ಸಲಿಂಗಕಾಮಿಗೆ ಒಪ್ಪಿಗೆ ನೀಡಿದರೆ ಭಾರತದಲ್ಲಿನ ಅನೇಕ ಕಾನೂನಿನ ಮೇಲೆ ದುಷ್ಪರಿಣಾಮ ಆಗುವುದು ! – ನ್ಯಾಯವಾದಿ ಮಕರಂದ ಆಡಕರ, ಅಧ್ಯಕ್ಷ, ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ನವದೆಹಲಿ

ನ್ಯಾಯವಾದಿ ಮಕರಂದ ಆಡಕರ, ಅಧ್ಯಕ್ಷ, ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ನವದೆಹಲಿ

ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗಕಾಮಿಗೆ ಸಂಬಂಧಿಸಿದ ಕಾನೂನರೀತ್ಯಾ ಮಾನ್ಯತೆ ನೀಡುವುದಕ್ಕಾಗಿ ೧೫ ಅರ್ಜಿಗಳು ದಾಖಲಾಗಿವೆ. ಈ ಅರ್ಜಿಯಲ್ಲಿ ಹಿಂದೂ ವಿವಾಹ ಕಾನೂನು ರದ್ದುಪಡಿಸುವುದು, ಇಬ್ಬರೂ ಪುರುಷರು ಅಥವಾ ಇಬ್ಬರು ಸ್ತ್ರೀಯರು ಪರಸ್ಪರ ನಡೆಸಿರುವ ಸಲಿಂಗಕಾಮ ವಿವಾಹ ಕಾನೂನು ರೀತಿಯಲ್ಲಿ ಮಾನ್ಯತೆ ನೀಡುವುದು ಈ ರೀತಿಯ ಬೇಡಿಕೆ ಸಲ್ಲಿಸಿದ್ದಾರೆ. ಅನೇಕ ಸಮಸ್ಯೆಗಳಿಂದ ದೇಶ ಬಳಲುತ್ತಿರುವಾಗ ಸಲಿಂಗ ಕಾಮಕ್ಕೆ ಮಾನ್ಯತೆ ನೀಡಬೇಕು ಅಥವಾ ಬೇಡವೋ ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ೧೫ ದಿನ ವಿಚಾರಣೆ ನಡೆಯಿತು. ದೇಶದಲ್ಲಿ ಸಲಿಂಗಕಾಮ ಮತ್ತು ಅದರ ವಿವಾಹಕ್ಕೆ ಮಾನ್ಯತೆ ನೀಡಿದರೆ ಹಿಂದೂ ವಿವಾಹ ಕಾನೂನು ಏನು ಮಾಡುವಿರಿ ? ಜೀವನಾಂಶ ಯಾರಿಗೆ ನೀಡುವಿರಿ ? ಮಹಿಳೆಯರಿಗೆ ರಕ್ಷಣೆ ನೀಡುವ ಕೌಟುಂಬಿಕ ದೌರ್ಜನ್ಯ ನಿಷೇಧ ಕಾನೂನು ಏನು ಮಾಡುವಿರಿ ? ಪತ್ನಿಯ ಮೇಲೆ ಅತ್ಯಾಚಾರ ಆದರೆ ಪತ್ನಿ ಎಂದು ಯಾರಿಗೆ ನ್ಯಾಯ ಸಿಗುವುದು ? ಹೀಗೆ ಅನೇಕ ಪ್ರಶ್ನೆಗಳಿವೆ. ಆದ್ದರಿಂದ ಸಲಿಂಗ ಕಾಮಕ್ಕೆ ಮಾನ್ಯತೆ ನೀಡಿದರೆ ಈ ರೀತಿ ಭಾರತದಲ್ಲಿನ ಅನೇಕ ಕಾನೂನಿಗೆ ಧಕ್ಕೆ ಬರುಲಿದೆ. ‘ಸಲಿಂಗ ಕಾಮಕ್ಕೆ ಮಾನ್ಯತೆ ದೊರೆಯದಿದ್ದರೇ ದೇಶಕ್ಕೆ ದೊಡ್ಡ ಹಾನಿ ಆಗುವುದು, ಎಂದು ನ್ಯಾಯಾಲಯಕ್ಕೆ ಅನಿಸುತ್ತಿದ್ದರೆ ನ್ಯಾಯಾಲಯವು ಹಾಗೆ ಸಂಸತ್ತಿಗೆ ಹೇಳಬಹುದು; ಆದರೆ ಈ ರೀತಿಯ ಕಾನೂನು ರೂಪಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಸಲಿಂಗ ಕಾಮ ಇದು ನಮ್ಮ ಸಂಸ್ಕೃತಿ ಇಲ್ಲದಿರುವ ಪ್ರತಿಜ್ಞಾಪತ್ರ ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗಿದೆ. ಇತರ ದೇಶದಲ್ಲಿ ಏನು ನಡೆಯುತ್ತದೆ, ಅದಕ್ಕಿಂತಲೂ ಭಾರತೀಯ ಸಂಸ್ಕೃತಿಗೆ ಮಾನ್ಯತೆ ನೀಡುತ್ತಿಲ್ಲ. ಇದನ್ನು ನಾವು ತಿಳಿದುಕೊಳ್ಳಬೇಕು, ಎಂದು ನವದೆಹಲಿಯ ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ ಮಕರಂದ ಆಡಕರ ಇವರು ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೆಯ ದಿನ ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.

ಈ ಸಮಯದಲ್ಲಿ ವೇದಿಕೆಯ ಮೇಲೆ ವ್ಯಾಪಾರ ಮಂಡಳದ ಹಿರಿಯ ಉಪಾಧ್ಯಕ್ಷ ಮತ್ತು ವಾರಣಾಸಿ ವ್ಯಾಪಾರ ಮಂಡಲದ ಅಧ್ಯಕ್ಷ ಅಜಿತ ಸಿಂಹ ಬಗ್ಗಾ, ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ಜಾರ್ಖಂಡಿನ ಪೂ. ಪ್ರದೀಪ ಖೆಮಕಾ ಮತ್ತು ಕಛಾರ್ (ಅಸ್ಸಾಂ) ಇಲ್ಲಿಯ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ನ್ಯಾಯವಾದಿ ರಾಜೀವನಾಥ ಇವರು ಉಪಸ್ಥಿತರಿದ್ದರು.