ಮಹಾರಾಷ್ಟ್ರದ ಒಂದು ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ನಾಮಕರಣ

ಮುಂಬಯಿ- ಇಲ್ಲಿಯ ಮೀರಾ-ಭಾಯಿಂದರ (ಪಶ್ಚಿಮ) ನಗರದ ಉತ್ತನ-ಚೌಕ ಪರಿಸದರ ಬಸ್ ನಿಲ್ದಾಣಕ್ಕೆ ಪಾಲಿಕೆಯು `ಬಾಂಗ್ಲಾದೇಶ’ ಎಂದು ನಾಮಕರಣ ಮಾಡಿದೆ. ಮೊದಲು ಹೊರರಾಜ್ಯದಿಂದ ವಿಶೇಷವಾಗಿ ಬಂಗಾಲದಿಂದ ಮೀನುಗಾರಿಕೆಗಾಗಿ ಬಂದಿದ್ದ ನಿರಾಶ್ರಿತ ನಾಗರಿಕರು ಇಲ್ಲಿ ವಾಸಿಸುತ್ತಿದ್ದರು. ಇದರಿಂದ ಈ ಪರಿಸರಕ್ಕೆ `ಬಾಂಗ್ಲಾದೇಶ’ ಎಂದು ಉಪನಾಮದಿಂದ ಕರೆಯಲಾಗುತ್ತಿತ್ತು. ಆದರೆ ಈಗ ಪಾಲಿಕೆಯು ಸಾರ್ವಜನಿಕ ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ಅಧಿಕೃತ ಹೆಸರನ್ನು ನೀಡಿದೆ. (ವರ್ಷಗಟ್ಟಲೆ ಇಂತಹ ಅನಧಿಕೃತ ವಸತಿಗಳ ಮೇಲೆ ಕ್ರಮ ಕೈಕೊಳ್ಳದೇ ಅವರಿಗೆ ಅಧಿಕೃತಗೊಳಿಸಿ ಬಸ್ ನಿಲ್ದಾಣವನ್ನೂ ಅವರದೇ ಹೆಸರಿನಲ್ಲಿ ಮಾಡುವ ಪಾಲಿಕೆಯ ಜನತಾದ್ರೋಹಿ ಮತ್ತು ರಾಷ್ಟ್ರಘಾತಕ ಅಧಿಕಾರಿಗಳು -ಸಂಪಾದಕರು) ಇದರಿಂದ ನಾಗರಿಕರು ಆಕ್ರೋಶಗೊಂಡಿದ್ದಾರೆ. `ಆಡಳಿತಾಧಿಕಾರಿಗಳು ಆದಷ್ಟು ಬೇಗನೆ ಇದನ್ನು ಪರಿಗಣಿಸಿ ಹೆಸರನ್ನು ಬದಲಾಯಿಸಬೇಕು’ ಎಂದು ಸ್ಥಳೀಯ ನಾಗರಿಕರು ಕೋರಿದ್ದಾರೆ. (ನಾಗರಿಕರೇ, ಬಸ್ ನಿಲ್ದಾಣದ ಹೆಸರನ್ನು ಬದಲಾಯಿಸುವವರೆಗೆ ಆಡಳಿತಾಧಿಕಾರಿಗಳ ಬಳಿ ಈ ವಿಷಯವನ್ನು ಬೆಂಬತ್ತಿರಿ. – ಸಂಪಾದಕರು)

1. ಭಾಯಿಂದರ ಪಶ್ಚಿಮಕ್ಕೆ ಉತ್ತನ ಇದು ಸಮುದ್ರ ದಡವನ್ನು ಹೊಂದಿಕೊಂಡಿರುವ ಪರಿಸರವಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ನಾವಿಕರು ಬೇಕಾಗಿದ್ದರು. ಬಂಗಾಲದಿಂದ ಮೀನುಗಾರಿಕೆ ಮಾಡುವವರು ದೊಡ್ಡ ಪ್ರಮಾಣದಲ್ಲಿ ಬಂದು ಇಲ್ಲಿ ಅವರ ವಸತಿಯನ್ನು ನಿರ್ಮಿಸಿಕೊಂಡರು. ಅವರ ಭಾಷೆ ಬಂಗಾಲಿಯಾಗಿದ್ದರಿಂದ ಈ ಸ್ಥಳಕ್ಕೆ `ಬಾಂಗ್ಲಾದೇಶ ವಸತಿ’ ಎಂದು ಉಪನಾಮವನ್ನು ನೀಡಲಾಗಿತ್ತು.

2. ಇಂದಿರಾ ಗಾಂಧಿಯವರ ಮುಂದಾಳತ್ವದಿಂದ `ಬಾಂಗ್ಲಾದೇಶ’ದ ನಿರ್ಮಾಣವಾದ ಬಳಿಕ ಈ ವಸಾಹತುವಿಗೆ `ಇಂದಿರಾನಗರ’ ಹೆಸರನ್ನು ಇಡಲಾಗಿತ್ತು. ಆದರೆ ಇಲ್ಲಿಯ ನಾಗರಿಕರ ಆಧಾರಕಾರ್ಡ, ವಿದ್ಯುತ್ ಬಿಲ್‌ ಮತ್ತು ಪುರಸಭೆಯ ಭೂಮಿಗೆ `ಬಾಂಗ್ಲಾದೇಶ’ ಎಂದೇ ಹೆಸರನ್ನು ಕೊಡಲಾಗಿದೆ ಮತ್ತು ಅದು ಪ್ರಚಲಿತವಾಯಿತು.

ಸಂಪಾದಕೀಯ ನಿಲುವು

  • ಇಂದು ಕೇವಲ ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ಹೆಸರಿಟ್ಟವರು ನಾಳೆ ಯಾವುದಾದರೂ ಉಪನಗರಕ್ಕೇ ಈ ರೀತಿ ನಾಮಕರಣ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ?
  • ಪರಿಸರದಲ್ಲಿರುವ ನಾಗರಿಕರು ನಿಜವಾಗಿಯೂ ಬಂಗಾಲದ ನಾಗರಿಕರೋ ಅಥವಾ ಬಾಂಗ್ಲಾದೇಶ ನುಸುಳುಕೋರರಾಗಿದ್ದಾರೆಯೇ ಎಂದು ಯಾರು ದೃಢಪಡಿಸುವರು ? ಮೀರಾ-ಭಾಯಿಂದರ ಮಹಾನಗರಪಾಲಿಕೆಯ ಅಸ್ಮಿತೆಹೀನ ಕಾರುಬಾರು.