ವ್ಯಷ್ಟಿ ಭಾವವಿದ್ದರೂ ಸಮಷ್ಟಿ ಭಾವವಿಲ್ಲದ ಕಾರಣ ಗುರುಕೃಪೆಗೆ ಅಪಾತ್ರರೆನಿಸುವ ಸಾಧಕರು !

(ಪೂ.) ಶ್ರೀ. ಸಂದೀಪ ಆಳಶಿ,

ಕೆಲವು ಸಾಧಕರಲ್ಲಿ ಗುರು ಅಥವಾ ಈಶ್ವರನಲ್ಲಿ ವ್ಯಷ್ಟಿ ಭಾವವಿರುತ್ತದೆ; ಆದರೆ ಸಮಷ್ಟಿ ಭಾವ ಅಷ್ಟೊಂದು ಇರುವುದಿಲ್ಲ. ‘ಸಮಷ್ಟಿ ಗುರುಕಾರ್ಯವನ್ನು ತಳಮಳದಿಂದ ಮಾಡುವುದು, ಇದು ಸಮಷ್ಟಿ ಭಾವವಿರುವುದರ ಪ್ರಮುಖ ಲಕ್ಷಣವಾಗಿದೆ. ಸಾಧಕರಲ್ಲಿ ಸಮಷ್ಟಿ ಭಾವದ ಕೊರತೆಯನ್ನು ತೋರಿಸುವ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

. ‘ತಪ್ಪುಗಳಾಗುವವು, ಎಂಬ ಭಯದಿಂದ ಗುರುಕಾರ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದು.

. ಗುರುಕಾರ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ತಮಗೆ ಸುಲಭವೆನಿಸುವಷ್ಟೇ ಸೇವೆಗಳ ಜವಾಬ್ದಾರಿಯನ್ನು ತೆಗೆದುಕೊಂಡು ಕಠಿಣವೆನಿಸುವ ಸೇವೆಗಳ ಜವಾಬ್ದಾರಿಯನ್ನು ಸ್ವೀಕರಿಸದಿರುವುದು.

. ಯಾವ ಸೇವೆಗಳಲ್ಲಿ ಇತರ ಸಾಧಕರೊಂದಿಗೆ ಹೊಂದಿಕೊಂಡು ಹೋಗುವ ಭಾಗವು ಹೆಚ್ಚಿರುತ್ತದೆಯೋ, ಅಂತಹ ಸೇವೆಗಳನ್ನು ಮಾಡಲು ಎಷ್ಟು ಸಾಧ್ಯವೋ ಅಷ್ಟು ತಪ್ಪಿಸುವುದು.

. ಸೇವೆಯನ್ನು ಮಾಡುವಾಗ ‘ತಮಗೆ ಕಡಿಮೆ ಶಾರೀರಿಕ ಮತ್ತು ಬೌದ್ಧಿಕ ಶ್ರಮವಾಗಬೇಕು ಎಂದು ಇತರರ ಸಹಾಯ ಪಡೆಯುವುದು.

. ಸೇವೆಯನ್ನು ಸ್ವತಃ ಪೂರ್ತಿಗೊಳಿಸುವುದು ಅಪೇಕ್ಷಿತವಿರು ವಾಗ ಅದನ್ನು ಜಾಣತನದಿಂದ ಇತರರ ಮೇಲೆ ಹೊರಿಸುವುದು.

. ‘ನಾವು ಸೇವೆಯ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದರಿಂದ ಇತರ ಸಾಧಕರ ಮೇಲೆ ಸೇವೆಗಳ ಹೆಚ್ಚು ಭಾರ ಬೀಳುವುದು, ಎಂದು ಗೊತ್ತಿದ್ದರೂ ಆ ಬಗ್ಗೆ ವಿಚಾರ ಮಾಡದಿರುವುದು.

. ಗುರುಕಾರ್ಯಕ್ಕಿಂತ ತಮ್ಮ ವ್ಯಾವಹಾರಿಕ ವಿಷಯಗಳಿಗೆ ಹೆಚ್ಚು ಮಹತ್ವ ನೀಡುವುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಕಲಿಸಿದ ಗುರುಕೃಪಾಯೋಗಕ್ಕನುಸಾರ ಸಾಧನೆಯಲ್ಲಿ ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮತ್ತು ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ. ಸಮಷ್ಟಿ ಸಾಧನೆಯನ್ನು ಮಾಡುವಾಗ ಮನಸ್ಸಿಗೆ ವಿರುದ್ಧವಾದ ಸೇವೆ ಸಿಕ್ಕರೂ ಅದನ್ನು ಸ್ವೀಕರಿಸುವುದು, ತಮಗಾಗುವ ಶ್ರಮದ ವಿಚಾರ ಮಾಡದೇ ಜವಾಬ್ದಾರಿ ತೆಗೆದುಕೊಳ್ಳುವುದು, ಸಹಸಾಧಕರೊಂದಿಗೆ ಆನಂದದಿಂದ ಹೊಂದಿಕೊಳ್ಳುವುದು, ಗುರುಕಾರ್ಯವನ್ನು ಹೆಚ್ಚಿಸಲು ಸಾಧಕರನ್ನು ಪ್ರೀತಿಯಿಂದ ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಸಂಗ ಬಂದರೆ ಅವರೆದುರು ಬಾಗುವುದು ಇವುಗಳಂತಹ ಕೃತಿ ಮಾಡುವ ಆವಶ್ಯಕತೆ ಇರುವುದರಿಂದ ಮನಸ್ಸು, ಬುದ್ಧಿ ಮತ್ತು ಅಹಂ ಬೇಗನೆ ಲಯವಾಗಲು ಸಹಾಯವಾಗುತ್ತದೆ. ಸಮಷ್ಟಿ ಸಾಧನೆಯಲ್ಲಿ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳು ಬೇಗನೆ ಲಯವಾಗುವುದರಿಂದ ಸಮಷ್ಟಿ ಸಾಧನೆಯಿಂದ ಆಧ್ಯಾತ್ಮಿಕ ಉನ್ನತಿಯೂ ಶೀಘ್ರಗತಿಯಲ್ಲಿ ಆಗುತ್ತದೆ. ಇದಕ್ಕಾಗಿಯೇ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಹ ಸಾಧನೆಯಲ್ಲಿ ಸಮಷ್ಟಿ ಭಾವಕ್ಕೆ ಬಹಳ ಮಹತ್ವ ನೀಡುತ್ತಾರೆ.

ಈ ಹಿನ್ನೆಲೆಯಲ್ಲಿ ಕೆಲವು ಸಾಧಕರಿಂದ ಸಮಷ್ಟಿ ಭಾವದ ಸಂದರ್ಭದಲ್ಲಿ ಮೇಲಿನ ರೀತಿಯ ತಪ್ಪುಗಳಾಗುವುದರಿಂದ ಅವರಲ್ಲಿ ವ್ಯಷ್ಟಿ ಭಾವವಿದ್ದರೂ, ಒಟ್ಟಾರೆ ಸಾಧನೆಯ ಸಂದರ್ಭದಲ್ಲಿ ವಿಚಾರ ಮಾಡಿದರೆ ಅದರ ಮೌಲ್ಯವಿದ್ದರೂ ಇಲ್ಲದಂತಾಗುತ್ತದೆ ! ‘ನನ್ನಲ್ಲಿ ವ್ಯಷ್ಟಿ ಭಾವವಿರುವುದರಿಂದ ನನ್ನ ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ, ಎಂಬ ಭ್ರಮೆಯಲ್ಲಿರುವ ಇಂತಹ ಸಾಧಕರು ‘ಗುರುಕೃಪೆಗೆ ಪಾತ್ರರಾಗುವುದಿಲ್ಲ, ಎಂಬುದು ಮಾತ್ರ ವಸ್ತುಸ್ಥಿತಿಯಾಗಿದೆ !

‘ಸಾಧಕರಿಂದ ಮೇಲಿನ ರೀತಿಯ ತಪ್ಪುಗಳು ಆಗುತ್ತಿಲ್ಲವಲ್ಲ, ಎಂಬುದರ ಕಡೆಗೆ ಜವಾಬ್ದಾರ ಸಾಧಕರು ಗಂಭೀರವಾಗಿ ಗಮನ ಹರಿಸಿ ಸಾಧಕರಿಗೆ ಆ ನಿಟ್ಟಿನಲ್ಲಿ ಆವಶ್ಯಕವಾದ ಮಾರ್ಗದರ್ಶನ ಮಾಡಿ ಅವರಿಂದ ಯೋಗ್ಯ ಸಾಧನೆ ಮಾಡಿಸಿಕೊಳ್ಳಬೇಕು.

ಪೂ. ಸಂದೀಪ ಆಳಶಿ (೩.೪.೨೦೨೩)