ಗುರುವಾಯೂರ್ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿದ ಕೇರಳ ಉಚ್ಚ ನ್ಯಾಯಾಲಯ

ಈ ಪ್ರದೇಶದಲ್ಲಿ ಓರ್ವ ಮಹಿಳೆಯಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಆಚರಣೆ !

ತಿರುವನಂತಪುರಂ (ಕೇರಳ) – ದೇವಸ್ಥಾನವು ಕೇಕ್ ಕತ್ತರಿಸುವ ಸ್ಥಳವಲ್ಲ. ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಪದ್ಧತಿ ಮತ್ತು ಪರಂಪರೆಯ ಪ್ರಕಾರ ಗುರುವಾಯೂರ್ ಶ್ರೀ ಕೃಷ್ಣದೇವಸ್ಥಾನದಲ್ಲಿ ಪೂಜೆ ಮಾಡುವ ಅಧಿಕಾರವಿದೆ, ಎಂದು ಹೇಳುತ್ತಾ ಕೇರಳ ಉಚ್ಚ ನ್ಯಾಯಾಲಯವು ಈ ದೇವಸ್ಥಾನ ಪರಿಸರದಲ್ಲಿನ ನಾದಪಂಥಲ ಈ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ನಿಷೇದ ಹೇರಿದೆ. ಓರ್ವ ಮಹಿಳೆಯು ನಾದಪಂಥಲದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಳು ಮತ್ತು ಈ ಘಟನೆಯನ್ನು ಚಿತ್ರೀಕರಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಜನರಲ್ಲಿ ಅಸಮಾಧಾನ ಭುಗಿಲೆದ್ದಿತು. ಇಂತಹ ಘಟನೆಗಳು ದೇವಸ್ಥಾನದ ಘನತೆಯ ವಿರುದ್ಧವಾಗಿರುವುದರಿಂದ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದರು. ಉಚ್ಚ ನ್ಯಾಯಾಲಯದ ನಿರ್ಣಯದಿಂದ ಈಗ ನಾದಪಂಥಲ ಪರಿಸರದಲ್ಲಿ ವಿವಾಹ ಸಮಾರಂಭ ಮತ್ತು ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ಇದಲ್ಲದೆ ಯಾವುದೇ ಪ್ರಸಂಗಗಳ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ. ನಾದಪಂಥಲ ಇದು ಒಂದು ತತ್ಕಾಲಿಕ ರಚನೆ ಇರುವುದು. ಭಕ್ತರಿಗೆ ಬಿಸಿಲು ಮತ್ತು ಮಳೆಯಿಂದ ಆಸರೆ ನೀಡುವುದಕ್ಕಾಗಿ ದೇವಸ್ಥಾನದ ಎದುರಿಗೆ ಅದು ಕಟ್ಟಲಾಗಿದೆ.

ನ್ಯಾಯಾಲಯವು, ದೇವಸ್ಥಾನದ ಒಳಗಿನ ಭಾಗ, ವಿಶೇಷವಾಗಿ ಪೂರ್ವದ ಕಡೆಗಿನ ‘ದೀಪಸ್ಥಂಭ’ದ ಚಿತ್ರೀಕರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ವ್ಯವಸ್ಥಾಪಕ ಸಮಿತಿ, ಗುರುವಾಯೂರ್ ದೇವಸ್ಥಾನ ಸುರಕ್ಷಾ ವಿಭಾಗ ಇವರು ಭಕ್ತರಿಗೆ ತೊಂದರೆ ಆಗಬಹುದಾದ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನದ ನಾದಪಂಥದಲ್ಲಿ ಇಂತಹ ಯಾವುದೇ ಕೃತಿಗಳು ನಡೆಯದಂತೆ ದೃಢಪಡಿಸಬೇಕಾಗುವುದು. ಇದರಲ್ಲಿ ಅಪ್ರಾಪ್ತ ಹುಡುಗರು, ಹಿರಿಯ ನಾಗರಿಕರು ಮತ್ತು ಅಂಗವಿಕಲ ವ್ಯಕ್ತಿಗಳ ಸಮಾವೇಶವಿದೆ.

ಅಗತ್ಯವಿದ್ದರೆ ದೇವಸ್ವಂ ಆಡಳಿತ ಪೊಲೀಸರ ಸಹಾಯ ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ ಪೊಲೀಸರು ಅಗತ್ಯವಿರುವ ಸಹಕಾರ ನೀಡುವವರು. ಗುರುವಾಯೂರು ದೇವಸ್ವಂ ಆಡಳಿತ ಸಮಿತಿ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನದಲ್ಲಿ ಭಕ್ತರಿಂದ ಭಗವಂತ ಗುರುವಾಯೂರಪ್ಪನ ಯಥೋಚಿತ ಪೂಜೆಗಾಗಿ ಎಲ್ಲಾ ರೀತಿಯ ಸೌಲಭ್ಯ ಲಭ್ಯ ಮಾಡಿಕೊಡಲು ಭಾದ್ಯರಾಗಿದ್ದಾರೆ, ಎಂದು ಕೂಡ ನ್ಯಾಯಾಲಯವು ಈ ಸಮಯದಲ್ಲಿ ಸ್ಪಷ್ಟ ಪಡಿಸಿದೆ.