ಉಡುಪಿ – ಪೆರ್ಡೂರಿನ ಪುರಾತನ ಅನಂತ ಪದ್ಮನಾಭ ದೇವಸ್ಥಾನಕ್ಕೆ ಹಾನಿ ಯಾಗದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನ್ಯಾಯಾಲಯವು ಆದೇಶ ನೀಡಿದೆ. ಈ ದೇವಸ್ಥಾನದ ಭದ್ರತೆಗಾಗಿ ಸ್ಥಳೀಯ ನಿವಾಸಿ ರಂಜಿತ್ ಪ್ರಭು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ನ್ಯಾಯಾಲಯದಲ್ಲಿ ಮೊರೆ ಹೋಗಿದ್ದರು.
ದೇಗುಲದ ಪರ ವಾದ ಮಂಡಿಸಿದ ವಕೀಲ (ನ್ಯಾಯವಾದಿ) ಖೇತನ್ ಕುಮಾರ್ ಬಂಗೇರಾ ಇವರು ಮಾತನಾಡಿ, “ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನದ ವಾಸ್ತುವಿಗೆ ಹಾನಿಯಾಗುವುದು ಹಾಗೆಯೇ ದೇಗುಲದ ರಥಮಾರ್ಗ ಹಾನಿ ಆಗಬಹುದು” ಎಂದು ಹೇಳಿದ್ದಾರೆ.
ಈ ಕುರಿತು ನ್ಯಾಯಾಲಯವು “ಹೆದ್ದಾರಿ ವಿಸ್ತರಣೆ ಅಥವಾ ಯಾವುದೇ ಅಭಿವೃದ್ಧಿ ಕಾರ್ಯದ ವೇಳೆ ದೇವಸ್ಥಾನಗಳ ಸಮೇತ ಧಾರ್ಮಿಕ ಕಟ್ಟಡಗಳಿಗೆ ಹಾನಿ ಆಗುವ ಸಂದರ್ಭದಲ್ಲಿ ಪ್ರಾಧಿಕಾರವು ಪರ್ಯಾಯ ಮಾರ್ಗ ಅಳವಡಿಸಿಕೊಳ್ಳಬೇಕು”, ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶ ಇದೆ. ಆದ್ದರಿಂದ ಈ ಪ್ರಕರಣದಲ್ಲಿ ಜನರ ಧಾರ್ಮಿಕ ಭಾವನೆ ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರವು ಪರ್ಯಾಯ ಮಾರ್ಗ ಅಳವಡಿಸಿಕೊಳ್ಳಬೇಕು,’’ಎಂದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಆದೇಶ ನೀಡಿದೆ.