IND vs BAN Cricket : ಚೆನ್ನೈನ ಚಿದಂಬರಂ ಸ್ಟೇಡಿಯಂ ಹೊರಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ

  • ಭಾರತ – ಬಾಂಗ್ಲಾದೇಶ ಕ್ರಿಕೆಟ್ ಪಂದ್ಯಕ್ಕೆ ಹಿಂದೂ ಮಕ್ಕಲ ಕಛ್ಚಿ ಸಂಘಟನೆಯ ವಿರೋಧ

  • ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

(ಹಿಂದೂ ಮಕ್ಕಲ ಕಛ್ಚಿ ಎಂದರೆ ಹಿಂದೂ ಜನತಾ ಪಕ್ಷ)

ಪ್ರತಿಭಟನೆ ನಡೆಸುತ್ತಿರುವ ಹಿಂದೂ ಮಕ್ಕಲ ಕಛ್ಚಿ ಸಂಘಟನೆಯ ಅಧ್ಯಕ್ಷ ಶ್ರೀ. ಅರ್ಜುನ್ ಸಂಪಥ ಮತ್ತು ಕಾರ್ಯಕರ್ತರು

ಚೆನ್ನೈ (ತಮಿಳುನಾಡು) – ಬಾಂಗ್ಲಾದೇಶದಲ್ಲಿ ಜಿಹಾದಿ ಮುಸಲ್ಮಾನರಿಂದ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ಭಾರತದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕ್ರಿಕೆಟ್ ಸರಣಿ ಪಂದ್ಯದ ಆಯೋಜನೆ ಮಾಡದಂತೆ ಕಳೆದ ಅನೇಕ ದಿನಗಳಿಂದ ಹಿಂದೂ ಸಂಘಟನೆಗಳು ಆಗ್ರಹಿಸುತ್ತಿದೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಸಹಿತ ಅನೇಕ ಸಂಘಟನೆಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಬಿಸಿಐಗೆ) ಮನವಿ ಕೂಡ ನೀಡಿದೆ. ಆದರೂ ಕೂಡ ಈ ಪಂದ್ಯ ಭಾರತದಲ್ಲಿ ಆಡಲಾಗುತ್ತಿದೆ. ಇದರಲ್ಲಿ ಮೊದಲ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸಪ್ಟೆಂಬರ್ ೧೯ ರಂದು ಆರಂಭವಾಗಿದೆ. ಬೆಳಿಗ್ಗೆ ಹಿಂದೂ ಮಕ್ಕಲ ಕಛ್ಚಿ ಸಂಘಟನೆಯು ಸ್ಟೇಡಿಯಂ ಹೊರಗೆ ಪ್ರತಿಭಟನೆ ನಡೆಸಿದರು.

ಆ ಸಮಯದಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಪ್ರತಿಭಟನೆಯ ನಂತರ ಹಿಂದೂ ಮಕ್ಕಲ ಕಛ್ಚಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ್ ಸಂಪಥ ಇವರು ಸ್ಟೇಡಿಯಂ ವ್ಯವಸ್ಥಾಪಕರಿಗೆ ಪಂದ್ಯ ರದ್ದುಗೊಳಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು. ಇದರ ಕುರಿತು ವ್ಯವಸ್ಥಾಪಕರು, ‘ಬಿಬಿಸಿಐ ಜೊತೆಗೆ ನಮ್ಮ ಯಾವುದೇ ಸಂಬಂಧವಿಲ್ಲ; ಆದರೆ ‘ನಾವು ನಿಮ್ಮ ಅನಿಸಿಕೆ ತಿಳಿಸುವೆವು.’ ಈ ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಈ ಸಂಘಟನೆಯ ೫೦ ಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಅನ್ಯಾಯವಾಗಿ ವಶಕ್ಕೆ ಪಡೆದರು, ಎಂದು ಶ್ರೀ. ಅರ್ಜುನ್ ಸಂಪಥ ಇವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಮಾಹಿತಿ ನೀಡಿದರು.