ನ್ಯೂಯಾರ್ಕ್ (ಅಮೆರಿಕ) – ಕೆಲ ದಿನಗಳ ಹಿಂದೆ ಇಲ್ಲಿನ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ಧ್ವಂಸ ಮಾಡಿದ ಘಟನೆ, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫಲಕಗಳ ಮೇಲೆ ಆಕ್ಷೇಪಾರ್ಹ ಪದಗಳನ್ನು ಬರೆದಿರುವ ಘಟನೆಯನ್ನು ನ್ಯೂಯಾರ್ಕ್‌ನಲ್ಲಿ ಅಮೆರಿಕಾದ ಸಂಸದ ಟಾಮ್ ಸುವೋಝಿ ಸಂಸತ್ತಿನಲ್ಲಿ ಮಾತನಾಡುವಾಗ ಖಂಡಿಸಿದ್ದಾರೆ.
ಟಾಮ್ ಸುವೋಝಿ ಮುಂದೆ ಮಾತನಾಡಿ,
1. ದ್ವೇಷವು ಯಾವಾಗಲೂ ಮಾನವ ಅಸ್ತಿತ್ವದ ಒಂದು ಭಾಗವಾಗಿದೆ; ಆದರೆ ಇಂದು ನಾವು ಬಹಳಷ್ಟು ದ್ವೇಷ ಪೂರ್ಣ ಅಪರಾಧಗಳನ್ನು ನೋಡುತ್ತೇವೆ. ಗೂಂಡಾಗಳು ಹಿಂದೂ ಸಮುದಾಯದ ವಿರುದ್ಧ ದ್ವೇಷ ಮತ್ತು ಕಟ್ಟರವಾದಿಯ ಹೆಸರಿನಲ್ಲಿ ಶ್ರೀ ಸ್ವಾಮಿನಾರಾಯಣ ದೇವಸ್ಥಾನವನ್ನು ಹಾನಿಗೊಳಿಸಿದ್ದಾರೆ.
2. ಹಿಂದೂಗಳು ಕೈ ಜೋಡಿಸಿ ಇತರರಿಗೆ ‘ನಮಸ್ತೆ’ ಹೇಳುತ್ತಾರೆ. ಆ ಸಮಯದಲ್ಲಿ, ಅವರ ಮನಸ್ಸಿನಲ್ಲಿ ಎದುರುಗಡೆಯ ವ್ಯಕ್ತಿಯ ಬಗ್ಗೆ ಗೌರವ ಇರುತ್ತದೆ. ನಾವುಗಳೂ ಪರಸ್ಪರ ಹೆಚ್ಚು ಗೌರವದಿಂದ ವರ್ತಿಸಬೇಕು.
3. ಮತಾಂಧತೆ ಮತ್ತು ದ್ವೇಷದ ಕೃತ್ಯಗಳು ಪದೇ ಪದೇ ಏಕೆ ಘಟಿಸುತ್ತದೆ ? ಇದು ಮಿತಿಮೀರಿದ್ದರಿಂದ ನಡೆಯುತ್ತಿದೆಯೇ ? ಜವಾಬ್ದಾರಿಯ ಕೊರತೆಯಿಂದ ಆಗುತ್ತಿದೆಯೇ ? ಈ ಸಮಸ್ಯೆಯನ್ನು ಹೋಗಲಾಡಿಸಲು ನಾವುಗಳು ಏನು ಮಾಡಬೇಕು ? ಕಾರಣ ಈ ಸಮಸ್ಯೆಗೆ ಉತ್ತರ ‘ದ್ವೇಷ’ ಅಲ್ಲ ‘ಪ್ರೀತಿ’ ಎಂದು ಹೇಳಿದ್ದಾರೆ.