ಸಾಕ್ಷಿ, ಶ್ರದ್ಧಾ… ‘ಲವ್ ಜಿಹಾದ್’ನಿಂದ ಎಲ್ಲಿಯತನಕ ಹತ್ಯೆಗಳು ಮುಂದುವರಿಯಲಿವೆ ?’ ಈ ಕುರಿತು ವಿಶೇಷ ಚರ್ಚಾಕೂಟ
‘ಲವ್ ಜಿಹಾದ್’ ಒಂದು ಯೋಜಿತ ಷಡ್ಯಂತ್ರವಾಗಿದೆ. ಇದಕ್ಕಾಗಿ ಮತಾಂಧರಿಗೆ ಸಾಕಷ್ಟು ಹಣ ಪೂರೈಸಲಾಗುತ್ತಿದೆ. ಲವ್ ಜಿಹಾದಿಗಳನ್ನು ರಕ್ಷಿಸಲು ಅವರಿಗೆ ಕಾನೂನು ನೆರವು ಸಿಗುತ್ತಿದೆ. ಮತಾಂತರಕ್ಕಾಗಿ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಜಾಲಕ್ಕೆ ಸಿಲುಕಿಸಿ ಕೊಲ್ಲಲಾಗುತ್ತಿದೆ. ಕಾನೂನಿಗೆ ತನ್ನದೇ ಆದ ಮಿತಿಗಳಿರುವುದರಿಂದ ಜನರನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಇಂದು ಹಿಂದೂ ಪಾಲಕರು ಹಾಗೂ ಯುವತಿಯರಲ್ಲಿ ಜಾಗೃತಿಯ ಕೊರತೆಯಿಂದ ಹಲವಾರು ಹಿಂದೂ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಅವರನ್ನು ಸುಲಭವಾಗಿ ಗುರಿ ಮಾಡಲಾಗುತ್ತಿದೆ. ಹಾಗಾಗಿ ‘ಲವ್ ಜಿಹಾದ್’ ಪ್ರಕರಣಗಳನ್ನು ತಡೆಯಲು ಕೇಂದ್ರ ಸರಕಾರ ಕಠಿಣ ಕಾನೂನು ರೂಪಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮಣಿ ಮಿತ್ತಲ್ ಅವರು ಲವ್ ಜಿಹಾದ್ ನ ಚರ್ಚೆ ಮನೆ ಮನೆಗಳಲ್ಲಿ ನಡೆಯುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಸಾಕ್ಷಿ, ಶ್ರದ್ಧಾ… ‘ಲವ್ ಜಿಹಾದ್’ನಿಂದ ಎಲ್ಲಿಯತನಕ ಹತ್ಯೆಗಳು ಮುಂದುವರಿಯಲಿವೆ ?’ ಎಂಬ ವಿಷಯದ ಕುರಿತು ಆನ್‌ಲೈನ್ ವಿಶೇಷ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಜಾರ್ಖಂಡ್‌ನ ‘ಪಾಂಚಜನ್ಯ’ದ ಪತ್ರಕರ್ತ ಶ್ರೀ. ರಿತೇಶ ಕಶ್ಯಪ ಅವರು ಮಾತನಾಡುತ್ತಾ, ‘ಲವ್ ಜಿಹಾದ್ ನಿಂದ ಮುಸಲ್ಮಾನರ ವಿರುದ್ಧ ಪ್ರಚಾರ ಮಾಡಲಾಗುತ್ತಿದೆ, ಎಂದು ಜಾತ್ಯತೀತವಾದಿಗಳು, ಕಮ್ಯುನಿಸ್ಟರು ಮುಂತಾದವರು ದೂರುತ್ತಾರೆ; ಆದರೆ ವಾಸ್ತವದಲ್ಲಿ ಭಾರತದಾದ್ಯಂತ ‘ಲವ್ ಜಿಹಾದ್’ನ ಘಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶದ ಗಡಿಯ ಸಮೀಪವಿರುವ ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿ ಮುಸ್ಲಿಮರು ನುಸುಳುವಿಕೆ ಸೇರಿದಂತೆ ಹೆಚ್ಚು ಕಡಿಮೆ ಎಲ್ಲಾ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಸ್ಥಳೀಯ ಮತಾಂಧರೊಂದಿಗೆ ಕಟ್ಟರ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮುಸ್ಲಿಮರು ಕೂಡ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಬಲೆಯಲ್ಲಿ ಸಿಲುಕಿಸುತ್ತಿದ್ದಾರೆ. ಸರಕಾರವು ‘ಲವ್ ಜಿಹಾದ್’ ಅನ್ನು ದೊಡ್ಡ ಅಪಾಯ ಎಂದು ಪರಿಗಣಿಸಬೇಕು ಮತ್ತು ಇತರ ಅಪರಾಧಗಳಂತೆ ಸಮೀಕ್ಷೆ ನಡೆಸಿ ಅದರ ಅಂಕಿಅಂಶಗಳನ್ನು ಪ್ರಕಟಿಸಬೇಕು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನಾಗೇಶ ಜೋಶಿ ಮಾತನಾಡುತ್ತಾ, ಮಹಾರಾಷ್ಟ್ರದಲ್ಲಿ ನೂರಾರು ಯುವತಿಯರು ನಾಪತ್ತೆಯಾಗಿದ್ದಾರೆ, ಲವ್ ಜಿಹಾದ್ ನ ಘಟನೆಗಳೂ ಹೆಚ್ಚುತ್ತಿವೆ. ಎಂದು ಇತ್ತೀಚೆಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳೂ ಒಪ್ಪಿದ್ದಾರೆ; ಆದರೆ ಈ ಬಗ್ಗೆ ಪೊಲೀಸ್-ಆಡಳಿತದಿಂದ ಕಠಿಣ ಕ್ರಮ ಜಾರಿಯಾಗಬೇಕು. ಇಂದು ಲವ್ ಜಿಹಾದಿಗಳು ಅಪರಾಧಿಗಳಾಗಿದ್ದರೂ ಅವರಿಗೆ ಬೆಂಬಲ ಸಿಗುತ್ತಿದೆ. ಅಲ್ಲದೇ ಕಠಿಣ ಶಿಕ್ಷೆ ಇಲ್ಲದಿರುವುದರಿಂದ ಲವ್ ಜಿಹಾದಿಗಳಲ್ಲಿ ಭಯ ಉಳಿದಿಲ್ಲ. ‘ಲವ್ ಜಿಹಾದ್’ನ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ರೂಪಿಸುವುದು ಕೇಂದ್ರ ಸರಕಾರದಿಂದ ಅಪೇಕ್ಷಿತವಿದೆ. ಈ ಪ್ರಕರಣಗಳ ತೀರ್ಪು ಶೀಘ್ರದಲ್ಲಿ ಸಿಗಲು ತ್ವರಿತ ನ್ಯಾಯಾಲಯಗಳ ಅಗತ್ಯವಿದೆ ಎಂದು ಹೇಳಿದರು.