ಹಿಂದೂದ್ವೇಷಿ ನಟ ನಸುರುದ್ದೀನ್ ಶಾಹ ಇವರಿಂದ ‘ಇಸ್ರೋ’ದ ಮುಖ್ಯಸ್ಥರ ಬಗ್ಗೆ ಟೀಕೆ !

‘ಪುರಾಣಗಳಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಬರೆಯಲಾಗಿದೆ ಎಂದು ಹೇಳುವವರೊಂದಿಗೆ ಹೇಗೆ ಸಂವಾದ ನಡೆಸುವಿರಿ ?’ (ಅಂತೆ)

ಮುಂಬಯಿ – ಇಸ್ರೋದ ಮುಖ್ಯಸ್ಥೆ ಬಹುಶಃ ಒಬ್ಬ ಮಹಿಳೆಯಾಗಿದ್ದಾರೆ. ಈ ಮಧ್ಯೆ ಅವರು, ಎಲ್ಲಾ ವೈಜ್ಞಾನಿಕ ಸಂಶೋಧನೆ ನಮ್ಮ ಪುರಾಣದಲ್ಲಿ ಎಷ್ಟೋ ವರ್ಷಗಳ ಹಿಂದೆಯೇ ಬರೆದು ಇಟ್ಟಿದ್ದಾರೆ ಎಂದು ದಾವೆ ಮಾಡಿದ್ದರು. ಪಶ್ಚಿಮಾತ್ಯ ದೇಶಗಳು ಈ ವಿಷಯದ ಲಾಭ ಪಡೆದು ಎಲ್ಲಾ ಶ್ರೇಯಸ್ಸು ಅವರು ಪಡೆದಿದ್ದಾರೆ, ಈಗ ಇಂತಹ ವಿಚಾರವುಳ್ಳ ವ್ಯಕ್ತಿಯ ಜೊತೆಗೆ ನೀವು ನೇರ ಹೇಗೆ ಸಂವಾದ ನಡೆಸುವಿರಿ ಅಥವಾ ವಾದ ವಿವಾದ ನಡೆಸುವಿರಿ ? ಎಂದು ಹಿಂದೂದ್ವೇಷಿ ನೆಸರುದ್ದೀನ್ ಶಾಹ ಒಂದು ಸಂದರ್ಶನದಲ್ಲಿ ಮಾತನಾಡುವಾಗ ಹೇಳಿದರು. ನಸರುದ್ದೀನ್ ಶಾಹ ಇವರು ‘ತಾಜ್ : ಡಿವೈಸ್ ಬಾಯ್ ಬ್ಲಡ್’ ಈ ‘ವೆಬ್ ಸೀರೀಸ್’ ನಲ್ಲಿ ಮೊಗಲ ಸಾಮ್ರಾಟ ಅಕಬರನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರ ಸಂದರ್ಶನ ಪಡೆಯಲಾಗಿತ್ತು.
ಶಾಹ ಮಾತು ಮುಂದುವರಿಸಿ, ”ವಿಜ್ಞಾನದ ಬದಲು ನಾವು ಮತ್ತೆ ಹಿಂದೆ ಮೂಢನಂಬಿಕೆಯ ಕಡೆಗೆ ಹೋಗುತ್ತಿದ್ದೇವೆ. ‘ಇದನ್ನು ಅನುಸರಿಸಿದರೆ ಕ್ಯಾನ್ಸರ್ ವಾಸಿಯಾಗುವುದು’, ‘ಇದನ್ನು ಅನುಸರಿಸಿದರೆ ವಿಮಾನ ಹಾರುವುದು’, ಇಂತಹ ಎಷ್ಟೋ ಭ್ರಾಂತಿ ಕಲ್ಪನೆಗಳ ಅಧಿನವಾಗುತ್ತಿದ್ದೆವೆ. ಚಾಲ್ಸ ಡಾರ್ವಿನ್ ಗೆ ಪಠ್ಯ ಪುಸ್ತಕದಿಂದ ಕೈಬಿಡಲಾಯಿತು. (ಯಾವುದು ಅಸತ್ಯವಾಗಿದೆ, ಅದು ಎಂದಾದರೂ ಸತ್ಯ ಬೆಳಕಿಗೆ ಬರುತ್ತದೆ ಮತ್ತು ಸಮಾಜ ಅದನ್ನು ತಿರಸ್ಕರಿಸುತ್ತದೆ, ಇದೇ ಡಾರ್ವಿನ್ ಸಿದ್ದಾಂತದ ಬಗ್ಗೆ ನಡೆದಿದೆ. ಇದರ ಅಭ್ಯಾಸ ಕೂಡ ಇಲ್ಲದೆ ಇರುವ ನಸರುದ್ದೀನ್ ಶಾಹ ಹಿಂದೂಗಳ ಪುರಾಣಗಳ ಬಗ್ಗೆ ಮಾತನಾಡುತ್ತಾರೆ, ಇದು ಹಾಸ್ಯಸ್ಪದವೆಯಾಗಿದೆ -ಸಂಪಾದಕರು) ಕೆಲವು ದಿನಗಳಲ್ಲಿ ಈ ವಿಷಯ ಐನ್ಸ್ಟೈನ್ ಸಂದರ್ಭದಲ್ಲಿ ಕೂಡ ನಡೆದರೆ, ಅದರ ನಂತರ ಜನರು ಮಕ್ಕಳಿಗೆ ಏನು ಕಲಿಸುವರು ?” (ಶ್ರದ್ಧೆ ಮತ್ತು ಮೂಢನಂಬಿಕೆ ಎಂದರೆ ಏನು ? ನಸರುದ್ದೀನ್ ಶಾಹ ಇವರಿಗೆ ತಿಳಿದಿದೆಯೇ ? – ಸಂಪಾದಕರು)

ಸಂಪಾದಕರ ನಿಲುವು

ಯಾವ ಕ್ಷೇತ್ರದಲ್ಲಿ ನಮಗೆ ಜ್ಞಾನವಿಲ್ಲ, ಆ ಕ್ಷೇತ್ರದ ಬಗ್ಗೆ ಕನಿಷ್ಠ ನಾವು ನಮ್ಮ ಅಜ್ಞಾನ ಬಯಲು ಮಾಡಬಾರದು. ಇಂತಹ ಸಹಜವಾದ ಸಾಮಾಜಿಕ ನಿಯಮ ಕೂಡ ಪಾಲಿಸದೆ ಇರುವ ಹಿಂದೂ ದ್ವೇಷಿಗಳು ತಮ್ಮನ್ನು ತಾವು ನಗೆಗೀಡ ಮಾಡಿಕೊಳ್ಳುತ್ತಾರೆ ! ಇಂತಹ ಹಿಂದೂದ್ವೇಷಿ ಕಲಾವಿದರ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ಇಲ್ಲ !

ಹಿಂದೂಗಳ ಧರ್ಮ ಗ್ರಂಥಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪೃಥ್ವಿ ಗೋಲಾಕಾರ ಇದೆ ಎಂದು ಹೇಳಿದೆ; ಆದರೆ ಇತರ ಪಂಥದ ಗ್ರಂಥಗಳಲ್ಲಿ ಪೃಥ್ವಿ ಚಪ್ಪಟೆ ಆಗಿರುವುದರ ಬಗ್ಗೆ ಬರೆದಿದ್ದಾರೆ, ಇದರ ಬಗ್ಗೆ ನಸರುದ್ದಿನ್ ಶಾಹ ಏಕೆ ಮಾತನಾಡುವುದಿಲ್ಲ ?