ಉತ್ತರಖಂಡ ಯಾರ ಅಪ್ಪನದಲ್ಲಂತೆ !
ಡೆಹರಾಡುನ್ (ಉತ್ತರಾಖಂಡ) – ದೇವಭೂಮಿ ಉತ್ತರಾಖಂಡನ ಉತ್ತರಕಾಶಿಯಲ್ಲಿ ‘ಲವ್ ಜಿಹಾದ್’ ಪ್ರಕರಣದಲ್ಲಿ ಮುಸಲ್ಮಾನರಿಗೆ ಅಂಗಡಿಗಳು ಖಾಲಿ ಮಾಡಲು ಅನಿವಾರ್ಯಗೊಳಿಸಿದ್ದರಿಂದ ಉತ್ತರಪ್ರದೇಶದ ಸಂಭಲ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕ ಶಫಿಕುರ ರಹಮಾನ್ ಬರ್ಕ್ ಇವರು ಪುಷ್ಕರ ಸಿಂಹ ಧಾಮೀ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಉತ್ತರಾಖಂಡ ಯಾರಪ್ಪನದು ಅಲ್ಲ’, ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಮುಸಲ್ಮಾನ ಜನಾಂಗದ ಜನರಿಂದ ‘ಲವ್ ಜಿಹಾದ್’ ಪ್ರಕರಣ ಘಟಿಸಿದ ನಂತರ ಪುರೋಲಾದಲ್ಲಿನ ಬಾಡಿಗೆ ಅಂಗಡಿಗಳು ಖಾಲಿ ಮಾಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.
ಬರ್ಕ್ ಮಾತು ಮುಂದುವರಿಸುತ್ತಾ, ‘ನಾವು ಮುಸಲ್ಮಾನರಿಗೆ ಉತ್ತರಾಖಂಡದಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಅಲ್ಲಿಂದ ಸ್ಥಳಾಂತರವಾಗಲು ಬಿಡುವುದಿಲ್ಲ.’ ೨೦೨೪ ರ ಲೋಕಸಭಾ ಚುನಾವಣೆ ಗೆಲ್ಲುವುದಕ್ಕಾಗಿ ಭಾಜಪ ಸರಕಾರ ಹಿಂದೂ ಮತ್ತು ಮುಸಲ್ಮಾನರ ಮತ್ತೆ ದ್ವೇಷದ ರಾಜಕಾರಣ ನಡೆಸುತ್ತುದ್ದಾರೆ ಎಂದು ಆರೋಪ ಮಾಡಿದರು. ಇನ್ನೊಂದು ಕಡೆ ಜಮಿಯತ ಉಲೇಮಾ-ಎ-ಹಿಂದನ ಅಧ್ಯಕ್ಷ ಮೌಲಾನ ಮಹಮ್ಮದ್ ಆಸದ್ ಮದನಿ ಇವರು ಉತ್ತರಕಾಶಿಯಲ್ಲಿ ಮುಸಲ್ಮಾನರ ಅಂಗಡಿಗಳನ್ನು ಖಾಲಿ ಮಾಡಿಸಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮದನಿ ಇವರು ಕೇಂದ್ರ ಗೃಹ ಸಚಿವ ಅಮಿತ ಶಹಾ ಮತ್ತು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರಿಗೆ ಪತ್ರ ಬರೆದು ಭಾರತದ ನಾಗರಿಕರ ಜೀವ ಮತ್ತು ಆಸ್ತಿಯ ರಕ್ಷಣೆ ಮಾಡಲು ಆಗ್ರಹಿಸಿದ್ದಾರೆ. (ಮುಸಲ್ಮಾನರ ಮೇಲೆ ಸಂಕಷ್ಟ ಬಂದಾಗ ಅವರ ಜೀವ ಮತ್ತು ಆಸ್ತಿಯ ಕಾಳಜಿ ಮಾಡುವ ಮೌಲಾನಾ ಮದನಿ ಇವರಿಗೆ ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳ ಮೇಲೆ ಬಂದಿರುವ ಇಂತಹ ಸಂಕಷ್ಟದ ಸಮಯದಲ್ಲಿ ಈ ರೀತಿ ಆಗ್ರಹಿಸಿರುವುದು ಕೇಳಿರಲಿಲ್ಲ ! – ಸಂಪಾದಕರು)
ಮೌಲಾನ ಮದನಿ ಇವರು ಈ ಪತ್ರದಲ್ಲಿ ಜೂನ್ ೧೫, ೨೦೨೩ ರಂದು ಉತ್ತರಕಾಶಿಯಲ್ಲಿ ನಡೆಯುವ ಮಹಾಪಂಚಾಯತ್ ನಿಲ್ಲಿಸಲು ಒತ್ತಾಯಿಸಿದಾರೆ.
(ಸೌಜನ್ಯ : VK News)
ಸಂಪಾದಕರ ನಿಲುವುಪ್ರತಿಯೊಂದು ವಿಷಯವನ್ನು ರಾಜಕಾರಣ ಮಾಡುವ ಶಾಸಕ ಶಫಿಕುರ್ ರಹಮಾನ್ ಬರ್ಕ್ ಇವರು ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಬಲೆಗೆ ಸಿಲುಕಿಸಿ ಅವರ ಜೀವನ ನಾಶ ಮಾಡುವ ಅವರ ಧರ್ಮ ಬಾಂಧವರ ಕಿವಿ ಹಿಂಡಿದರೆ, ಅದು ಯೋಗ್ಯವಾಗುತ್ತಿತ್ತು ! |