ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಗ್ರಹಗಳ ಸ್ಥಿತಿಯು ಹಿಂದೂ ರಾಷ್ಟ್ರಕ್ಕೆ ಪೂರಕವಾಗಿದೆ ! – ಆಚಾರ್ಯ ಡಾ. ಅಶೋಕ ಕುಮಾರ್ ಮಿಶ್ರಾ, ಸಭಾಧ್ಯಕ್ಷರು (ಏಷ್ಯಾ ಚಾಪ್ಟರ್), ವಿಶ್ವ ಜ್ಯೋತಿಷ್ಯ ಮಹಾಸಂಘ, ಪಾಟಲಿಪುತ್ರ, ಬಿಹಾರ

ಆಚಾರ್ಯ ಡಾ. ಅಶೋಕ ಕುಮಾರ್ ಮಿಶ್ರಾ

ಹಿಂದೂ ರಾಷ್ಟ್ರದ ಸ್ಥಾಪನೆಯು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಇಡೀ ಮಾನವ ಜನಾಂಗಕ್ಕೆ ಅವಶ್ಯಕವಾಗಿದೆ. ಹಿಂದೂ ರಾಷ್ಟ್ರವು ಇಡೀ ಮನುಕುಲವನ್ನು ಮತ್ತು ಸೃಷ್ಟಿಯನ್ನು ಉಳಿಸಬಲ್ಲದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಿತಿಯು ಹಿಂದೂ ರಾಷ್ಟ್ರಕ್ಕೆ ಪೂರಕವಾಗಿದೆ. ಮುಂಬರುವ ಕಾಲವು ಆಪತ್ಕಾಲವಾಗಿರುವುದರಿಂದ ನಮ್ಮ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಾಧನೆಯನ್ನು ಹೆಚ್ಚಿಸಿ ಜಾಗರೂಕರಾಗಿರುವುದು ಅವಶ್ಯಕವಾಗಿದೆ.

1. ಭಗವಾನ ಶ್ರೀಕೃಷ್ಣನು ತನ್ನ ಕಿರುಬೆರಳಿನಲ್ಲಿ ಗೋವರ್ಧನ ಪರ್ವತವನ್ನು ಎತ್ತಿದನು. ಆಗ ಗೋಪಿಯರೆಲ್ಲರೂ ಅದಕ್ಕೆ ತಮ್ಮ ಕೋಲುಗಳನ್ನು ಹಿಡಿದರು. ಆಗ ಅವರಿಗೆ, ‘ಶ್ರೀಕೃಷ್ಣನು ಎಲ್ಲಾ ಮಾಯೆಗಳನ್ನು ಸೃಷ್ಟಿಸುತ್ತಿದ್ದಾನೆ.’, ಎಂದೆನಿಸಿತು. ಆಗ ಭಗವಂತನು ತನ್ನ ಕಿರುಬೆರಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿದನು. ನಂತರ ಪರ್ವತವು ಕೆಳಗಿಳಿಯಿತು ಮತ್ತು ಭಗವಂತನು ಪುನಃ ಪರ್ವತವನ್ನು ಕಿರುಬೆರಳಿನಿಂದ ಎತ್ತಿದನು.

2. ಆಗ ಗೋಪಿಯರಿಗೆ, ‘ದೇವರು ಪರ್ವತವನ್ನು ಎತ್ತಿದ್ದರೆ ನಾವೇಕೆ ಕೋಲುಗಳನ್ನು ಹಿಡಿಯಬೇಕು ?’ ಎಂದು ಯೋಚಿಸಿ ಕೋಲುಗಳನ್ನು ಹೊರತೆಗೆದರು. ಆಗಲೂ ಪರ್ವತ ಕೆಳಗೆ ಬಂತು. ಅದರಿಂದ ನಮ್ಮ ಕರ್ತವ್ಯಕರ್ಮವನ್ನು ಮಾಡಿದರೆ ಮಾತ್ರ ದೇವರ ಕೃಪೆ ಉಳಿಯುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

3. ಅದರಂತೆ ಭಗವಂತನೇ ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡುತ್ತಾನೆ; ಆದರೆ ಅದಕ್ಕೆ ನಾವು ನಮ್ಮ ಕರ್ತವ್ಯವನ್ನೂ ಮಾಡಬೇಕು ಎಂದು ಹೇಳಿದರು.

ಗಮನಾರ್ಹ ಅಂಶಗಳು
1918 ರಲ್ಲಿ ವಾರಣಾಸಿಯಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ನಡೆಯುತ್ತಿದ್ದಾಗ ಹಿಂದೂಗಳ ಪರವಾಗಿ ಶ್ರೀರಾಮ ಜನ್ಮಭೂಮಿಯ ತೀರ್ಪು ಬಂದಿತ್ತು. ಇದು ಬಹಳ ಒಳ್ಳೆಯ ಸಂಕೇತವಾಗಿದೆ ಎಂದು ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ ಇವರು ಹೇಳಿದರು.