‘ಸುಧಾರಣೆಗಳ ವರ್ಷ’ದ ಹೊಸ ಸವಾಲುಗಳು !

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌

ಭಾರತದ ರಕ್ಷಣಾ ಸಚಿವಾಲಯವು ೨೦೨೫ ನೇ ವರ್ಷವನ್ನು ‘ಸುಧಾರಣೆಗಳ ವರ್ಷ’ವಾಗಿ ಘೋಷಿಸಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ೧ ಜನವರಿ ೨೦೨೫ ರಂದು ಪ್ರತಿಪಾದಿಸಿದರು. ‘ಇದರಲ್ಲಿ ೨೧ ನೇ ಶತಮಾನದಲ್ಲಿ ಎದುರಾಗುವ ಸವಾಲುಗಳಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಯ್ದುಕೊಳ್ಳಲು ಸಿದ್ಧತೆ ಮಾಡ ಲಾಗುವುದು’, ಎಂದು ಹೇಳಿದರು. ಈ ಮಾಧ್ಯಮದಿಂದ ರಕ್ಷಣಾ ವಲಯದಲ್ಲಿನ ಸುಧಾರಣೆಗಳಿಗೆ ಚಾಲನೆ ಸಿಗಲಿದೆ. ಇದು ದೊಡ್ಡ ಸವಾಲುಗಳನ್ನು ಎದುರಿಸಲು ಶಕ್ತಿಯನ್ನು ನೀಡಲಿದೆ ಮತ್ತು ಭಾರತದ ರಕ್ಷಣಾ ಕ್ಷೇತ್ರವನ್ನು ಹಂತಹಂತವಾಗಿ ಹೆಚ್ಚೆಚ್ಚು ಸಮರ್ಥವಾಗಿ ಮಾಡಲಾಗುವುದು. ಈ ದಿಕ್ಕಿನಲ್ಲಿ ರಕ್ಷಣೆಯ ಪ್ರಯತ್ನಗಳನ್ನು ಮಾಡಲಾಗುವುದು. ೨೦೪೭ ನೇ ಇಸವಿಯ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿಗಣಿಸಲ್ಪಡಬೇಕು’, ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಈ ಗುರಿಯ ಅಂತರ್ಗತ, ‘ಸುಧಾರಣೆಯ ವರ್ಷ’ದ ಅಂಗವಾಗಿ ಭಾರತದ ಮಾರ್ಗಕ್ರಮಣವು ಖಂಡಿತ ಆಶಾದಾಯಕವಾಗಿದೆ. ರಕ್ಷಣಾ ಸಚಿವರ ಸವಾಲುಗಳನ್ನು ಸ್ವೀಕರಿಸಲು ರಕ್ಷಣಾ ಪಡೆಯೂ ಸಿದ್ಧವಾಗಿದೆ. ಇವೆಲ್ಲ ಚಿತ್ರಣಗಳನ್ನು ನೋಡುವಾಗ ಮುಂಬರುವ ವರ್ಷದಲ್ಲಿ ರಕ್ಷಣೆಯ ವಿಭಿನ್ನ ಆಯಾಮಗಳ ಮೂಲಕ ಭಾರತವು ವಿಭಿನ್ನ ಎತ್ತರಕ್ಕೆ ತಲುಪಲಿರುವುದು ಎಂಬುದು ಮಾತ್ರ ಖಚಿತ !

ಕೆಲವು ವರ್ಷಗಳ ಹಿಂದೆ, ‘ಎಕ್ಸಿಮ್‌ ಬ್ಯಾಂಕ್’ ಇದರ ವರದಿಯೊಂದು ‘ಭಾರತವು ಆಫ್ರಿಕನ್‌ ದೇಶಗಳ ಶಸ್ತ್ರಾಸ್ತ್ರ ಅವಶ್ಯಕತೆಗಳನ್ನು ಪೂರೈಸಬಲ್ಲದು’ ಎಂದು ಹೇಳಿತ್ತು. ಸುಧಾರಣಾ ವರ್ಷದಿಂದಾಗಿ ಭವಿಷ್ಯದಲ್ಲಿ ಈ ಸ್ಥಿತಿ ಇನ್ನಷ್ಟು ವಿಸ್ತಾರಗೊಳ್ಳುವುದು. ಆಫ್ರಿಕನ್‌ ದೇಶಗಳಿಗೆ ಸೀಮಿತವಾಗಿರುವ ಭಾರತವು ಶಸ್ತ್ರಾಸ್ತ್ರಗಳನ್ನು ಪೂರೈಸಲು ತನ್ನ ಅಂತಾರಾಷ್ಟ್ರೀಯ ಕಕ್ಷೆಯನ್ನು ವಿಸ್ತರಿಸಬಹುದು. ಈ ರೀತಿಯ ಆಧುನೀಕರಣದ ಪ್ರಕ್ರಿಯೆಗೆ ಭಾರತೀಯರ ಶುಭ ಹಾರೈಕೆಗಳು ದೇಶದೊಂದಿಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆಂತರಿಕ ಸುಧಾರಣಾ ಪ್ರಯತ್ನಗಳು ಮುಂದುವರಿದಂತೆ, ಜನವರಿ ೧೫ ರಂದು ಭಾರತೀಯ ನೌಕಾಪಡೆಯ ಬತ್ತಳಿಕೆಗೆ ‘ನೀಲಗಿರಿ’, ‘ಸೂರತ್’ ಮತ್ತು ‘ವಾಗಶೀರ್’ ಎಂಬ ಮೂರು ಯುದ್ಧನೌಕೆಗಳು ಸೇರ್ಪಡೆಯಾಗಿವೆ. ಇದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ !

ಸುಧಾರಣಾ ವರ್ಷದಲ್ಲಿ, ಜಂಟಿ ಮತ್ತು ಏಕೀಕರಣ ಉಪಕ್ರಮಗಳನ್ನು ಉತ್ತೇಜಿಸುವುದು, ‘ಏಕೀಕೃತ ಥಿಯೇಟರ್‌ ಕಮಾಂಡ್ಸ್‌’ ಇದನ್ನು ಸ್ಥಾಪಿಸುವುದು, ಆಧುನಿಕ ತಂತ್ರಜ್ಞಾನಗಳತ್ತ ಗಮನ ಕೇಂದ್ರೀಕರಿಸುವುದು, ಯುದ್ಧತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು, ತಂತ್ರಜ್ಞಾನ ವರ್ಗಾವಣೆ, ಅಕಾರ್ಯಕ್ಷಮತೆಯನ್ನು ದೂರ ಮಾಡಿ ಮೂಲಸೌಕರ್ಯವನ್ನು ಉತ್ತಮಗೊಳಿಸುವುದು, ಈ ಪ್ರಯತ್ನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕಾಗಿದೆ. ಕಳೆದ ವರ್ಷದ ಆರ್ಥಿಕ ಮುಂಗಡಪತ್ರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ನಿಬಂಧನೆಗಳನ್ನು ಗಮನಿಸಿದರೆ, ಶಸ್ತ್ರಾಸ್ತ್ರ ಅಥವಾ ರಕ್ಷಣಾ ಸಾಧನಗಳ ವಿಷಯದಲ್ಲಿ ಭಾರತವು ಸಮರ್ಥ, ಬಲಿಷ್ಠ ಮತ್ತು ಸ್ವಾವಲಂಬಿಯಾಗುತ್ತಿರುವುದು ಕಾಣಿಸುತ್ತಿದೆ. ಭಾರತ ಈಗ ೫ ಬಿಲಿಯನ್‌ ಡಾಲರ್‌ ರಫ್ತಿನ ಗುರಿಯನ್ನು ಹೊಂದಿದೆ. ಭಾರತದ ರಕ್ಷಣಾ ಕ್ಷೇತ್ರಕ್ಕೆ ಹೊಸ ದಾರಿಗಳು ತೆರೆದುಕೊಳ್ಳುತ್ತಿವೆ. ಎಲ್ಲಾ ಪಡೆಗಳು ಹೆಚ್ಚು ಸಂಘಟಿತ ಅಥವಾ ಒಗ್ಗೂಡಿದಷ್ಟೂ ಈ ರಕ್ಷಣಾಶಕ್ತಿಯು ಬಲಿಷ್ಠವಾಗುತ್ತದೆ. ಭಾರತದ ಮಾರುಕಟ್ಟೆಯು ಪ್ರಸ್ತುತ ಉದಯೋನ್ಮುಖವಾಗುತ್ತಿದೆ. ಅದಕ್ಕೆ ದಿನದಿಂದ ದಿನಕ್ಕೆ ಹಲವು ವಿಷಯಗಳ ಆವಿಷ್ಕಾರಗಳು ಸೇರ್ಪಡೆಯಾಗುತ್ತಿವೆ. ಭಾರತವು ವಿವಿಧ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿರುವುದರಿಂದ ಮತ್ತು ಅವುಗಳಲ್ಲಿ ಆಧುನಿಕ ಸುಧಾರಣೆಗಳನ್ನು ಮಾಡುವುದರಿಂದ ಭಾರತವು ಶೀಘ್ರದಲ್ಲೇ ಕ್ಷಿಪಣಿ ತಯಾರಿಕೆಯಲ್ಲಿ ಪರಿಣಿತವಾಗಲಿದೆ. ಭವಿಷ್ಯದಲ್ಲಿ, ನಾವು ‘ಮ್ಯಾನ್‌ ಕಾಂಪ್ಯಾಕ್ಟ್ ಹೈ ಫ್ರೀಕ್ವೆನ್ಸಿ ಸಾಫ್ಟ್‌ವೇರ್‌ ಡಿಸೈನ್‌’, ‘ರೇಡಿಯೊ ಸಿಸ್ಟಮ್‌’, ಡ್ರೋನ್‌ಗಳನ್ನು ಹೊಡೆದುರುಳಿಸುವ ತಂತ್ರಾಂಶಗಳು, ಫಿರಂಗಿ ಬಾಂಬ್‌ಗಳನ್ನು ನಿರ್ದೇಶಿಸುವ ಮತ್ತು ಅವುಗಳಲ್ಲಿ ಇನ್ನಷ್ಟು ನಿಖರವಾಗಿ ಮಾಡುವ ವ್ಯವಸ್ಥೆಗಳನ್ನು ನಾವು ನೋಡಲಿದ್ದೇವೆ.

ನಿರ್ಲಕ್ಷಿತ; ಆದರೆ ಪ್ರಮುಖ ಅಂಶಗಳು !

ಭಾರತವು ರಕ್ಷಣಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದ್ದರೂ ಕೆಲವು ಅಂಶಗಳನ್ನು ನಿರ್ಲಕ್ಷಿಸಲಾಗಿದೆ ಅಥವಾ ಕಡೆಗಣಿಸಲಾಗಿದೆ; ಆದರೆ ಈ ಸುಧಾರಣಾ ವರ್ಷದಲ್ಲಿ ಅದನ್ನೂ ನೋಡಬೇಕಾಗಿದೆ. ಭಾರತೀಯ ಸೈನಿಕರ ಮೇಲಾಗುತ್ತಿರುವ ದಾಳಿಗಳು, ವರ್ಷಗಳಿಂದ ಕಾಡುತ್ತಿರುವ ಕಾಶ್ಮೀರ ಸಮಸ್ಯೆ, ಭಾರತದಲ್ಲಿ ನೆಲೆಸಿ ದ್ದರೂ ಶತ್ರು ದೇಶಗಳ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಗೃಹ ವಂಚಕರು, ಭಯೋತ್ಪಾದನೆಯ ತೂಗುಕತ್ತಿ, ಸಶಸ್ತ್ರ ಪಡೆಗಳ ಭದ್ರತೆ, ಉದ್ದೇಶಪೂರ್ವಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸುವ ಗುಂಪುಗಳು. ಸೇನಾ ಅಧಿಕಾರಿಗಳ ‘ಹನಿ ಟ್ರ್ಯಾಪ್’ ಪ್ರಕರಣಗಳು ಬಹಿರಂಗಗೊಳ್ಳುತ್ತಿರುವುದು ಇವು ಈ ಬಿಕ್ಕಟ್ಟುಗಳಲ್ಲಿ ಕೆಲವು ಉದಾಹರಣೆಗಳಾಗಿವೆ.

ಅವುಗಳನ್ನು ದೃಢವಾಗಿ ಎದುರಿಸಬೇಕು. ಕಳೆದ ವರ್ಷ ರಕ್ಷಣಾ ಪಡೆಯ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಾಗಿತ್ತು. ರಕ್ಷಣೆಯಂತಹ ಅತ್ಯಂತ ಸೂಕ್ಷ್ಮ ಮತ್ತು ಅಷ್ಟೇ ಮುಖ್ಯವಾದ ವಲಯದಲ್ಲಿ ಭ್ರಷ್ಟಾಚಾರವು ದೇಶಕ್ಕೆ ನಿಂದನೀಯವಾಗಿದೆ. ವಾಯುಪಡೆಯಂತಹ ಇತರ ಪಡೆಗಳಲ್ಲಿ ಈ ಭ್ರಷ್ಟಾಚಾರ ನಡೆಯುತ್ತಿದೆಯೇ ಎಂದು ಭಾರತ ಪರಿಶೀಲಿಸಬೇಕು ಮತ್ತು ಅದನ್ನು ತಡೆಯಲು ಪ್ರಯತ್ನಿಸಬೇಕು. ಇಂತಹ ದುಷ್ಕೃತ್ಯಗಳಿಂದ ಭಾರತದ ಯಶಸ್ವಿ ಹೆಜ್ಜೆಗಳು ಕಳಂಕಿತವಾಗದಂತೆ ಎಚ್ಚರ ವಹಿಸಬೇಕು. ವಿವಿಧ ಸಮಾಜವಿರೋಧಿ ಅಂಶಗಳಿಂದಾಗಿ ದೇಶದೊಳಗೆ ಸೃಷ್ಟಿಯಾಗಿರುವ ಅಸ್ಥಿರತೆಯು ರಕ್ಷಣಾ ಕ್ಷೇತ್ರದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಮೂರು ಪಡೆಗಳ ನಡುವಿನ ಸಮನ್ವಯದ ಕೊರತೆಯನ್ನು ಸರಿಪಡಿಸಲು ಸಹ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಮಹತ್ವಾಕಾಂಕ್ಷೆಯ ನೀತಿಗಳ ಫಲಿತಾಂಶ !

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸ್ವಾತಂತ್ರ್ಯವೀರ ಸಾವರಕರ ಅವರು, ‘ದೇಶದ ಗಡಿಯನ್ನು ನಿಗದಿ ಪಡಿಸಿ. ಮುಳ್ಳುತಂತಿಯ ಬೇಲಿಗಳನ್ನು ಹಾಕಿ ರಕ್ಷಣೆಯಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಿಸಿ’ ಎಂಬ ಅಮೂಲ್ಯ ಸಂದೇಶ ನೀಡಿದ್ದರು; ಏಕೆಂದರೆ ಅವರು ಭಾರತದ ಬಗ್ಗೆ ದೂರದೃಷ್ಟಿ ಹೊಂದಿದ್ದರು; ಆದರೆ ಆಗಿನ ಕಾಂಗ್ರೆಸ್‌ ಸರಕಾರ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಈ ಬೇಲಿಯ ಕೊರತೆಯಿಂದ ಶತ್ರುಗಳು ದೇಶದೊಳಗೆ ಪ್ರವೇಶಿಸಿದರು. ಕಾಲಕಾಲಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಿದ್ದು, ರಕ್ಷಣಾ ಕ್ಷೇತ್ರದಲ್ಲಿ ಈ ರೀತಿ ತಿರುಗೇಟು ನೀಡುತ್ತಿರುವ ಕಾಂಗ್ರೆಸ್‌ಗೆ ಇಂದಿಗೂ ತಕ್ಕ ಪಾಠ ಕಲಿಸುತ್ತಿದ್ದಾರೆ. ಈಗ ಹೊಸ ಆಡಳಿತದಲ್ಲಿ ಆ ಕೃತ್ಯಗಳು ಪುನರಾವರ್ತನೆಯಾಗುವುದಿಲ್ಲ; ಏಕೆಂದರೆ ಈಗ ವಿವಿಧ ರಾಷ್ಟ್ರಗಳ ಸಭೆಗಳ ಮೂಲಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಹಾರ್ದತೆ ಸೃಷ್ಟಿಯಾಗುತ್ತಿದೆ. ಇದರಿಂದ ಸೇನೆಯ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚುತ್ತಿದೆ. ಪ್ರತಿ ವರ್ಷ ಜಾರಿಗೆ ತರುವ ಮಹತ್ವಾಕಾಂಕ್ಷೆಯ ನೀತಿಗಳು ಸೇರಿದಂತೆ ಭಾರತವನ್ನು ಮಹಾಶಕ್ತಿಗಳಿಗಿಂತಲೂ ಮುಂದಿಡುತ್ತದೆ. ಅವರು ಭಾರತದ ಸೇನಾಶಕ್ತಿಯನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಭಾರತವೇ ಪ್ರಖರ ಯೋಧ’ ಆಗಲಿದೆ. ಪ್ರಸ್ತುತ ಅಮೇರಿಕ ತಂತ್ರಜ್ಞಾನದ ಸೂಪರ್‌ ಪವರ್‌ ಆಗಿದೆ. ರಕ್ಷಣಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕಾರ್ಯತಂತ್ರದ ನೀತಿಗಳನ್ನು ಅಳವಡಿಸಿಕೊಂಡು ಭಾರತವೂ ಸ್ವಾವಲಂಬನೆಯತ್ತ ಶ್ರಮಿಸಿದರೆ ಭಾರತಕ್ಕೂ ಈ ಮಹಾಶಕ್ತಿಯ ಕಿರೀಟವನ್ನು ಧರಿಸುವ ಅವಕಾಶ ಸಿಗುತ್ತದೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಾಂತಿಯನ್ನು ಗಮನಿಸಿದರೆ, ‘ಮೂರನೇ ಮಹಾಯುದ್ಧ’ ಯಾವಾಗ ಬೇಕಾದರೂ ಪ್ರಾರಂಭ ವಾಗುವುದು ಎಂಬ ಸಂಕೇತ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತವು ಸ್ವಾವಲಂಬಿಯಾಗಬೇಕು ಮತ್ತು ಜಗತ್ತನ್ನು ಮುನ್ನಡೆಸ ಬೇಕು ಎಂಬುದು ಭಾರತೀಯರ ಮಹತ್ವಾಕಾಂಕ್ಷೆಯಾಗಿದೆ.