ಓಡಿಸ್ಸಾ ಅಪಘಾತ ಕುರಿತು ರಾಹುಲ ಗಾಂಧಿಯವರಿಂದ ಕೇಂದ್ರಸರಕಾರದ ಮೇಲೆ ಟೀಕೆ !

ಮಾಜಿ ಸಂಸದ ರಾಹುಲ್ ಗಾಂಧಿ ತಮ್ಮ ಯುಎಸ್ಎ ಭೇಟಿಯ ಸಮಯದಲ್ಲಿ ಭಾರತದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ದಾಳಿಯನ್ನು ಮುಂದುವರಿಸಿದ್ದಾರೆ.

ನ್ಯೂಯಾರ್ಕ (ಅಮೇರಿಕಾ) – ಓಡಿಸ್ಸಾದಲ್ಲಿ ನಡೆದ ಭೀಕರ ರೇಲ್ವೆ ಅಪಘಾತದ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡ ರಾಹುಲ ಗಾಂಧಿಯವರು ಅಮೇರಿಕಾದಿಂದಲೇ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ನ್ಯೂಯಾರ್ಕನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಎಂದಿಗೂ ವಾಸ್ತವವನ್ನು ಸ್ವೀಕರಿಸುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿರುವಾಗ ಇಂತಹುದೇ ಒಂದು ರೇಲ್ವೆ ಅಪಘಾತವಾಗಿತ್ತು. ಆಗ ಕಾಂಗ್ರೆಸ್ ಆಂಗ್ಲರ ತಪ್ಪಿನಿಂದ ಆ ಅಪಘಾತವಾಗಿತ್ತು ಎಂದು ಹೇಳಿರಲಿಲ್ಲ. ನಾವು ನಮ್ಮ ಜವಾಬ್ದಾರಿಯನ್ನು ಸ್ವೀಕರಿಸಿ ಆಗಿನ ರೇಲ್ವೆ ಸಚಿವರು ತ್ಯಾಗಪತ್ರ ನೀಡುವಂತೆ ಮಾಡಿದ್ದೆವು. ಭಾಜಪ ಸ್ಪಷ್ಟೀಕರಣ ನೀಡುತ್ತಿದ್ದು, ವಾಸ್ತವವನ್ನು ಸ್ವೀಕರಿಸುವುದಿಲ್ಲ. ಭಾಜಪಕ್ಕೆ ದೋಷಾರೋಪ ಮಾಡುವ ಮತ್ತು ತಪ್ಪುಗಳನ್ನು ಸ್ವೀಕರಿಸದಿರುವ ರೂಢಿಯಿದೆಯೆಂದು ಹೇಳಿದರು.

270 ಕ್ಕಿಂತಲೂ ಹೆಚ್ಚು ಜನರು ಸಾವನ್ನಪಿರುವುದು ಖೇದಕಾರಿಯಾಗಿದೆ ಅಪಘಾತದ ಜವಾಬ್ದಾರಿಯನ್ನು ಸ್ವೀಕರಿಸುವುದರಿಂದ ಮೋದಿ ಸರಕಾರ ಜಾರಿಕೊಳ್ಳಲು ಸಾಧ್ಯವಿಲ್ಲ. ಪ್ರಧಾನಮಂತ್ರಿಗಳು ತಕ್ಷಣವೇ ಇದರ ವಿಚಾರಣೆಯನ್ನು ನಡೆಸಬೇಕು ಮತ್ತು ರೇಲ್ವೆ ಸಚಿವರು ತ್ಯಾಗಪತ್ರ ನೀಡಬೇಕು ಎಂದು ರಾಹುಲ ಗಾಂಧಿಯವರು ಇತ್ತೀಚೆಗೆ ಟ್ವೀಟ ಮಾಡಿದ್ದರು.

ಸಂಪಾದಕರ ನಿಲುವು

ಯಾವುದೇ ವಿಷಯದ ಕುರಿತು ರಾಜಕಾರಣ ಮಾಡದಿದ್ದರೆ, ಅವರೆಂತಹ ರಾಜಕಾರಣಿಗಳು ? ಯಾವುದೇ ಸಾಮಾಜಿಕ ಆಘಾತದ ಪ್ರಸಂಗದಲ್ಲಿ ಜನತೆಗೆ ಒಗ್ಗಟ್ಟನ್ನು ಕಾಯ್ದುಕೊಳ್ಳುವಂತೆ ಕರೆ ನೀಡುವ ರಾಜಕಾರಣಿಗಳು ಸ್ವತಃ ಮಾತ್ರ ಅದರ ಪಾಲನೆಯನ್ನು ಯಾವತ್ತೂ ಮಾಡುವುದಿಲ್ಲ ಎನ್ನುವುದನ್ನು ಅರಿಯಬೇಕು !