ನೋಡಿ ಆ ದಿವ್ಯ ತೇಜ, ಆ ದಿವ್ಯ ಪ್ರಭೆಯನ್ನು |
ಭಕ್ತರೇ ಅವತರಿಸಿದ್ದಾನೆ ನೋಡಿ ಭಗವಂತನನ್ನು |
ಸಂಗ್ರಹಿಸೋಣ ಹೃದಯದಲ್ಲಿ ದಿವ್ಯ ರೂಪವನ್ನು |
ಶ್ರೀಮನ್ನಾರಾಯಣಸ್ವರೂಪ ಗುರುಗಳನ್ನು |
ಕೃತಜ್ಞತೆಯಿಂದ ಜೋಡಿಸೋಣ ಕೈಗಳನ್ನು |
ವಂದಿಸೋಣ ಸುಂದರ ಗುರುಮೂರ್ತಿಯನ್ನು ||
ಶ್ರೀಗುರುಗಳ ಕಲ್ಯಾಣಕಾರಿ ಆ ದೃಷ್ಟಿ |
ಆನಂದಗೊಂಡಿತು ಈ ಸಂಪೂರ್ಣ ಸೃಷ್ಟಿ |
ಸಾಧಕರಿಗಾಯಿತು ಶ್ರೀಗುರುಕೃಪೆಯ ವೃಷ್ಟಿ |
ಲಭಿಸಿತು ಶ್ರೀ ಮಹಾವಿಷ್ಣುವಿನ ಅನುಭೂತಿ |
ದರ್ಶನದಿಂದ ಆಯಿತು ಆಕಾಂಕ್ಷೆಯ ಪೂರ್ತಿ |
ನಮ್ಮಲ್ಲಿ ಹೆಚ್ಚಾಗಲಿ ಸತತ ಶರಣಾಗತಿ ||
ರಥಾರೂಢ ಮಹಾವಿಷ್ಣುವನ್ನು ಗಾಯನ, ವಾದನ ಹಾಗೂ ನೃತ್ಯಗಳ ಮೂಲಕ ಸ್ತುತಿಸುವುದೆಂದರೆ ಬ್ರಹ್ಮೋತ್ಸವ ! ಶ್ರೀವಿಷ್ಣುರೂಪದಲ್ಲಿ ರಥದಲ್ಲಿ ವಿರಾಜಮಾನರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಬ್ರಹ್ಮೋತ್ಸವದ ನಿಮಿತ್ತ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಕಲೆಯ ಮೂಲಕ ಭಾವಾರ್ಪಣೆ ಮಾಡಿದರು. ನೃತ್ಯ, ಗಾಯನ ಹಾಗೂ ವಾದನ ಸೇವೆಯು ಎಷ್ಟು ಭಾವಪೂರ್ಣವಾಯಿತೆಂದರೆ, ಅದರಿಂದ ಉಪಸ್ಥಿತ ಸಾಧಕರಿಗೂ ಭಾವಜಾಗೃತಿಯಾಯಿತು !
೧. ಎಲ್ಲರ ಭಾವಜಾಗೃತಗೊಳಿಸುವ ನೃತ್ಯಸೇವೆ !
‘ಅಚ್ಯುತ್ತಾಷ್ಟಕ್ಕಮ್ ಈ ಶ್ರೀವಿಷ್ಣುಸ್ತುತಿಯ ಹಾಡಿನೊಂದಿಗೆ ೧೨ ಸಾಧಕಿಯರು ಭಾವನೃತ್ಯ ಪ್ರಸ್ತುತಪಡಿಸಿದರು, ಈ ನೃತ್ಯದ ಸಂದರ್ಭದಲ್ಲಿ ಶ್ರೀವಿಷ್ಣುವಿನ ದಶಾವತಾರದಲ್ಲಿನ ರೂಪಗಳನ್ನು ತೋರಿಸುವಾಗಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೨೦೧೮ ರಲ್ಲಿ ನಡೆದ ಜನ್ಮೋತ್ಸವದ ಶೇಷಶಯನ ಶ್ರೀವಿಷ್ಣುರೂಪವನ್ನೂ ಪ್ರಸ್ತುತಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ನೃತ್ಯ ಅಭ್ಯಾಸಕಿ ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜೀಕರ ಇವರು ಈ ನೃತ್ಯದ ಸಂಯೋಜನೆ ಮಾಡಿದ್ದರು.
೨. ಭಗವಂತನನ್ನು ಸ್ತುತಿಸುವ ಗಾಯನಸೇವೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕಿ ಸುಶ್ರೀ ತೇಜಲ ಪಾತ್ರಿಕರ (ಸಂಗೀತ ವಿಶಾರದೆ, ಆಧ್ಯಾತ್ಮಿಕ ಮಟ್ಟ ಶೇ. ೬೨) ಸೌ. ಅನಘಾ ಜೋಶಿ (ಬಿ.ಎ. (ಸಂಗೀತ), ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ‘ಆತ್ಮಾರಾಮಾ ಆನಂದರಮಣಾ… ಈ ಹಾಡನ್ನು ಪ್ರಸ್ತುತಪಡಿಸಿದರು. ಅವರಿಗೆ ಕು. ಮಯೂರಿ ಆಗಾವಣೆ, ಕು. ರೇಣುಕಾ ಕುಲಕರ್ಣಿ ಹಾಗೂ ಸೌ. ಭಕ್ತಿ ಕುಲಕರ್ಣಿ ಇವರು ಜೊತೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ. ಗಿರಿಜಯ ಪ್ರಭುದೇಸಾಯಿ ಇವರು ತಬಲಾವಾದನ, ಶ್ರೀ. ಮನೋಜ ಸಹಸ್ರಬುದ್ಧೆ (ಆಧ್ಯಾತ್ಮಿಕ ಮಟ್ಟ ಶೇ. ೬೦) ಇವರು ಸಿತಾರವಾದನ ಹಾಗೂ ಶ್ರೀ. ಶೈಲೇಶ ಬೆಹೆರೆ ಇವರು ತಾಳವನ್ನು ನುಡಿಸಿದರು.
೩. ಚಿತ್ತವೃತ್ತಿಯನ್ನು ಜಾಗೃತಗೊಳಿಸುವ ವಾದನಸೇವೆ !
ಶ್ರೀ ಮಹಾವಿಷ್ಣುವಿಗೆ ಮೊರೆಯಿಡುವ ವಾದನ ಸೇವೆ ಮಾಡುವಾಗ ಶ್ರೀ. ಮನೋಜ ಸಹಸ್ರಬುದ್ಧೆ ಇವರು ಸಿತಾರನಲ್ಲಿ ‘ಪೂರ್ವಿರಾಗವನ್ನು ನುಡಿಸಿದರು. ಅವರಿಗೆ ಶ್ರೀ. ಗಿರಿಜಯ ಪ್ರಭುದೇಸಾಯಿ ಇವರು ತಬಲಾದಲ್ಲಿ ಜೊತೆ ನೀಡಿದರು. ‘ಪೂರ್ವಿ ಇದು ಸಾಯಂಕಾಲದ ಪ್ರಹರದರಾಗವಾಗಿದೆ. ಬ್ರಹ್ಮೋತ್ಸವ ಕೂಡ ಅದೇ ಅವಧಿಯಲ್ಲಿತ್ತು.