ಇದು ಬೌದ್ಧಿಕ ಯುದ್ಧ ಹೋರಾಡುವುದಕ್ಕಾಗಿ ಆಚಾರ್ಯ ಚಾಣಕ್ಯರ ಬುದ್ಧಿವಂತಿಕೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ನಮ್ಮಲ್ಲಿ ಇರುವುದು ಅವಶ್ಯಕವಾಗಿದೆ, ಎಂದು ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಸಂತೋಷ ಕೆಂಚಂಬಾ ಇವರು ವೈಶ್ವಿಕ ಅಖಿಲ ಭಾರತೀಯ ಹಿಂದೂ ಮಹೋತ್ಸವದಲ್ಲಿ ಮಾತನಾಡುವಾಗ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಎರಡನೆಯ ದಿನದ ಮೂರನೆಯ ಸತ್ರದಲ್ಲಿ ಮಾತನಾಡುತ್ತಿದ್ದರು. ಅವರು ಮಾತು ಮುಂದುವರಿಸಿ, ಭಾರತೀಯ ಸಂಸ್ಕೃತಿಯ ಪ್ರಸಾರ ಯೋಗ್ಯ ರೀತಿಯಲ್ಲಿ ಆಗಬೇಕು. ಹಿಂದು ಸಂಸ್ಕೃತಿಯ ಪ್ರಸಾರ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭಾರತದಲ್ಲಿನ ಗುರುಶಿಷ್ಯ ಪರಂಪರೆಯ ಅಂತರ್ಗತ ಯೋಗ್ಯ ಕಥೆಯ ಮಾಧ್ಯಮದಿಂದ ಹಿಂದೂ ಸಂಸ್ಕೃತಿಯ ಪ್ರಸಾರ ಆಗುತ್ತಿತ್ತು. ಈ ಪರಂಪರೆಗೆ ಪುನರುಜ್ಜೀವನ ನೀಡಿ ಕಥೆಯ ಮಾಧ್ಯಮದಿಂದ ಹಿಂದೂ ಸಂಸ್ಕೃತಿಯ ಪ್ರಸಾರ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

(ಸೌಜನ್ಯ – Hindu Janajagruti Samiti)