…ಮುಂಜಾನೆ ಬೇಗನೇ ಏಕೆ ಏಳಬೇಕು ?

ನಿದ್ರೆಯನ್ನು ಯಾವಾಗ ಮತ್ತು ಎಷ್ಟು ಮಾಡಬೇಕು ?

ಸದ್ಯ ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವ ಪದ್ಧತಿ ಎಲ್ಲೆಡೆ ರೂಢಿಯಾಗಿದೆ. ಆದ್ದರಿಂದ ಮುಂಜಾನೆ ಬೇಗ ಏಳಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವುದು, ಇದು ಅನೇಕ ರೋಗಗಳಿಗೆ ಆಮಂತ್ರಣ ನೀಡುತ್ತದೆ.

ಬ್ರಾಹ್ಮಿಮುಹೂರ್ತದಲ್ಲಿ ಎದ್ದರೆ ಆರೋಗ್ಯ ಉತ್ತಮವಾಗಿರುತ್ತದೆ !

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

‘ಆಯುರ್ವೇದದಲ್ಲಿ ‘ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು, ಎಂದು ಹೇಳಲಾಗಿದೆ. ಬ್ರಾಹ್ಮಿ ಮುಹೂರ್ತ ಎಂದರೆ ಸೂರ್ಯನು ಉದಯಿಸುವ ಮೊದಲಿನ ೯೬ ರಿಂದ ೪೮ ನಿಮಿಷಗಳ ಕಾಲ. ಈ ಸಮಯದಲ್ಲಿ ಎದ್ದರೆ ತನ್ನಷ್ಟಕ್ಕೆ ಶೌಚದ ಸಂವೇದನೆಗಳು ಉಂಟಾಗಿ ಹೊಟ್ಟೆ ಸ್ವಚ್ಛವಾಗುತ್ತದೆ. ಯಾರಿಗೆ ಬ್ರಾಹ್ಮಿಮುಹೂರ್ತದಲ್ಲಿ ಏಳಲು ಸಾಧ್ಯವಾಗುವುದಿಲ್ಲವೋ, ಅವರು ಕನಿಷ್ಠಪಕ್ಷ ಬೆಳಗ್ಗೆ ೭ ಗಂಟೆಯ ಒಳಗೆ ಏಳಬೇಕು. ಕ್ರಮೇಣ ಬೇಗ ಏಳಲು ಪ್ರಯತ್ನಿಸಬೇಕು. ಸೂರ್ಯೋದಯದ ನಂತರ ಮಲಗಿದರೆ ಮೈ ಜಡವಾಗುವುದು, ಆಲಸ್ಯ ಬರುವುದು, ಜೀರ್ಣಾಂಗವ್ಯೂಹದ ವ್ಯವಸ್ಥೆ ಕೆಡುವುದು, ಮಲಬದ್ಧತೆಯಂತಹ ತೊಂದರೆಗಳು ಉದ್ಭವಿಸಬಹುದು. ಮುಂಜಾನೆ ಗಾಳಿ ಶುದ್ಧವಾಗಿರುವುದರಿಂದ ಆ ಸಮಯದಲ್ಲಿ ವ್ಯಾಯಾಮ ಮಾಡಿದರೆ ಅದರಿಂದ ಹೆಚ್ಚುವರಿ ಲಾಭವಾಗುತ್ತದೆ.

ಋಷಿಗಳು ಸೂರ್ಯನ ಚಲನೆಗನುಸಾರ ಬ್ರಾಹ್ಮಿಮುಹೂರ್ತದಲ್ಲಿ ಪ್ರಾತರ್ವಿಧಿ,  ಸ್ನಾನ ಮತ್ತು ಸಂಧ್ಯಾವಂದನೆಯನ್ನು ಮಾಡುತ್ತಿದ್ದರು. ಅನಂತರ ವೇದಾಧ್ಯಯನ ಮತ್ತು ಕೃಷಿಕರ್ಮಗಳನ್ನು ಮಾಡುತ್ತಿದ್ದರು ಮತ್ತು ರಾತ್ರಿ ಬೇಗನೇ ಮಲಗುತ್ತಿದ್ದರು. ಆದ್ದರಿಂದ ಅವರ ದೈಹಿಕ ಆರೋಗ್ಯ ಉತ್ತಮವಾಗಿರುತ್ತಿತ್ತು; ಆದರೆ ಇಂದು ಜನರು ಪ್ರಕೃತಿನಿಯಮಗಳ ವಿರುದ್ಧ ನಡೆದುಕೊಳ್ಳುತ್ತಿರುವುದರಿಂದ ಅವರ ಆರೋಗ್ಯವು ಕೆಡುತ್ತಿದೆ. ಪಶುಪಕ್ಷಿಗಳೂ ಪ್ರಕೃತಿನಿಯಮಗಳಿಗನುಸಾರ ದಿನಚರಿ ಅನುಸರಿಸುತ್ತವೆ.

– (ಪರಾತ್ಪರ ಗುರು) ಪರಶುರಾಮ ಪಾಂಡೆ ಮಹಾರಾಜರು

ಬ್ರಾಹ್ಮಿಮುಹೂರ್ತದಲ್ಲಿ ಏಕೆ ಏಳಬೇಕು ?

ಗುರುದೇವ ಡಾ. ಕಾಟೆಸ್ವಾಮೀಜಿ

೧. ‘ಈ ವೇಳೆ ಅಭಿಮಾನ ರಹಿತ (ಅಹಂಕಾರವಿಲ್ಲದ) ದೈವೀ ಪ್ರಕೃತಿಯ ಜೀವಗಳ ಸಂಚಾರವಾಗುತ್ತದೆ.

. ಈ ಸಮಯವು ಸತ್ತ್ವಗುಣ ಪ್ರಧಾನವಾಗಿರುತ್ತದೆ. ಸತ್ತ್ವಗುಣವು ಜ್ಞಾನವನ್ನು ಹೆಚ್ಚಿಸುವಂತಹದ್ದಾಗಿದೆ. ಈ ವೇಳೆ ಬುದ್ಧಿಯು ನಿರ್ಮಲ ಮತ್ತು ಪ್ರಕಾಶಮಾನ ವಾಗಿರುತ್ತದೆ. ‘ಧರ್ಮ ಮತ್ತು ‘ಅರ್ಥದ ಕುರಿತು ಮಾಡುವ ಕೆಲಸಗಳು, ವೇದಗಳಲ್ಲಿ ಹೇಳಿದ ತತ್ತ್ವಗಳ (ವೇದತತ್ತ್ವಾರ್ಥ) ಚಿಂತನಕ್ಕಾಗಿ ಹಾಗೂ ಆತ್ಮಚಿಂತನೆಗಾಗಿ ಬ್ರಾಹ್ಮಿಮುಹೂರ್ತವು ಅತ್ಯಂತ ಉತ್ತಮ ಸಮಯವಾಗಿದೆ.

. ಈ ಕಾಲದಲ್ಲಿ ಸತ್ತ್ವಶುದ್ಧಿ ಕಾರ್ಯ ಸಾಧ್ಯತೆ, ಜ್ಞಾನವನ್ನು ಗ್ರಹಿಕೆ, ದಾನ, ಇಂದ್ರಿಯಸಂಯಮ, ತಪ, ಭೂತದಯೆ, ಶಾಂತಿ, ನಿಸ್ವಾರ್ಥ, ನಿಂದ್ಯಕರ್ಮಗಳನ್ನು ಮಾಡುವ ಬಗ್ಗೆ ನಾಚಿಕೆ, ಸ್ಥಿರತ್ವ, ತೇಜ ಮತ್ತು ಶೌಚ (ಶುದ್ಧತೆ) ಈ ಗುಣಗಳನ್ನು ಅಂಗೀಕರಿಸುವ ಕಾರ್ಯವು ಸುಲಭವಾಗುತ್ತವೆ.

ಗುರುದೇವ ಡಾ. ಕಾಟೆಸ್ವಾಮೀಜಿ

ಮಧ್ಯಾಹ್ನ ಊಟದ ನಂತರ ನಿದ್ರೆ ಬರುತ್ತಿದ್ದರೆ ಮಧ್ಯಾಹ್ನ ಸ್ವಲ್ಪ ಕಡಿಮೆ ಊಟ ಮಾಡಿ !

೧. ಯಾವಾಗ ಊಟದ ಪ್ರಮಾಣ ಹೆಚ್ಚಾಗುತ್ತದೆಯೋ, ಆಗ ಆಹಾರ ಜೀರ್ಣಿಸಲು ಶರೀರವು ಹೆಚ್ಚು ಶಕ್ತಿಯನ್ನು ವ್ಯಯ ಮಾಡಬೇಕಾಗುತ್ತದೆ. ಊಟದ ನಂತರ ಅನ್ನವನ್ನು ಜೀರ್ಣ ಮಾಡುವುದೇ ಶರೀರದ ಮುಖ್ಯ ಕಾರ್ಯವಾಗಿರುವುದರಿಂದ ಇತರ ಅವಯವಗಳಿಗೆ ರಕ್ತಪೂರೈಕೆ ಕಡಿಮೆಯಾಗಿ ಹೊಟ್ಟೆಯ ಕಡೆಗೆ ರಕ್ತಪೂರೈಕೆಯನ್ನು ಹೆಚ್ಚಿಸಲಾಗುತ್ತದೆ. ಇದರಲ್ಲಿ ಮೆದುಳಿನ ರಕ್ತಪೂರೈಕೆಯೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗುವುದರಿಂದ ಬಹಳಷ್ಟು ಜನರಿಗೆ ಊಟದ ನಂತರ ನಿದ್ರೆ ಬರುತ್ತದೆ. ಊಟ ಮಾಡಿದ ನಂತರ ಆಹಾರವನ್ನು ಜೀರ್ಣಿಸಲು ಹೊಟ್ಟೆಯ ಕರುಳುಗಳ ಕಡೆಗೆ ರಕ್ತಪೂರೈಕೆಯು ಹೆಚ್ಚಾಗಿ ಮೆದುಳಿಗೆ ಸ್ವಲ್ಪ ಕಡಿಮೆ ಪೂರೈಕೆಯಾಗುತ್ತದೆ. (ಈ ಸಮಯದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು.)

. ಯಾರಿಗಾದರು ಶಾರೀರಿಕ ಶ್ರಮದಿಂದ ಮಲಗಬೇಕೆಂದು ಅನಿಸುತ್ತಿದ್ದರೆ, ಅವರು ಊಟದ ನಂತರ ಸ್ವಲ್ಪ ಸಮಯ ಅಡ್ಡಾಗಿ (ಮಲಗಿ) ವಿಶ್ರಾಂತಿ ಪಡೆಯಬೇಕು; ಆದರೆ ನಿದ್ರೆ ಬೀಳಲು ಅವಕಾಶ ಕೊಡಬಾರದು.

. ಯಾರಿಗೆ ಊಟ ಹೆಚ್ಚಾದುದರಿಂದ ನಿದ್ರೆ ಬರುತ್ತದೆಯೋ, ಅವರು ನಿದ್ರೆ ಬರಬಾರದೆಂದು ಕಡಿಮೆ ಪ್ರಮಾಣದಲ್ಲಿ ಊಟವನ್ನು ಮಾಡಬೇಕು (ಮಿತಹಾರಿಗಳಾಗಬೇಕು), ಅಂದರೆ ಸ್ವಲ್ಪ ಹಸಿವನ್ನಿಟ್ಟು ಊಟ ಮಾಡಬೇಕು. ಹೀಗೆ ಮಾಡಿದರೆ ದೇಹಕ್ಕೆ ಆಹಾರವನ್ನು ಜೀರ್ಣಿಸಲು ಇತರ ಅವಯವಗಳ ಶಕ್ತಿಯನ್ನು ಉಪಯೋಗಿಸಬೇಕಾಗುವುದಿಲ್ಲ ಮತ್ತು ನಿದ್ರೆಯೂ ಬರುವುದಿಲ್ಲ.

. ಮೇಲಿನ ಉಪಾಯ ಮಾಡಿಯೂ ಯಾರಿಗೆ ಮಧ್ಯಾಹ್ನದ ನಿದ್ರೆಯನ್ನು ತಡೆಯಲು ಆಗುವುದಿಲ್ಲವೋ, ಅವರು ಮಧ್ಯಾಹ್ನ ಕುಳಿತುಕೊಂಡಲ್ಲಿಯೇ ಸ್ವಲ್ಪ ನಿದ್ರೆಯನ್ನು ಮಾಡಬೇಕು. ವಾಮಕುಕ್ಷಿ ಅಂದರೆ ಊಟದ ನಂತರ ಕನಿಷ್ಠ ಪಕ್ಷ ನೂರು ಹೆಜ್ಜೆಗಳಷ್ಟು ನಡೆದು ಹೆಚ್ಚೆಂದರೆ ೨೦ ನಿಮಿಷಗಳಷ್ಟು ಎಡಮಗ್ಗುಲಾಗಿ ಮಲಗಬೇಕು. ವಾಮಕುಕ್ಷಿ ಅಂದರೆ ಗಾಢ ಮತ್ತು ಹೆಚ್ಚು ಸಮಯ ಮಲಗುವುದಲ್ಲ.

ಹಗಲಿನಲ್ಲಿ ಏಕೆ ಮಲಗಬಾರದು ?

ಹಗಲಿನಲ್ಲಿ ಮಲಗುವುದು, ವಿಶೇಷವಾಗಿ ಮಧ್ಯಾಹ್ನ ಊಟ ಮಾಡಿದ ನಂತರ ಮಲಗುವುದು, ಇದು ಆರೋಗ್ಯ ಕೆಡುವುದಕ್ಕೆ ಒಂದು ದೊಡ್ಡ ಕಾರಣವಾಗಿದೆ. ‘ನಾನು ಬೇರೆ ಏನೆಲ್ಲ ಪಥ್ಯವನ್ನು ಮಾಡುವೆನು; ಆದರೆ ನನಗೆ ಮಧ್ಯಾಹ್ನದ ನಿದ್ರೆಯನ್ನು ನಿಲ್ಲಿಸಲು ಹೇಳಬೇಡಿ !, ಎಂದು ಹೇಳುವ ಅನೇಕ ರೋಗಿಗಳು ವ್ಯವಹಾರದಲ್ಲಿ ಕಾಣಿಸುತ್ತಾರೆ. ಬೇರೆ ಎಲ್ಲ ಪಥ್ಯಗಳನ್ನು ಪಾಲಿಸಿ ಮಧ್ಯಾಹ್ನ ಮಲಗಿದರೆ, ಇತರ ಪಥ್ಯಗಳ ಪಾಲನೆಯಿಂದ ಏನೂ ಲಾಭವಾಗುವುದಿಲ್ಲ, ಎಂಬುದು ಯಾವಾಗ ರೋಗಿಗಳಿಗೆ ತಿಳಿಯುತ್ತದೆಯೋ, ಆಗಲೇ ಇಂತಹ ರೋಗಿಗಳು ಮಧ್ಯಾಹ್ನ ಮಲಗುವುದನ್ನು ಬಿಡಲು ಸಿದ್ಧರಾಗುತ್ತಾರೆ. ಸ್ವಲ್ಪದರಲ್ಲಿ ಹೇಳುವುದಾದರೆ ಉತ್ತಮ ಆರೋಗ್ಯವನ್ನು ಪಡೆಯುವ ಪ್ರಾಮಾಣಿಕ ಇಚ್ಛೆಯಿದ್ದರೆ, ಮಧ್ಯಾಹ್ನದ ನಿದ್ರೆಯನ್ನು ಬಿಡಲೇಬೇಕು.