ಪಾಕಿಸ್ತಾನದಲ್ಲಿನ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ, ಮತಾಂತರ ಮತ್ತು ಬಲವಂತವಾಗಿ ವಿವಾಹ !

ಕಳೆದ 2 ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಮೇಲಿನ ಅತ್ಯಾಚಾರದ ೨೦೨ ಘಟನೆಗಳಲ್ಲಿ ೧೨೦ ಸಂತ್ರಸ್ತರು ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಇಲ್ಲಿಯ ಸಿಂಧ ಪ್ರಾಂತದ ಓರ್ವ ೧೪ ವರ್ಷದ ಹಿಂದೂ ಹುಡುಗಿಯನ್ನು ಅಪಹರಣ ಮಾಡಿ ಮತಾಂತರ ಮಾಡಿದ ನಂತರ ಬಲವಂತವಾಗಿ ಓರ್ವ ಮುಸಲ್ಮಾನ ಹುಡುಗನ ಜೊತೆಗೆ ವಿವಾಹ ಮಾಡಿಸಲಾಗಿದೆ. ಸಂತ್ರಸ್ತೆಯ ಹೆಸರು ಸೋಹನಾ ಶರ್ಮ ಎಂದಾಗಿದ್ದು ಆಕೆಯನ್ನು ಕಾಝಿ ಅಹಮದ್ ಇವನು ಅಪಹರಣ ಮಾಡಿ ಮತಾಂತರ ಮಾಡಿದ್ದಾನೆ. ಆಕೆಯ ಸಹಿ ಪಡೆದು ವಿವಾಹ ಪ್ರಮಾಣ ಪತ್ರ ತಯಾರಿಸಿಲಾಗಿದೆ. ಇದರಲ್ಲಿ ಯಾಕೆ ಸ್ವ ಇಚ್ಛೆಯಿಂದ ಮುಸಲ್ಮಾನ ಹುಡುಗನ ಜೊತೆ ವಿವಾಹವಾಗಿದ್ದಾಳೆ ಎಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಿಂಧ ಪ್ರಾಂತದ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು ಪ್ರಾಂತಿಯ ಸಚಿವ ಮುಖೇಶ ಕುಮಾರ ಚಾವಲ ಇವರು, ಸರಕಾರಿ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಅವಶ್ಯಕ ಉಪಾಯ ಮಾಡಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ.

ಸಿಂಧ ಮತ್ತು ಪಂಜಾಬ ಪ್ರಾಂತ್ಯದಲ್ಲಿ ಬಹಳಷ್ಟು ಅತ್ಯಾಚಾರದ ಪ್ರಕರಣಗಳು

‘ಹ್ಯೂಮನ್ ರೈಟ್ಸ್ ವಿಥೌಟ್ ಫ್ರಂಟಿ ಇಯರ್ಸ್’ ಇದರ ವರದಿಯ ಪ್ರಕಾರ, ಪಾಕಿಸ್ತಾನ ರಾಜಕೀಯ ಮತ್ತು ಆರ್ಥಿಕ ದುಸ್ಥಿತಿಯಲ್ಲಿ ಕೂಡ ಬಲವಂತವಾಗಿ ವಿವಾಹ ಮತ್ತು ಮತಾಂತರದಂತಹ ದೊಡ್ಡ ಸಮಸ್ಯೆಯಿಂದ ಪೀಡಿತವಾಗಿದೆ. ಪಾಕಿಸ್ತಾನದ ‘ಕ್ರಿಶ್ಚಿಯನ್ ಸಾಲಿಡರಿಟಿ ವರ್ಲ್ಡ್ ವೈಡ್’ ಈ ಸಂಘಟನೆಯ ಸ್ಥಳೀಯ ಸಹ ಸಂಘಟನೆ ‘ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್’ ಇಂದ ಜಾರಿಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ೨೦೨೧ ಮತ್ತು ೨೦೨೨ ಈ ೨ ವರ್ಷಗಳ ಕಾಲಾವಧಿಯಲ್ಲಿ ಪಾಕಿಸ್ತಾನದ ಮಹಿಳೆ ಮತ್ತು ಹುಡುಗಿಯರ ಮೇಲಿನ ದೌರ್ಜನ್ಯದ ೨೦೨ ಘಟನೆಗಳು ದಾಖಲಾಗಿವೆ. ಇದರಲ್ಲಿ ಬಹಳಷ್ಟು ಘಟನೆಗಳು ಸಿಂಧ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ನಡೆದಿವೆ. ಇದರಲ್ಲಿ ೧೨೦ ಹಿಂದೂ ಮಹಿಳೆ ಮತ್ತು ಹುಡುಗಿಯರು,೮೦ ಕ್ರೈಸ್ತ ಮತ್ತು ೨ ಸಿಖ ಮಹಿಳೆಯರ ಸಮಾವೇಶವಿದೆ. ಹಿಂದುಳಿದ ವರ್ಗದ ಹಿಂದೂ ಹುಡುಗಿಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಆಘಾತವಾಗುತ್ತಿದೆ. ಒಟ್ಟು ೨೦೨ ಸಂತ್ರಸ್ತ ಮಹಿಳೆ ಮತ್ತು ಹುಡುಗಿಯರಲ್ಲಿ ಕನಿಷ್ಠ ೧೩೩ ಜನರು ೧೮ ವರ್ಷ ವಯಸ್ಸಿಗಿಂತಲೂ ಕಡಿಮೆ ಇರುವವರು ಎಂದರೆ ಅಪ್ರಾಪ್ತ ಹುಡುಗಿಯರಾಗಿದ್ದಾರೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇತರ ಸಮಯದಲ್ಲಿ ‘ಹಿಂದೂ ಧರ್ಮದಲ್ಲಿ ಮಹಿಳೆಯರ ಮೇಲೆ ಅನ್ಯಾಯವಾಗುತ್ತಿದೆ’, ಎಂದು ಕೂಗಾಡುವ ಸ್ತ್ರೀಮುಕ್ತಿ ಸಂಘಟನೆ ಮತ್ತು ಪ್ರಗತಿ(ಅಧೊಗತಿ)ಪರರು ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರ ಮೇಲಿನ ಅತ್ಯಾಚಾರದ ಬಗ್ಗೆ ಚಕಾರವು ಎತ್ತುವುದಿಲ್ಲ ಇದನ್ನು ತಿಳಿಯಿರಿ !

ಪಾಕಿಸ್ತಾನದಲ್ಲಿನ ಅಸುರಕ್ಷಿತ ಹಿಂದೂಗಳು !