ರೈಲು ಅಪಘಾತಗಳ ನಿಯಂತ್ರಣ ಯಾವಾಗ ?

ಕೆಲವು ದಿನಗಳ ಹಿಂದೆ ದೇಶವನ್ನು ನಡುಗಿಸುವ ಬಾಲಾಸೊರ ರೈಲು ದುರಂತ ಘಟಿಸಿತು. ಈ ದುರಂತದಲ್ಲಿ ಇದುವರೆಗೆ ೨೮೮ ಜನರು ಸಾವನ್ನಪ್ಪಿದ್ದಾರೆ ಹಾಗೂ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೋರಮಂಡಲ ಎಕ್ಸ್‌ಪ್ರೆಸ್ಸ್, ಗೂಡ್ಸ್ (ಸರಕು ಸಾಗಾಟದ ರೈಲು) ಹಾಗೂ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಈ ೩ ರೈಲುಗಳ ಅಪಘಾತವಾಯಿತು. ಪ್ರಾಥಮಿಕ ವಿಚಾರಣೆಗನುಸಾರ ಒಡಿಶಾದಲ್ಲಿನ ಬಹಾನಗಾ ರೈಲು ನಿಲ್ದಾಣದ ಸಮೀಪ ಒಂದು ಹಳಿಯ ಮೇಲೆ ಗೂಡ್ಸ್‌ರೈಲು ನಿಂತಿತ್ತು. ಆಗ ಇನ್ನೊಂದು ಹಳಿಯಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ ಕೋಲಾಕಾತಾದ ಕಡೆಗೆ ಹೋಗುತ್ತಿತ್ತು. ಅದೇ ಸಂದರ್ಭದಲ್ಲಿ ಮೂರನೇ ಹಳಿಯಲ್ಲಿ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು. ಆಗ ಕೋರಮಂಡಲ ಎಕ್ಸ್‌ಪ್ರೆಸ್ ಗೂಡ್ಸ್‌ರೈಲು ಇರುವ ಹಳಿಗೆ ತಿರುಗಿತು ಹಾಗೂ ಅದು ಅದೇ ಹಳಿಯಲ್ಲಿ ನಿಂತಿದ್ದ ಗೂಡ್ಸ್‌ರೈಲಿಗೆ ಡಿಕ್ಕಿ ಹೊಡೆಯಿತು. ಇದರಿಂದ ಎಕ್ಸ್‌ಪ್ರೆಸ್‌ನ ೧೫ ಡಬ್ಬಗಳು ಹಳಿ ತಪ್ಪಿದವು. ಕೆಲವು ಬೋಗಿಗಳು ಗೂಡ್ಸ್‌ರೈಲಿನ ಮೇಲೆ ಹತ್ತಿದವು. ೪ ಬೋಗಿಗಳು ಹಳಿತಪ್ಪಿ ಇನ್ನೊಂದು ಹಳಿಯ ಮೇಲಿಂದ ಹೋಗುತ್ತಿದ್ದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದವು.ಅದರಿಂದಾಗಿ ಆ ಎಕ್ಸ್‌ಪ್ರೆಸ್‌ನ ೩ ಬೋಗಿಗಳು ಹಳಿತಪ್ಪಿದವು. ಈ ವಿಚಿತ್ರ ಅಪಘಾತದ ತೀವ್ರತೆ ಎಷ್ಟು ಭಯಂಕರವಾಗಿತ್ತೆಂದರೆ, ಒಡೆದ ರೈಲು ಹಳಿಗಳು ರೈಲುಗಾಡಿಯ ಬೋಗಿಯ ಕೆಳಗಿನ ಭಾಗವನ್ನು ಸೀಳಿಕೊಂಡು ರೈಲಿನ ಮೇಲ್ಛಾವಣಿಗೆ ಸಿಲುಕಿತ್ತು. ಮೂರೂ ರೈಲುಗಳು ಪರಸ್ಪರ ಅಪ್ಪಳಿಸಿದಾಗ ಪ್ರವಾಸಿಗಳ ಚೀರಾಟದಿಂದ ಪರಿಸರ ನಡುಗಿಹೋಗಿತ್ತು; ಆದರೆ ಅದೇ ಕ್ಷಣದಲ್ಲಿ ಸ್ಥಳೀಯರು ಮುಂದಾಳತ್ವ ವಹಿಸಿ ಪ್ರಯಾಣಿಕರಿಗೆ ನೆರವು ನೀಡಲು ಧಾವಿಸಿ ಬಂದರು. ಒಡಿಶಾ ರಾಜ್ಯ ಹಾಗೂ ಕೇಂದ್ರ ಸರಕಾರ ಒಟ್ಟಾಗಿ ಪ್ರಯತ್ನಿಸಿ ತಕ್ಷಣ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಆರಂಭಿಸಿದವು. ಆದರೂ ೨೦೦ ಶವಗಳನ್ನು ಗುರುತಿಸಲು ಇನ್ನೂ ತನಕ ಸಾಧ್ಯವಾಗಿಲ್ಲ.

ತಂತ್ರಜ್ಞಾನ ಪ್ರಗತಿ ಹೊಂದಿದ್ದರೂ ಅಪಘಾತ ಹೇಗೆ ?

ಭಾರತದಲ್ಲಿ ರೈಲುಗಳ ಅಪಘಾತ ಹೊಸತೇನೂ ಅಲ್ಲ; ಆದರೆ ಇಂದಿನ ಪ್ರಗತ ತಂತ್ರಜ್ಞಾನದ ಯುಗದಲ್ಲಿಯೂ ರೈಲುಗಳು ಪರಸ್ಪರ ಅಪ್ಪಳಿಸಿ ಭೀಕರ ಅಪಘಾತವಾಗುವುದು ಆಶ್ಚರ್ಯಕರವಾಗಿದೆ. ರೈಲ್ವೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದಂತಹ ಮಾಜಿ ಅಧಿಕಾರಿಗಳು ಕೂಡ ಈ ವಿಷಯವನ್ನು ಒಪ್ಪುತ್ತಾರೆ. ೧೩ ವರ್ಷಗಳ ಹಿಂದೆ ‘ಎಂಟೀಕೊಲಿಜನ್ (ಒಂದೇ ಹಳಿಯಲ್ಲಿ ಎರಡು ಗಾಡಿಗಳು ಬಂದರೆ ಆಗ ಒಂದು ವ್ಯವಸ್ಥೆ ಕಾರ್ಯನಿರತವಾಗಿ ಇಂಜಿನ್‌ನಲ್ಲಿ ‘ಅಲಾರ್ಮ್ ಕೇಳಿಸಿ ಜಾಗರೂಕಗೊಳಿಸಲಾಗುತ್ತದೆ.) ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತ್ತು, ಆದರೆ ಅದಕ್ಕೇನಾಯಿತು ? ಅದೇ ರೀತಿ ‘ಎಂಟಿಕೊಲೈಡ್ ಸಿಸ್ಟಮ್ (ಘರ್ಷಣೆ ವಿರೋಧಿ ವ್ಯವಸ್ಥೆ) ಕೆಲವು ವರ್ಷಗಳ ಹಿಂದೆಯೆ ಅಸ್ತಿತ್ವಕ್ಕೆ ಬಂದಿದೆ. ಅದನ್ನು ಕೂಡ ಇದುವರೆಗೆ ಎಲ್ಲ ರೈಲುಗಳಲ್ಲಿ ಯಾಕೆ ಉಪಯೋಗಕ್ಕೆ ತಂದಿಲ್ಲ ? ಕೇವಲ ೨-೩ ತಿಂಗಳ ಹಿಂದೆಯಷ್ಟೇ ರೈಲುಮಂತ್ರಿ ಶ್ರೀ. ಅಶ್ವಿನಿ ವೈಷ್ಣವ ಇವರು ಭಾರತೀಯ ಅಭಿಯಂತರು ತಯಾರಿಸಿದ ಘರ್ಷಣೆವಿರೋಧಿ ವ್ಯವಸ್ಥೆಯನ್ನು ರೈಲ್ವೆಯ ಇಂಜಿನ್‌ನಲ್ಲಿ ಕುಳಿತು ನಿರೀಕ್ಷಣೆ ಮಾಡಿದ್ದರು ಹಾಗೂ ಭಾರತೀಯ ಅಭಿಯಂತರನ್ನು ಸಹ ಅಭಿನಂದಿಸಿದ್ದರು; ಆದರೆ ಆ ವ್ಯವಸ್ಥೆಯನ್ನು ಭಾರತೀಯ ರೈಲ್ವೆಯಲ್ಲಿ ಯಾವಾಗ ಅಳವಡಿಲಾಗುವುದು ? ಎಂಬುದು ಪ್ರಶ್ನೆಯಾಗಿದೆ, ಅಂದರೆ ಸದ್ಯ ಅಪಘಾತವಿರೋಧಿ ಅನೇಕ ವ್ಯವಸ್ಥೆಗಳು ರೈಲ್ವೆಯಲ್ಲಿ ಉಪಲಬ್ಧವಿದೆ; ಆದರೆ ಅವುಗಳು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಅಷ್ಟೇ ಸತ್ಯ ಸಂಗತಿಯಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಎರಡೂ ರೈಲುಗಳ ಲೋಕೋಪಾಯಲಟ್‌ಗಳ ಹೇಳಿಕೆಗಳು ಬಂದಿವೆ. ಕೋರಮಂಡಲ ಎಕ್ಸ್‌ಪ್ರೆಸ್‌ನ ಲೋಕೋಪಾಯಲಟ್ ಏನು ಹೇಳಿದ್ದಾರೆಂದರೆ, ನಾನು ಮುಂದೆ ಹೋಗಲು ‘ಗ್ರೀನ್ ಸಿಗ್ನಲ್ ನೋಡಿದ್ದೇನೆ, ಆದರೆ ಯಶವಂತಪುರ ಎಕ್ಸ್‌ಪ್ರೆಸ್‌ನ ಲೋಕೋಪಾಯಲಟ್ ಹೇಳಿರುವುದೇನೆಂದರೆ, ತನಗೆ ಬೇರೆಯೇ ಏನೋ ಧ್ವನಿ ಕೇಳಿಸಿತ್ತು. ಲೋಕೋಪಾಯಲಟ್ ‘ಗ್ರೀನ್ ಸಿಗ್ನಲ್ ನೋಡಿದ್ದಾರೆ ಎಂದಾದರೆ, ಅದನ್ನು ಕೊಟ್ಟಿರುವುದು ತಪ್ಪಲ್ಲವೇ ? ‘ಅಪಘಾತಕ್ಕೆ ರೈಲುಗಾಡಿಗಳ ವೇಗ ಅಧಿಕವಾಗಿದ್ದುದು ಕಾರಣವಲ್ಲ; ಹಾಗೂ ಸಿಗ್ನಲ್ ವ್ಯವಸ್ಥೆಯಲ್ಲಿ ಎನೋ ತೊಂದರೆಯಿತ್ತು ಎಂದು ಕೂಡ ಹೇಳುವ ಹಾಗಿಲ್ಲ, ಎಂದು ರೈಲ್ವೆಯ ಅಧಿಕಾರಿಗಳು ಹೇಳಿದರು. ಆದ್ದರಿಂದ ಅಪಘಾತದ ಹೊಣೆ ನಿರ್ದಿಷ್ಟವಾಗಿ ಯಾರದ್ದು ? ಎಂಬುದು ದೇಶವಾಸಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ. ರೈಲುಮಂತ್ರಿ ಶ್ರೀ. ಅಶ್ವಿನಿ ವೈಷ್ಣವ ಇವರು ರೈಲ್ವೆಯ ‘ಇಂಟರ್‌ಲಾಕಿಂಗ್ ವ್ಯವಸ್ಥೆ ಕೆಟ್ಟುಹೋಗಿದ್ದರಿಂದ ಅಪಘಾತವಾಯಿತು, ಎಂದು ಹೇಳಿದ್ದಾರೆ. ಗೂಡ್ಸ್‌ರೈಲಿನಲ್ಲಿ ಕಬ್ಬಿಣವಿದ್ದ ಕಾರಣ ಅಪಘಾತದ ತೀವ್ರತೆ ಹೆಚ್ಚಾಯಿತು, ಎಂದು ಹೇಳಲಾಗುತ್ತಿದ್ದರೂ, ‘ಅಪಘಾತ ಏಕಾಯಿತು ? ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಮುಂಬಯಿಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ಹೋಗಲು ರೈಲ್ವೆ ಗೇಟ್ ದಾಟಿ ಹೋಗಬೇಕಾಗುತ್ತಿತ್ತು. ಇದರಲ್ಲಿ ಗೇಟ್ ತೆರೆಯುವ ಸಮನ್ವಯ ಹಾಗೂ ತೆರೆಯುವ ಸಮಯ ಇದರಲ್ಲಿ ತುಂಬಾ ಹೊಂದಾಣಿಕೆ ಇರಬೇಕಾಗುತ್ತಿತ್ತು. ಆದರೂ ಹಳಿ ದಾಟಿಕೊಂಡು ಹೋಗುವ ಜನರಿಗೆ ಅಪಘಾತವಾಗುತ್ತಿತ್ತು. ಅನಂತರ ರೈಲ್ವೆ ಸೇತುವೆ, ಸುರಂಗ ಮಾರ್ಗದಂತಹ ವ್ಯವಸ್ಥೆ ಬಂದಿರುವುದರಿಂದ ಈ ಅಪಘಾತ ಬಹಳಷ್ಟು ಪ್ರಮಾಣ ದಲ್ಲಿ ಕಡಿಮೆಯಾಯಿತು. ಈಗ ‘ಬುಲೆಟ್ ಟ್ರೇನ್, ‘ಹೈಪರ್‌ಸಾನಿಕ್ ರೈಲ್ವೆಗಳಂತಹ ದೊಡ್ಡ ಯೋಜನೆಗಳ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ರೈಲ್ವೆಯನ್ನು ಹೆಚ್ಚು ‘ಸ್ಮಾರ್ಟ್ ಮಾಡುವುದರೊಂದಿಗೆ ಅದನ್ನು ಸುರಕ್ಷಿತವಾಗಿ ಮಾಡು ವುದಕ್ಕೂ ಒತ್ತುಕೊಡಬೇಕು. ಅಂದರೆ ಹೊಸ ತಂತ್ರಜ್ಞಾನ ತರುವುದರೊಂದಿಗೆ ಅಸ್ತಿತ್ವದಲ್ಲಿದ್ದ ವ್ಯವಸ್ಥೆಗಳನ್ನು ಆಧುನೀಕರಣ…