‘ಬ್ರಹ್ಮೋತ್ಸವ ಸಮಾರಂಭ, ಅತ್ಯುತ್ತಮ ಜನ್ಮೋತ್ಸವ | ಸಾಧಕರಿಗಾಗಿ ಭಾವಾನಂದ ಮೇಳ ||
ಫರ್ಮಾಗುಡಿ, ಫೋಂಡಾ (ಗೋವಾ) – ಪ್ರತಿವರ್ಷ ಶ್ರೀಮನ್ನಾರಾಯಣ ಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಆಚರಿಸಲಾಗುವ ಜನ್ಮೋತ್ಸವವು ಸಾಧಕರಿಗಾಗಿ ಒಂದು ಅಮೂಲ್ಯ ಪರ್ವವಾಗಿರುತ್ತದೆ ! ಪ್ರತಿವರ್ಷ ಶ್ರೀಗುರುಗಳ ಈ ಮನೋಹರ ದರ್ಶನ ಗಣಕಯಂತ್ರದ ತಂತ್ರಾಂಶದ ಮಾಧ್ಯಮದಿಂದಾಗುತ್ತದೆ, ಆ ಭಾವದರ್ಶನವು ಈ ವರ್ಷ ಪ್ರತ್ಯಕ್ಷ ಆಗುವುದಿದೆ ಎಂದು ತಿಳಿದಿದ್ದರಿಂದ ಸಾಧಕರು ಕಾತುರದಿಂದ ಗುರುದೇವರ ದಾರಿಯನ್ನು ಕಾಯುತ್ತಿದ್ದರು ! ಮೊದಲ ಸಲವೇ ಇಂತಹ ದೊಡ್ಡ ಸ್ವರೂಪದಲ್ಲಿ ನೆರವೇರುವ ಈ ಜನ್ಮೋತ್ಸವ ಸಮಾರಂಭದಲ್ಲಿ ಗುರುದೇವರ ಪ್ರತ್ಯಕ್ಷ ದರ್ಶನವಾಗುವುದು, ಸಾಧಕರಿಗೆ ಇದರ ಸೆಳೆತವಿತ್ತು. ವೈಶಾಖ ಮಾಸದ ಬಿಸಿ ವಾತಾವರಣವಿದ್ದರೂ, ಶ್ರೀಮನ್ನಾರಾಯಣಸ್ವರೂಪ ಗುರುದೇವರ ಕೃಪಾಶೀರ್ವಾದದ ಶೀತಲ ಛಾಯೆಯ ಸೆಳೆತದಿಂದ ಎಲ್ಲರೂ ಅಂತಃಕರಣದಿಂದ ಅವರಿಗೆ ಮೊರೆ ಇಡುತ್ತಿದ್ದರು. ಇಂತಹ ಸಮಯದಲ್ಲಿ ಸಪ್ತರ್ಷಿಗಳ ಆಜ್ಞೆಯಿಂದ ಶ್ರೀ ಗುರುಗಳು ದಿವ್ಯ ರಥಾರೂಢ ಶ್ರೀವಿಷ್ಣುಸ್ವರೂಪದಲ್ಲಿ ನೀಡಿದ ದರ್ಶನದಿಂದ ಸಾಧಕರ ಮನಸ್ಸುಗಳು ತೃಪ್ತವಾದವು.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ ಫರ್ಮಾಗುಡಿಯಲ್ಲಿನ ‘ಗೋವಾ ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನೆರವೇರಿದ ‘ದಿವ್ಯ ಬ್ರಹ್ಮೋತ್ಸವದಲ್ಲಿ ಸಾಧಕರು ಗಾಯನ, ವಾದನ ಮತ್ತು ನೃತ್ಯದ ಮೂಲಕ ಶ್ರೀಗುರುಗಳ ಸೇವೆಯನ್ನು ಮಾಡಿದರು. ಸಾಧಕರಿಗೆ ಶ್ರೀವಿಷ್ಣುಸ್ವರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಭಾವದರ್ಶನವಾಯಿತು. ನೃತ್ಯ, ಗಾಯನ ಮತ್ತು ವಾದನದ ಮಾಧ್ಯಮದಿಂದ ರಥಾರೂಢ ಭಗವಾನ ಶ್ರೀವಿಷ್ಣುವಿನ ಸ್ತುತಿ ಮಾಡುವುದೇ ಬ್ರಹ್ಮೋತ್ಸವ !
ಮಹಾರಾಷ್ಟ್ರ, ಗೋವಾ, ಕರ್ನಾಟಕ ಮುಂತಾದ ರಾಜ್ಯಗಳಿಂದ ಮತ್ತು ಭಾರತದಾದ್ಯಂತದಿಂದ ಬಂದಿರುವ ೧೦ ಸಾವಿರಕ್ಕಿಂತಲೂ ಹೆಚ್ಚು ಸಾಧಕರು, ಹಿಂದುತ್ವನಿಷ್ಠರು, ನ್ಯಾಯವಾದಿಗಳು, ಹಿತಚಿಂತಕರು ಈ ಭಾವಪರ್ವದ ಲಾಭವನ್ನು ಪಡೆದರು. ಇದರೊಂದಿಗೆ ಗಣಕೀಯ ತಂತ್ರಾಂಶದ ಮೂಲಕ ದೇಶ-ವಿದೇಶಗಳಲ್ಲಿನ ೪ ಸಾವಿರಕ್ಕೂ ಹೆಚ್ಚು ಸಾಧಕರು, ಜಿಜ್ಞಾಸುಗಳು ಬ್ರಹ್ಮೋತ್ಸವದ ಲಾಭವನ್ನು ಪಡೆದರು.