ಗೋವಾದ ರಾಮನಾಥಿಯಲ್ಲಿ ಉತ್ಸಾಹಪೂರ್ಣ ವಾತಾವರಣದಲ್ಲಿ ಶುಭಾರಂಭಗೊಂಡ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ
ರಾಮನಾಥಿ (ಫೋಂಡಾ)- ಖಲಿಸ್ತಾನೀ ಭಯೋತ್ಪಾದನೆ, ಹಿಂದೂಗಳ ಹಬ್ಬ-ಹರಿದಿನಗಳಂದು ನಡೆಯುವ ಗಲಭೆ, ಸಮಲಿಂಗಿಗಳ ವಿವಾಹದ ಸಮರ್ಥನೆ, `ಲಿವ್ –ಇನ್ –ರಿಲೇಶನಶಿಪ್’ ನ ವ್ಯಭಿಚಾರಕ್ಕೆ ಮಾನ್ಯತೆ, ಹೆಚ್ಚುತ್ತಿರುವ ಅಶ್ಲೀಲತೆಯ ವೈಭವೀಕರಣ, ಇವುಗಳಂತಹ ಅನೇಕ ಸಮಸ್ಯೆಗಳು ಹಿಂದೂಗಳ ಮುಂದಿವೆ. ಈ ವಿಷಯಗಳ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉತ್ತರವಿಲ್ಲ. ಶಾಶ್ವತ ಹಿಂದೂರಾಷ್ಟ್ರವೊಂದೇ ಇದಕ್ಕೆ ಉತ್ತರವಾಗಿದೆ. `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಎಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಜನಮಂಥನವಾಗಿದೆ. 10 ವರ್ಷಗಳ ಹಿಂದೆ ಬಿತ್ತಿದ ಹಿಂದೂ ರಾಷ್ಟ್ರದ ವಿಚಾರಗಳ ಬೀಜವು ಇಂದು ವಟವೃಕ್ಷವಾಗಿದೆ. ಅದರಂತೆಯೇ ಮುಂದಿನ 10 ವರ್ಷಗಳ ಬಳಿಕ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಬೀಜದಿಂದ ಹಿಂದೂ ರಾಷ್ಟ್ರ ಸಾಕಾರಗೊಂಡಿರುವುದು ಕಂಡು ಬರಲಿದೆ. ಈ ಮಂಥನದಲ್ಲಿ ಸಂಘಟಿತರಾಗಿರುವ ಹಿಂದೂ ಶಕ್ತಿಯು ಹಿಂದೂ ರಾಷ್ಟ್ರದ ನಿರ್ಮಿತಿಯ ಕಾರ್ಯದಲ್ಲಿ ಕಾರ್ಯಾನ್ವಿತವಾಗಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾಗಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಪ್ರತಿಪಾದಿಸಿದರು. ಫೋಂಡಾ(ಗೋವಾ)ದ ಶ್ರೀ ರಾಮನಾಥ ದೇವಸ್ಥಾನದಲ್ಲಿ ಜೂನ 16 ರಂದು ಪ್ರಾರಂಭವಾಗಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ (11ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ) ಉದ್ಘಾಟನೆಯ ಸತ್ರದಲ್ಲಿ ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡುವಾಗ ಅವರು ಮಾತನಾಡುತ್ತಿದ್ದರು. ಜೂನ 22ರ ವರೆಗೆ ನಡೆಯುವ ಈ ಮಹೋತ್ಸವದಲ್ಲಿ ರಾಷ್ಟ್ರ ಮತ್ತು ಧರ್ಮದ ವಿವಿಧ ವಿಷಯಗಳ ಮೇಲೆ ಗೌರವಾನ್ವಿತರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ಹೀಗೆ ನಡೆಯಿತು ಉದ್ಘಾಟನೆಯ ಸಮಾರಂಭ
ಮಹೋತ್ಸವದ ಪ್ರಾರಂಭದಲ್ಲಿ ಸನಾತನದ ಪುರೋಹಿತ ಶ್ರೀ. ಅಮರ ಜೋಶಿಯವರು ಶಂಖನಾದ ಮೊಳಗಿಸಿದರು. ತದನಂತರ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾಗಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ, `ಹಿಂದೂ ಫ್ರಂಟ ಫಾರ್ ಜಸ್ಟೀಸ್’ ನ ಪೂ. (ನ್ಯಾಯವಾದಿ) ಹರಿಶಂಕರ ಜೈನ, ಗೋಂದಿಯಾದ `ತಿರಖೇಡಿ ಆಶ್ರಮ’ದ ಸಂಸ್ಥಾಪಕ ಪೂಜ್ಯ ಸಂತ ಶ್ರೀರಾಮ ಜ್ಞಾನಿದಾಸ ಮಹಾತ್ಯಾಗಿ, ಬೇಲತರೋಡಿ (ನಾಗಪುರ) ಇಲ್ಲಿಯ `ಶ್ರೀ ಗುರುಕೃಪಾ ಸೇವಾ ಆಶ್ರಮ’ದ ನಿರ್ದೇಶಕರ ಅಧ್ಯಕ್ಷರಾದ ಪೂ. ಭಾಗೀರಥಿ ಮಹಾರಾಜರು, ಧುಳೆಯ `ಶ್ರೀರಾಮಜಾನಕಿ ಸೇವಾ ಸಮಿತಿ ಮತ್ತು ಶ್ಯಾಮಸುಂದರ ಗೋವರ್ಧನ ಗೋಶಾಲೆ’ಯ ಸಂಸ್ಥಾಪಕ ಅಧ್ಯಕ್ಷ ಭಾಗವತಾಚಾರ್ಯ (ನ್ಯಾಯವಾದಿ) ಶ್ರೀ ರಾಜೀವಕೃಷ್ಣಜಿ ಮಹಾರಾಜ ಝಾ ಮತ್ತು ಜಯಪುರ(ರಾಜಸ್ಥಾನ)ದ `ಜ್ಞಾನಮ್ ಫೌಂಡೇಶನ್’ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಮಹಂತ ಶ್ರೀ ದೀಪಕ ಗೋಸ್ವಾಮಿಯವರ ಶುಭಹಸ್ತದಿಂದ ದೀಪಪ್ರಜ್ವಲನೆಗೊಳಿಸಲಾಯಿತು.
ತದನಂತರ ಸನಾತನದ ಪುರೋಹಿತ ಸರ್ವಶ್ರೀ ಅಮರ ಜೋಶಿ ಮತ್ತು ಸಿದ್ದೇಶ ಕರಂದೀಕರ ಇವರು ವೇದಮಂತ್ರಪಠಣ ಮಾಡಿದರು.
ಶೃಂಗೇರಿಯ ದಕ್ಷಿಣಾನ್ಮಾಯ ಶ್ರೀ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯರ ಉತ್ತರಾಧಿಕಾರಿ ಶಿಷ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾರಾಜರ ಶುಭಸಂದೇಶವನ್ನು ವಿಡಿಯೋ ಮೂಲಕ ಪ್ರಸಾರ ಮಾಡಲಾಯಿತು. ತದನಂತರ ಸನಾತನದ ಸದ್ಗುರು ಸತ್ಯವಾನ ಕದಮ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಶುಭಸಂದೇಶವನ್ನು ಓದಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯದ ಸಮನ್ವಯಕ ಶ್ರೀ ಗುರುಪ್ರಸಾದ ಗೌಡ ಇವರು ಕರ್ನಾಟಕದ ಪೇಜಾವರ ಮಠದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಸಂದೇಶವನ್ನು ಓದಿದರು.
ಗಣ್ಯರ ಹಸ್ತದಿಂದ ಗ್ರಂಥಗಳ ಲೋಕಾರ್ಪಣೆ
ಈ ಸಮಯದಲ್ಲಿ ವ್ಯಾಸಪೀಠದಲ್ಲಿದ್ದ ಗಣ್ಯರ ಹಸ್ತದಿಂದ `ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಬೋಧನೆ’ ಈ ಸನಾತನದ ಗ್ರಂಥ ಮಾಲಿಕೆಯ `ಪ್ರತ್ಯಕ್ಷ ಸಾಧನೆಯನ್ನು ಕಲಿಸುವ ಪದ್ಧತಿ’ ಎಂಬ ಹಿಂದಿ ಮತ್ತು ಮರಾಠಿ ಭಾಷೆಯ ಗ್ರಂಥವನ್ನು ಭಾಗವತಾಚಾರ್ಯ(ನ್ಯಾಯವಾದಿ) ಶ್ರೀ ರಾಜೀವಕೃಷ್ಣಜಿ ಮಹಾರಾಜ ಝಾ, ಪೂ. ಭಾಗಿರಥಿ ಮಹಾರಾಜ, ಪೂಜ್ಯ ಸಂತ ಶ್ರೀರಾಮ ಜ್ಞಾನಿದಾಸ ಮಹಾತ್ಯಾಗಿ, ನ್ಯಾಯವಾದಿ(ಪೂ.) ಹರಿಶಂಕರ ಜೈನ, ಮಹಂತದೀಪಕ ಗೋಸ್ವಾಮಿಯವರ ಶುಭಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು.
ಇದರೊಂದಿಗೆ ಠಾಣೆಯ ಹಿರಿಯ ಲೇಖಕ ಮತ್ತು ವ್ಯಾಖ್ಯಾನಕಾರ ಶ್ರೀ ದುರ್ಗೇಶ ಪರುಳಕರ ಇವರು ಬರೆದ `ಮಹಾಭಾರತದ ಅಲೌಕಿಕ ಚರಿತ್ರೆ’ ಈ ಮಾಲಿಕೆಯ ಖಂಡ 1 `ನಿಷ್ಕಾಮ ಕರ್ಮಯೋಗಿ ಭೀಷ್ಮ’ ಈ ಗ್ರಂಥವನ್ನು ಶ್ರೀ ದುರ್ಗೇಶ ಪರುಳಕರ, ಸದ್ಗುರು ಡಾ. ಚಾರುದತ್ತ ಪಿಂಗಳೆ, ಕೇರಳದ ಕ್ಷೇತ್ರ ಪರಿಪಾಲನ ಸಮಿತಿಯ ಆಚಾರ್ಯ ಪಿ.ಪಿ. ಎಂ. ನಾಯರ, ಪ.ಪೂ. ಯತಿ ಮಾ ಚೇತನಾನಂದ ಸರಸ್ವತಿಯವರ ಶುಭಹಸ್ತದಿಂದ ಪ್ರಕಾಶನಗೊಳಿಸಲಾಯಿತು.