ತೃಣಮೂಲ ಕಾಂಗ್ರೆಸ್ಸಿನ 2 ಗುಂಪುಗಳು 100 ಕಡೆಗಳಲ್ಲಿ ಪರಸ್ಪರರ ಮೇಲೆ ಬಾಂಬ್ ಎಸೆತ !

  • ಬಂಗಾಳದಲ್ಲಿ ಪಂಚಾಯತ ಸಮಿತಿಯ ಚುನಾವಣೆಯ ಹಿನ್ನೆಲೆಯಲ್ಲಿ ಹಿಂಸಾಚಾರ

  • ಬಾಂಕುಡಾ ಜಿಲ್ಲೆಯಲ್ಲಿ ಪೊಲೀಸರು 12 ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ

ಕಲ್ಕತ್ತಾ (ಬಂಗಾಳ) – ದಕ್ಷಿಣ ಪರಗಣಾ ಜಿಲ್ಲೆಯಲ್ಲಿರುವ ಕೈನಿಂಗ ನಗರದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ಸಿನ 2 ಗುಂಪುಗಳ ನಡುವೆ ಹಿಂಸಾಚಾರ ನಡೆಯಿತು. ಈ ಸಮಯದಲ್ಲಿ 100 ಕಡೆಗಳಲ್ಲಿ ನಡೆದ ಘಟನೆಗಳಲ್ಲಿ 2 ಗುಂಪುಗಳ ಕಾರ್ಯಕರ್ತರು ಪರಸ್ಪರ ಬಾಂಬ್ ಗಳನ್ನು ಎಸೆದರು. ಬಂಗಾಳದಲ್ಲಿ ಜುಲೈ 8 ರಂದು ಪಂಚಾಯತ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆದಿದೆ.

1. ಕೈನಿಂಗ ನಗರದಲ್ಲಿ ಪಂಚಾಯತ ಸಮಿತಿಯ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳ ಸೂಚಿಯನ್ನು ಅಂತಿಮಗೊಳಿಸಲು ತೃಣಮೂಲ ಕಾಂಗ್ರೆಸ್ಸಿನ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ 2 ಗುಂಪುಗಳ ಕಾರ್ಯಕರ್ತರು ಪರಸ್ಪರ ಬಾಂಬ್ ಗಳನ್ನು ಎಸೆದರು.

2. ಆನಂತರ ತೃಣಮೂಲ ಕಾಂಗ್ರೆಸ್ಸಿನ ನಾಯಕರಾದ ಸೈಬಲ ಲಾಹಿಡಿಯವರ ಸಮರ್ಥಕರು ಬಸ್ ನಿಲ್ದಾಣದ ಪಕ್ಕದ ರಸ್ತೆಯಲ್ಲಿನ ವಾಹನ ಸಂಚಾರವನ್ನು ತಡೆದರು. ಲಾಹಿಡಿಯವರ ಸಮರ್ಥಕರು ತಾವು ಪ್ರಾಂತ್ಯ ಕಾರ್ಯಾಲಯಕ್ಕೆ ನಾಮಪತ್ರವನ್ನು ತುಂಬಿಸಲು ಹೋಗುತ್ತಿರುವಾಗ ತೃಣಮೂಲ ಕಾಂಗ್ರೆಸ್ಸಿನ ಎರಡನೇ ಗುಂಪಿನ ಕಾರ್ಯಕರ್ತರು ತಮ್ಮನ್ನು ತಡೆದರು ಎಂದು ಆರೋಪಿಸಿದರು. ಇನ್ನೊಂದು ಗುಂಪಿನ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ಸಿನ ಶಾಸಕರಾದ ಪರೇಶ ರಾಮರವರ ಆಪ್ತರು ಎಂದು ತಿಳಿಯಲಾಗುತ್ತದೆ.

3. ಬಾಂಕುಡಾ ಜಿಲ್ಲೆಯಲ್ಲಿ ಪೊಲೀಸರು ನಿಯಮಿತವಾಗಿ ಗಸ್ತು ಹಾಕುತ್ತಿರುವಾಗ ಒಂದು ಚತುಷ್ಚಕ್ರ ವಾಹನದಿಂದ ಒಂದು ಬ್ಯಾಗನ್ನು ವಶಕ್ಕೆ ಪಡೆದರು. ಅದರಲ್ಲಿ 12 ಬಾಂಬ್ ಗಳಿದ್ದವು. ಪೊಲೀಸರು ಈ ಪ್ರಕರಣದಲ್ಲಿ 8 ಜನರನ್ನು ಬಂಧಿಸಿದ್ದಾರೆ.

4. ರಾಜ್ಯದಲ್ಲಿ ಪಂಚಾಯತ ಸಮಿತಿಯ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಉಚ್ಚ ನ್ಯಾಯಾಲಯವು ಕೇಂದ್ರೀಯ ರಕ್ಷಣಾ ದಳದ ಪೊಲೀಸರಿಗೆ ಸಂವೇದನಾಶೀಲ ಜಿಲ್ಲೆಗಳಲ್ಲಿ ನಿಯೋಜಿಸುವಂತೆ ಆದೇಶಿಸಿದೆ.

ಸಂಪಾದಕೀಯ ನಿಲುವು

  • ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ಸ ಅಂದರೆ ಬಾಂಬ್ ತಯಾರಿಸುವ ಪಕ್ಷ ! ಕಾರ್ಯಕರ್ತರು 100 ಕಡೆಗಳಲ್ಲಿ ಪರಸ್ಪರರರ ಮೇಲೆ ಬಾಂಬ್ ಗಳನ್ನು ಎಸೆದಿದ್ದಾರೆ; ಇದರಿಂದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಬಳಿ ಎಷ್ಟು ಪ್ರಮಾಣದಲ್ಲಿ ಬಾಂಬ್ ನ ಸಂಗ್ರಹವಿದೆ ಎಂಬುದು ಗಮನಕ್ಕೆ ಬರುತ್ತದೆ. ಇಂತಹವರನ್ನು ಪೋಷಿಸುವ ಸಮಾಜಘಾತಕ ಪಕ್ಷದ ಮೇಲೆ ನಿರ್ಬಂಧ ಹೇರಬೇಕು !
  • ಒಂದು ರಾಜ್ಯದಲ್ಲಿ ಪರಸ್ಪರರ ಮೇಲೆ ಬಾಂಬ್ ಗಳನ್ನು ಎಸೆದು ಹಿಂಸಾಚಾರ ನಡೆಸುವ ಪಕ್ಷವು ಅಧಿಕಾರದಲ್ಲಿರುವುದು ಪ್ರಜಾಪ್ರಭುತ್ವಕ್ಕೆ ತಗುಲಿದ ಕಳಂಕವೇ ಆಗಿದೆ ! ತಮ್ಮನ್ನು ಪ್ರಜಾಪ್ರಭುತ್ವದ ರಕ್ಷಕರೆಂದು ತಿಳಿಯುವವರು ಈಗ ತೃಣಮೂಲ ಕಾಂಗ್ರೆಸ್ಸ ಮಾಡುತ್ತಿರುವ ಈ ಹಿಂಸಾಚಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ ?
  • ಇಂತಹ ಕಾರ್ಯಕರ್ತರಿರುವ ಅಧಿಕಾರಾರೂಢ ಪಕ್ಷದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ನೆಲಕಚ್ಚಿದರೆ ಅದರಲ್ಲಿ ಆಶ್ಚರ್ಯವೇನು ?