ಮತಾಂಧನ ಮೇಲೆ ಕ್ರಮ ಕೈಗೊಳ್ಳಲು ವಿವಿಧ ಸಂಘಟನೆಗಳಿಂದ ಪೊಲೀಸರಲ್ಲಿ ಆಗ್ರಹ
(‘ಸ್ಟೇಟಸ್’ ಎಂದರೆ ಬೇರೆಯವರು ನೋಡುವ ಸಲುವಾಗಿ ತಮ್ಮ ಮೊಬೈಲ್ ನಲ್ಲಿ ಇಟ್ಟಿರುವ ಚಿತ್ರ ಅಥವಾ ಲೇಖನ ವಿಡಿಯೊ)
(ಈ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡವುದಾಗಿರದೇ ನಿಜಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ಲಂಜಾ ಜೂನ್ ೮ (ವಾರ್ತೆ) – ಶಿವಾಜೀ ಮಹಾರಾಜರ ರಾಜ್ಯಾಭಿಷೇಕ ದಿನದಂದು ಅಹಮದನಗರ ಮತ್ತು ಕೊಲ್ಹಾಪುರ ಈ ನಗರಗಳಲ್ಲಿ ಕ್ರೂರಿ ಅವರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಈ ಹಿಂದೂದ್ವೇಷಿ ಆಕ್ರಮಣಕಾರರನ್ನು ವೈಭವೀಕರಿಸುವ ಘಟನೆಗಳು ಮಾಸುವ ಮುನ್ನವೇ ರತ್ನಗಿರಿ ಜಿಲ್ಲೆಯ ಲಾಂಜಾ ನಗರದಲ್ಲಿ ಕೂಡ ಒಬ್ಬ ಮತಾಂಧನು ‘ಇನ್ಸ್ಟಾಗ್ರಾಮ್’ ನಲ್ಲಿ ಕ್ರೂರಿ ಟಿಪ್ಪು ಸುಲ್ತಾನಿನ ಸ್ಟೇಟಸ್ ಇಟ್ಟು ಅದನ್ನು ವೈಭವಿಕರಿಸಿರುವುದು ಬೆಳಕಿಗೆ ಬಂದಿದೆ. ಎಮಾನನುರಿ ಅಹಮದ್ ವಕೀಲ್ ಉಜಿಜ್ ಅಲಿಯಾಸ್ ಮೌಲು ಎಂದು ಮತಾಂಧನ ಹೆಸರಾಗಿದೆ. ಅವನ ನಗರದಲ್ಲಿ ನಡೆಯುತ್ತಿರುವ ಗಾಂಜಾ ಮಾರಾಟದ ಪ್ರಕರಣದಲ್ಲಿ ಕೂಡ ಅವನ ಕೈವಾಡವಿದೆ. ಎಮಾನನುರಿ ಇವನ ಈ ಕೃತ್ಯದಿಂದ ನಗರದಲ್ಲಿನ ಹಿಂದೂಗಳು ಆಕ್ರೋಶಗೊಂಡಿದ್ದಾರೆ. ಆದ್ದರಿಂದ ಇಲ್ಲಿಯ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಪಕ್ಷದ ಕಾರ್ಯಕರ್ತರು ಮತ್ತು ಶಿವಾಜಿ ಪ್ರೇಮಿಗಳು ಪೊಲೀಸ ಠಾಣೆಗೆ ಹೋಗಿ ಪೋಲಿಸ ಅಧಿಕಾರಿ ಅಟ್ಟುಗಡೆ ಇವರನ್ನು ಭೇಟಿ ಮಾಡಿ ಅವರ ಬಳಿ ‘ಮತಾಂಧ ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು’ ಮನವಿಯ ಮೂಲಕ ಒತ್ತಾಯಿಸಿದ್ದಾರೆ.
ಪೊಲೀಸರಿಗೆ ನೀಡಿರುವ ಮನವಿಯಲ್ಲಿ, ಪ್ರಸ್ತುತ ಕೊಲ್ಲಾಪುರದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರ ಮಾಡಿದರೆ ಈ ರೀತಿಯ ವೈಭವೀಕರಣದಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಇಂತಹ ವೈಭವೀಕರಣದಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಎಮಾನನುರಿ ಅಹಮದ್ ವಕೀಲ ಉಜೀಜ್ ಇವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಪೊಲೀಸರು ಆರೋಪಿಯನ್ನು ಬಂಧಿಸುವ ಬದಲು ಅವನಿಗೆ ಲಂಜಾ ಪಟ್ಟಣವನ್ನು ಶಾಶ್ವತ ಬಿಟ್ಟುಹೋಗುವಂತೆ ಆದೇಶ !ಇದರ ಅರ್ಥ ‘ಇನ್ನೊಂದು ಕಡೆ ಹೋಗಿ ಇದೇ ರೀತಿ ಅಪರಾಧ ಮಾಡು’, ಅದಕ್ಕಾಗಿ ಪೊಲೀಸರೇ ನೀಡಿರುವ ಸ್ವಾತಂತ್ರ್ಯ ಅಲ್ಲವೇ ? ನಾಗರೀಕರ ಮನವಿ ನೀಡಿದ ನಂತರ ಪೊಲೀಸ್ ಅಧಿಕಾರಿ ಅಟ್ಟುಗಡೆ ಇವರು ಎಮಾನನೂರಿ ಅಹಮದ್ ವಕೀಲ್ ಉಜಿಜ್ ಈ ಆರೋಪಿಗೆ ಹಾಗೂ ಅವನ ಸಹೋದರನಿಗೆ ಮತ್ತು ರಾಜಪುರದ ಅವನ ತಂದೆಗೆ ಪೊಲೀಸ ಠಾಣೆಗೆ ತ್ವರಿತ ಕರೆಸಿಕೊಂಡರು. ಆ ಸಮಯದಲ್ಲಿ ಆರೋಪಿಯು ‘ಇನ್ನು ಮುಂದೆ ನನ್ನಿಂದ ಈ ರೀತಿಯ ತಪ್ಪು ಅಥವಾ ಧಾರ್ಮಿಕ ಬಿರುಕು ನಿರ್ಮಾಣ ಮಾಡುವ ವರ್ತನೆ ಆಗುವುದಿಲ್ಲ’, ಎಂದು ಬರೆಸಿಕೊಂಡಿದ್ದಾರೆ. (ಹೀಗೆ ಬರೆದು ಕೊಟ್ಟು ವರ್ತನೆ ಸುಧಾರಿಸುವಷ್ಟು ಪೊಲೀಸರ ಭಯ ಮತಾಂಧರಿಗೆ ಇದೆಯೇ ? ಹೀಗೆ ಬರೆದು ಕೊಟ್ಟ ನಂತರ ಮತಾಂಧರು ಮತ್ತೆ ಅಪರಾಧ ಮಾಡುವುದಿಲ್ಲ, ಎಂದು ಪೊಲೀಸರಿಗೆ ನಂಬಿಕೆ ಇದೆಯೇ ?. – ಸಂಪಾದಕರು) ಈ ಸಮಯದಲ್ಲಿ ಆರೋಪಿಗೆ ಇನ್ನು ಮುಂದೆ ಲಾಂಜಾದಿಂದ ಶಾಶ್ವತವಾಗಿ ಬಿಟ್ಟುಹೋಗುವಂತೆ ಆದೇಶ ಪೊಲೀಸರು ನೀಡಿದ್ದಾರೆ. (ಅಂದರೆ ಪೊಲೀಸರೇ ಅಪರಾಧಿಗಳಿಗೆ ಅಪ್ರತ್ಯಕ್ಷ ರೀತಿಯಲ್ಲಿ ಅಭಯ ನೀಡಿದ ಹಾಗೆ ಅಲ್ಲವೇ ? – ಸಂಪಾದಕರು) |
ಸಂಪಾದಕೀಯ ನಿಲುವುಪೊಲೀಸರ ಬಳಿ ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಪೊಲೀಸರು ತಾವಾಗಿಯೇ ಇಂತಹ ಘಟನೆಗಳ ಮೇಲೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಮಹಾರಾಷ್ಟ್ರದಲ್ಲಿ ಔರಂಗಜೇಬ ಮತ್ತು ಟಿಪ್ಪು ಸುಲ್ತಾನರ ಬಹಿರಂಗವಾಗಿ ವೈಭವೀಕರಿಸುವುದು ಒಂದರ ಹಿಂದೆ ಒಂದು ಘಟನೆಗಳ ನಡೆಯುತ್ತಿರುವುದು ಎಂದರೆ ಹಿಂದುಗಳ ದಮನ ಮಾಡಿ ಗಲಭೆಗಳನ್ನು ಪ್ರಚೋದಿಸುವ ಜಿಹಾದಿಗಳ ಯೋಜಿತ ಷಡ್ಯಂತ್ರವೆ ಆಗಿದೆ ! ಸಮಾಜದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಸರಕಾರದಿಂದ ಇಂತಹ ವೃತ್ತಿಯ ಜನರಿಗೆ ಅದೇ ಸಮಯದಲ್ಲೇ ಕಡಿವಾಣ ಹಾಕಬೇಕು ! |