‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಸಾಲ್ಸಾ ನೃತ್ಯವು ಇಬ್ಬರು ವ್ಯಕ್ತಿಗಳು ಜೊತೆಗೂಡಿ ಮಾಡುವ ‘ಸೆಕ್ಸುಅಲ್ (ಕಾಮುಕ) ನೃತ್ಯದ ಒಂದು ವಿಧವಾಗಿದೆ. ಈ ನೃತ್ಯಶೈಲಿಯು ಮೂಲದಲ್ಲಿ ಕ್ಯುಬಾ ದೇಶದಲ್ಲಿ ಉಗಮವಾಯಿತು. ‘ಯುರೋಪ್ ಮತ್ತು ಆಫ್ರಿಕಾ ಸಂಸ್ಕೃತಿಗಳಲ್ಲಿನ ಸಂಗೀತ ಮತ್ತು ಪರಂಪರೆಯ ಪ್ರಭಾವದಿಂದ ‘ಸಾಲ್ಸಾ ನೃತ್ಯ ನಿರ್ಮಾಣವಾಗಿದೆ, ಎಂದು ನಂಬಲಾಗುತ್ತದೆ. ಲ್ಯಾಟಿನ್ ಅಮೇರಿಕಾ, ಅಮೇರಿಕಾ, ಯುರೋಪ್ ಈ ಸ್ಥಳಗಳಲ್ಲಿ ಜನಪ್ರಿಯವಾಗಿರುವ ಈ ನೃತ್ಯಶೈಲಿಯು ಏಷ್ಯಾ ಹಾಗೂ ಆಫ್ರಿಕಾ ಖಂಡದಲ್ಲಿಯೂ ಜನಪ್ರಿಯವಾಗುತ್ತಿದೆ. (ಆಧಾರ : ಜಾಲತಾಣ) ಇತ್ತೀಚಿಗೆ ಭಾರತದಲ್ಲಿನ ತರುಣ-ತರುಣಿಯರಲ್ಲಿ ‘ಸಾಲ್ಸಾ ನೃತ್ಯದ ಆಕರ್ಷಣೆ ಹೆಚ್ಚುತ್ತಿದೆ, ಅನೇಕ ತರುಣ-ತರುಣಿಯರು ‘ಡಾನ್ಸ ಕ್ಲಾಸ್ಗಳಿಗೆ (ನೃತ್ಯಗಳ ತರಬೇತಿವರ್ಗಗಳಿಗೆ) ಹೋಗಿ ಈ ನೃತ್ಯವನ್ನು ಕಲಿಯುತ್ತಾರೆ. ‘ಸಾಲ್ಸಾ ನೃತ್ಯದ ನೃತ್ಯ ಶಿಕ್ಷಕ ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕದೃಷ್ಟಿಯಲ್ಲಿ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದಿಂದ ಅಧ್ಯಯನ ಮಾಡಲು ಜನವರಿ ೨೦೨೦ ರಲ್ಲಿ ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ‘ಯೂ.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಇಬ್ಬರು ನೃತ್ಯ ಪ್ರಶಿಕ್ಷಕರು (ಒಬ್ಬರು ಸ್ತ್ರೀ ಮತ್ತು ಒಬ್ಬರು ಪುರುಷ) ಮತ್ತು ನೃತ್ಯವನ್ನು ಕಲಿಯುತ್ತಿರುವ ನಾಲ್ಕು ವ್ಯಕ್ತಿಗಳು (ಇಬ್ಬರು ಸ್ತ್ರೀಯರು ಮತ್ತು ಇಬ್ಬರು ಪುರುಷರು) ಪಾಲ್ಗೊಂಡಿದ್ದರು. ನೃತ್ಯವನ್ನು ಕಲಿಯುವವರಲ್ಲಿ ಓರ್ವ ಸ್ತ್ರೀ ಮತ್ತು ಓರ್ವ ಪುರುಷ ಇವರಿಬ್ಬರಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯಿದೆ. ಈ ಪರೀಕ್ಷಣೆಯಲ್ಲಿ ಸಾಲ್ಸಾ ನೃತ್ಯದ ಪ್ರಶಿಕ್ಷಕರು ನೃತ್ಯವನ್ನು ಕಲಿಯುವ ವ್ಯಕ್ತಿಗಳಿಗೆ ಆ ನೃತ್ಯವನ್ನು ಕಲಿಸಿದರು. ನೃತ್ಯ ಪ್ರಶಿಕ್ಷಕರು ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿಗಳ ನೃತ್ಯವನ್ನು ಮಾಡುವ ಮೊದಲು ಮತ್ತು ಮಾಡಿದ ನಂತರ ‘ಯು.ಎ.ಎಸ್. ಉಪಕರಣದಿಂದ ನಿರೀಕ್ಷಣೆಗಳ ನೋಂದಣಿಗಳನ್ನು ಮಾಡಲಾಯಿತು. ಸಾಲ್ಸಾ ನೃತ್ಯದ ನೃತ್ಯ ಪ್ರಶಿಕ್ಷಕರು ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿಗಳ ಮೇಲಾದ ಪರಿಣಾಮವನ್ನು ಮುಂದೆ ಕೊಡಲಾಗಿದೆ.
೧ ಅ. ‘ಸಾಲ್ಸಾ ನೃತ್ಯದ ನೃತ್ಯ ಪ್ರಶಿಕ್ಷಕರ ಮೇಲೆ ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿಗಳ ಮೇಲೆ ತುಂಬಾ ನಕಾರಾತ್ಮಕ ಪರಿಣಾಮವಾಗುವುದು : ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.
೧. ನೃತ್ಯದ ನಂತರ ನೃತ್ಯದ ಪ್ರಶಿಕ್ಷಕರು ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿಗಳಲ್ಲಿನ ‘ಇನ್ಫ್ರಾ ರೆಡ್ ನಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು.
೨. ನೃತ್ಯದ ನಂತರ ಪುರುಷ ನೃತ್ಯ ಪ್ರಶಿಕ್ಷಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಪುರುಷ ಇವರಲ್ಲಿ ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆ ಕಂಡುಬಂದಿತು. ನೃತ್ಯದ ನಂತರ ಸ್ತ್ರೀ ನೃತ್ಯ ಪ್ರಶಿಕ್ಷಕಿ, ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸ್ತ್ರೀ ಹಾಗೂ ಪುರುಷ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸ್ತ್ರೀ ಇವರಲ್ಲಿನ ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು.
೩. ನೃತ್ಯದ ನಂತರ ನೃತ್ಯದ ಪ್ರಶಿಕ್ಷಕ ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿ ಇವರಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು.
೨. ನಿಷ್ಕರ್ಷ
‘ಸಾಲ್ಸಾ ನೃತ್ಯದ ನೃತ್ಯ ಪ್ರಶಿಕ್ಷಕರು ಮತ್ತು ಅದನ್ನು ಕಲಿಯುವ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕದೃಷ್ಟಿಯಲ್ಲಿ ತುಂಬಾ ನಕಾರಾತ್ಮಕ ಪರಿಣಾಮವಾಯಿತು.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ‘ಸಾಲ್ಸಾ ನೃತ್ಯದಿಂದ ತುಂಬಾ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುವುದು : ಸಾಲ್ಸಾ ನೃತ್ಯವು ಇಬ್ಬರು ಜೊತೆ ಗೂಡಿ ಮಾಡುವ ಕಾಮುಕ ನೃತ್ಯವಾಗಿದೆ. ಈ ನೃತ್ಯದಲ್ಲಿ ಪಾಶ್ಚಾತ್ಯ ಶೈಲಿಯ ವೇಶಭೂಷಣ, ಕೇಶರಚನೆ ಮತ್ತು ಬಣ್ಣಗಳು (ಮೇಕಪ್) ಇದ್ದು ಅದಕ್ಕೆ ಪಾಶ್ಚಾತ್ಯ ಸಂಗೀತವನ್ನು ಜೋಡಿಸಲಾಗುತ್ತದೆ. ಕಾಮುಕ ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮನಸ್ಸಿನಲ್ಲಿ ಕಾಮವಾಸನೆಯ ವಿಚಾರಗಳ ಪ್ರಮಾಣವು ಹೆಚ್ಚುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ನೃತ್ಯದ ಪ್ರಕಾರ ಮತ್ತು ಅವರಿಗೆ ಸಂಬಂಧಿಸಿದ ಘಟಕಗಳು (ಉದಾ. ವೇಶಭೂಷಣ, ಕೇಶರಚನೆ, ಬಣ್ಣಗಳು (ಮೇಕಪ್), ಪಾಶ್ಚಾತ್ಯ ಸಂಗೀತ ಇತ್ಯಾದಿಗಳು) ಅಸಾತ್ತ್ವಿಕವಾಗಿರುವುದರಿಂದ ಅವುಗಳಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸಿದವು.
೩ ಆ. ಕಾಮುಕತೆಯನ್ನು ಉತ್ತೇಜಿಸುವ ಸಾಲ್ಸಾ ನೃತ್ಯದಿಂದ ನೃತ್ಯದಲ್ಲಿ ಪಾಲ್ಗೊಂಡಿರುವರಿಗೆ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗುವುದು : ಇತ್ತೀಚೆಗೆ ಎಲ್ಲರಿಗೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಆಧ್ಯಾತ್ಮಿಕ ತೊಂದರೆ ಇರುತ್ತದೆ. ಪರೀಕ್ಷಣೆಯಲ್ಲಿನ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಗಳಿಗೆ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿದೆ. ಕಾಮುಕತೆಯನ್ನು ಉತ್ತೇಜಿಸುವ ಸಾಲ್ಸಾ ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳಿಗೆ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಯಿತು. ಕೆಟ್ಟ ಶಕ್ತಿಗಳು ಅದರ ದುರ್ಲಾಭ ಪಡೆದು ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲೆ ತೊಂದರೆ ದಾಯಕ ಶಕ್ತಿ ಪ್ರಕ್ಷೇಪಿಸಿದವು. ಇದರ ನಕಾರಾತ್ಮಕ ಪರಿಣಾಮವು ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲಾಯಿತು.
೩ ಇ. ಸಾಲ್ಸಾ ನೃತ್ಯದ ನೃತ್ಯ ಪ್ರಶಿಕ್ಷಕರು ಮತ್ತು ನೃತ್ಯ ಕಲಿಯುವ ವ್ಯಕ್ತಿಗಳ ಮೇಲೆ ತುಂಬಾ ನಕಾರಾತ್ಮಕ ಪರಿಣಾಮವಾಗುವುದು : ನೃತ್ಯದ ಮೊದಲು ನೃತ್ಯ ಪ್ರಶಿಕ್ಷಕರು ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿಗಳಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಊರ್ಜೆಗಳು ಇದ್ದವು. ಸಾಲ್ಸಾ ನೃತ್ಯದಿಂದ ಪ್ರಕ್ಷೇಪಿಸಿದ ತೊಂದರೆದಾಯಕ ಸ್ಪಂದನಗಳಿಂದ ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಸುತ್ತಲಿನ ತೊಂದರೆದಾಯಕ ಆವರಣದಲ್ಲಿ ಬಹಳ ಹೆಚ್ಚಳವಾಯಿತು. ಆದ್ದರಿಂದ ನೃತ್ಯದ ನಂತರ ಅವರಲ್ಲಿನ ‘ಇನ್ಫ್ರಾರೆಡ್ ಈ ನಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗಿ ರುವುದು ಪರೀಕ್ಷಣೆಯಿಂದ ಕಂಡುಬಂದಿತು.ಕೆಟ್ಟ ಶಕ್ತಿಗಳು ನೃತ್ಯದಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳ ತೊಂದರೆಯನ್ನು ಹೆಚ್ಚಿಸಿದ್ದರಿಂದ ಅವರಲ್ಲಿನ ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆ ಕಂಡು ಬಂದಿತು ಅಥವಾ ಅದರಲ್ಲಿ ತುಂಬಾ ಹೆಚ್ಚಳ ವಾಯಿತು. ಹಾಗೆಯೇ ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳ ದೇಹದಲ್ಲಿನ ಸಕಾರಾತ್ಮಕ ಸ್ಪಂದನಗಳು ಇಲ್ಲವಾದವು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಸಾಲ್ಸಾ ನೃತ್ಯದ ನೃತ್ಯ ಪ್ರಶಿಕ್ಷಕರು ಮತ್ತು ನೃತ್ಯವನ್ನು ಕಲಿಯುವ ವ್ಯಕ್ತಿ ಗಳ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ತುಂಬಾ ನಕಾರಾತ್ಮಕ ಪರಿಣಾಮವಾಯಿತು.
೩ ಈ. ಪರೀಕ್ಷಣೆಯಲ್ಲಿನ ಸಾಲ್ಸಾ ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳಿಗೆ ಆಗಿರುವ ತೊಂದರೆಗಳು : ಪರೀಕ್ಷಣೆಯಲ್ಲಿನ ಸಾಲ್ಸಾ ನೃತ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳು, ‘ಈ ನೃತ್ಯವನ್ನು ಮಾಡುವಾಗ ಅವರಲ್ಲಿನ ಕಾಮವಾಸನೆ ಉಮ್ಮಳಿಸಿ ಬಂದಿತು. ನೃತ್ಯದ ನಂತರ ಅವರಿಗೆ ಶಾರೀರಿಕ ದಣಿವು, ತಲೆನೋವು, ಏನು ಹೊಳೆಯದಿರುವುದು, ಮನಸ್ಸಿನಲ್ಲಿ ಬಹಳಷ್ಟು ಸಮಯ ಕಾಮವಾಸನೆಯ ವಿಚಾರಗಳು ಬರುವುದು ಇತ್ಯಾದಿ ತೊಂದರೆಗಳಾದವು ಎಂದು ಹೇಳಿದರು.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೩.೨೦೨೧)
ವಿ-ಅಂಚೆ : [email protected]
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ. ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |