ಜಗತ್ತಿನಲ್ಲಿ ಚೀನಾದ ಒಂದನೆ ಮೂರರಷ್ಟು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದರಿಂದ ಚೀನಾದ ಕುರಿತು ಆತಂಕ !
ನವ ದೆಹಲಿ – ಲೆಬನಾನನಲ್ಲಿ ಪೇಜರ ಸಹಿತ ಇತರ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ನಡೆದಿರುವ ಸ್ಫೋಟದ ನಂತರ ಜಗತ್ತಿನಲ್ಲಿನ ಸರಕಾರಗಳು ಎಚ್ಚೆತ್ತುಕೊಂಡಿದೆ. ತಂತ್ರಜ್ಞಾನವನ್ನು ಉಪಯೋಗಿಸಿ ಪೇಜರ್ (ವಯರ್ಲೆಸ್ ಉಪಕರಣ) ಯಾವ ರೀತಿ ಸ್ಫೋಟಗೋಳಿಸಲಾಗಿದೆ, ಆದ್ದರಿಂದ ತಂತ್ರಜ್ಞಾನ ಮತ್ತು ಅದರ ಸುರಕ್ಷೆಯ ಕುರಿತು ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಜಗತ್ತಿನಲ್ಲಿ ಚೀನಾದ ಒಂದನೆ ಮೂರರಷ್ಟು ಉಪಕರಣಗಳು ಉಪಯೋಗಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚೀನಾ ತಂತ್ರಜ್ಞಾನದ ಬಳಕೆಯ ಕುರಿತು ಮತ್ತೊಮ್ಮೆ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಚೀನಾದ ತಂತ್ರಜ್ಞಾನ ಸಂದೇಹದ ಸುಳಿಗೆ ಸಿಲುಕುವುದು ಇದೇನು ಮೊದಲು ಬಾರಿ ಅಲ್ಲ. ‘ಚೀನಾದ ಕಾರುಗಳು, ಗೃಹ ಉಪಯೋಗಿ ಉಪಕರಣಗಳು ಮತ್ತು ಲೈಟ್ ಬಲ್ಪ್‌ನಲ್ಲಿ ಮೈಕ್ರೋ ಚಿಪ್ ಅನ್ನು ಬೇಹುಗಾರಿಕೆಗಾಗಿ ಉಪಯೋಗಿಸಬಹುದು. ಹಾಗೂ ಚೀನಾ ಲ್ಯಾಪ್ಟಾಪ್, ವಾಯ್ಸ್ ಕಂಟ್ರೋಲ್ ಸ್ಮಾರ್ಟ್ ಸ್ಪೀಕರ್, ಸ್ಮಾರ್ಟ್ ಗಡಿಯಾಳಗಳು, ಸ್ಮಾರ್ಟ್ ಎನರ್ಜಿ ಮೀಟರ್ ಮತ್ತು ಫ್ರಿಜ್ ಇವುಗಳ ಇಂಟರ್ನೆಟ್ ಸಹಾಯದಿಂದ ಬೇಹುಗಾರಿಕೆ ಮಾಡಲು ಸಾಧ್ಯವಾಗುತ್ತದೆ, ಎಂದು ಈ ಹಿಂದೆ ಎಲ್ಲಾ ಮಾತನಾಡುತ್ತಿದ್ದರು.
ಭಾರತದ ವಿರುದ್ಧ ಚೀನಾ ಈ ತಂತ್ರಜ್ಞಾನದ ಉಪಯೋಗ ಮಾಡುವ ಆತಂಕ
ಯಾವಾಗ ಇಸ್ರೇಲ್ ಗುಪ್ತಚರ ಸಂಸ್ಥೆಯು ಪೇಜರ್ ಸ್ಫೋಟ ಮಾಡಿದರೋ, ಆಗ ಚೀನಾದಿಂದ ಆಮದು ಮಾಡಿರುವ ಮೊಬೈಲ್, ಟಿವಿ, ಮನೆ ಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳು ಬೇಹುಗಾರಿಕೆಗಾಗಿ ಉಪಯೋಗಿಸುವ ಸಾಧ್ಯತೆ ಇದೆ. ಇದರ ಮೂಲಕ ಇತರ ದೇಶಗಳಲ್ಲಿ ಸ್ಫೋಟ ಮಾಡಬಹುದಾಗಿದೆ. ಭಾರತದ ಸಂದರ್ಭದಲ್ಲಿ ಇದರ ಅಪಾಯ ಹೆಚ್ಚುತ್ತದೆ; ಕಾರಣ ಚೀನಾ ಏನಾದರೂ ಇಂತಹ ತಂತ್ರಜ್ಞಾನ ತನ್ನ ಮಿತ್ರ ಪಾಕಿಸ್ತಾನಕ್ಕೆ ನೀಡಿದರೆ ಪಾಕಿಸ್ತಾನ ಅದನ್ನು ಭಾರತದ ವಿರುದ್ಧ ಉಪಯೋಗಿಸಬಹುದು.
ಜಗತ್ತಿನಲ್ಲಿ ರಫ್ತು ಮಾಡುವ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚೀನಾದ ಪಾಲು ಸುಮಾರು ಒಂದನೇ ಮೂರರಷ್ಟು ಇದೆ. ಇದರ ಅರ್ಥ ಜಗತ್ತಿನಲ್ಲಿ ಮಾಡಲಾಗುವ ಪ್ರತಿಯೊಂದು ಮೂರು ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ೧ ಉಪಕರಣ ಚೀನಾ ತಯಾರಿಸಿದೆ. ಚೀನಾದ ಕಂಪನಿ ಹುವೇಯಿಯ (Huawei) ಬೇಹುಗಾರಿಕೆಯಿಂದ ಚೀನಾ ಮತ್ತು ಅಮೆರಿಕ ಇವರಲ್ಲಿ ಅನೇಕ ವರ್ಷಗಳಿಂದ ಸಂಘರ್ಷ ಮುಂದುವರೆದಿದೆ. ಭಾರತವು ೫ G ನೆಟ್ವರ್ಕ್ ನಿಂದ ಚೀನಾ ಉತ್ಪಾದನೆಗಳನ್ನು ದೂರ ಇರಿಸಿದೆ. ಈ ಹಿಂದೆ ಅಮೇರಿಕಾ ಚೀನಾ ಉಪಕರಣಗಳ ಬಳಕೆಯ ಕುರಿತು ಆತಂಕ ವ್ಯಕ್ತಪಡಿಸಿತ್ತು. ಈಗ ಪೇಜರ್ ಸ್ಫೋಟದಿಂದ ಚೀನಾದ ತಂತ್ರಜ್ಞಾನದ ಕುರಿತು ಸಂದೇಹ ನಿರ್ಮಾಣವಾಗಿದೆ.
ಸಂಪಾದಕೀಯ ನಿಲುವುಚೀನಾದ ವಿಸ್ತಾರವಾದಿ ನೀತಿಯನ್ನು ನೋಡಿದರೆ ಚೀನಾವು ಇಂತಹ ಕೃತ್ಯವೆಸಗಿದರೇ ಆಶ್ಚರ್ಯವೇನಿಲ್ಲ ! ಚೀನಾಗೆ ಪಾಠ ಕಲಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿನ ಎಲ್ಲಾ ದೇಶಗಳು ಚೀನಾದ ವಿರುದ್ಧ ರಣಕಹಳೆ ಊದುವುದು ಅಗತ್ಯ ! |