ಅಧ್ಯಾತ್ಮ ಮತ್ತು ಧರ್ಮಪ್ರಸಾರದ ಕಾರ್ಯವು ಉತ್ತರೋತ್ತರ ವೇಗವಾಗಿ ಹೆಚ್ಚುತ್ತಾ ಹೋಗುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವ್ಯಕ್ತಪಡಿಸಿದ ಕೃತಜ್ಞತೆ ಮತ್ತು ಸಾಧಕರಿಗೆ ನೀಡಿದ ಕೃಪಾಶೀರ್ವಾದ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ನಾನು ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಪ್ರಾರ್ಥನೆ ಮಾಡಿ ನನ್ನ ಮನೋಗತವನ್ನು ವ್ಯಕ್ತಪಡಿಸುತ್ತೇನೆ ! ಪ.ಪೂ. ಭಕ್ತರಾಜ ಮಹಾರಾಜರು ನನಗೆ ಗುರುಗಳೆಂದು ಲಭಿಸಿದ ನಂತರ ಅವರು ನನಗೆ ಎಲ್ಲವನ್ನು ಕಲಿಸಿದರು ಮತ್ತು ಜಗತ್ತಿನಾದ್ಯಂತ ಅಧ್ಯಾತ್ಮಪ್ರಸಾರವನ್ನು ಮಾಡುವ ಆಶೀರ್ವಾದವನ್ನು ನೀಡಿದರು. ಇಂದು ನಾವು ಆ ಆಶೀರ್ವಾದದ ಪರಿಣಾಮವನ್ನು ನೋಡುತ್ತಿದ್ದೇವೆ. ಕಳೆದ ೮ ವರ್ಷಗಳಿಂದ ಪೂ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಪರಮವಂದನೀಯ ಮಹರ್ಷಿಗಳು ಮಾಡುವ ಆಜ್ಞೆಯಂತೆ ನಾವು ಸಾಧನೆ ಮಾಡುತ್ತಿದ್ದೇವೆ. ಇಂದು ಪೂ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಪರಮವಂದನೀಯ ಮಹರ್ಷಿಗಳ ಆಜ್ಞೆಗನುಸಾರ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ನಿಮಿತ್ತದಿಂದ ನನಗೆ ನಿಮ್ಮೆಲ್ಲರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಅದಕ್ಕಾಗಿ ನಾನು ಮಹರ್ಷಿಗಳ ಚರಣಗಳಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈಗ ನಾನು ಕಾರ್ಯದ ಬಗ್ಗೆ ಸ್ವಲ್ಪ ಹೇಳುತ್ತೇನೆ.

೧. ದೇಶ : ಗುರುಕೃಪಾಯೋಗಾನುಸಾರ ೨೭ ದೇಶಗಳಲ್ಲಿ ಜಿಜ್ಞಾಸುಗಳು ಸಾಧನೆಯನ್ನು ಮಡುತ್ತಿದ್ದಾರೆ.

೨. ಸಾಧಕರು : ಅಧ್ಯಾತ್ಮಪ್ರಸಾರ, ಹಿಂದೂಸಂಘಟನೆ ಇಂತಹ ವಿವಿಧ ಕ್ಷೇತ್ರಗಳಲ್ಲಿನ ಸಾಧಕರು ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯವನ್ನು ಮಾಡುತ್ತಿದ್ದಾರೆ. ಮುಖ್ಯವೆಂದರೆ ಆ ಸಾಧಕರು ಸ್ವತಃ ಕಾರ್ಯವನ್ನು ಮಾಡುತ್ತಿರುವಾಗ ಇತರ ಸಾಧಕರನ್ನೂ ರೂಪಿಸುತ್ತಿದ್ದಾರೆ. ಈ ಕಾರ್ಯವು ಎಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ! ಕೇವಲ ಕಾರ್ಯ ಮಾತ್ರವಲ, ಅದರ ಜೊತೆ, ಅಷ್ಟೇ ಪ್ರಮಾಣದಲ್ಲಿ ಸಾಧಕರ ಆಧ್ಯಾತ್ಮಿಕ ಉನ್ನತಿಯೂ ಆಗುತ್ತಿದೆ.

೩. ಸಂತರು : ಸನಾತನದ ೧೨೪ ಜನ ಸಂತರು ಅಧ್ಯಾತ್ಮದ ಸೂಕ್ಷ್ಮ ಕ್ಷೇತ್ರಗಳಲ್ಲಿ ಎಷ್ಟೊಂದು ಕಾರ್ಯ ಮಾಡುತ್ತಿದ್ದಾರೆಂದರೆ, ಅದರಲ್ಲಿ ನನಗೆ ಏನು ಮಾಡುವ ಅವಶ್ಯಕತೆಯೇ ಉಳಿದಿಲ್ಲ. ವಯಸ್ಸಿಗನುಸಾರ ಹೆಚ್ಚುತ್ತಿರುವ ದಣಿವಿನಿಂದ ನಾನು ಕಳೆದ ಅನೇಕ ವರ್ಷಗಳಿಂದ ಎಲ್ಲಿಯೂ ಹೊರಗೆ ಹೋಗಿಲ್ಲ, ಅನೇಕ ಸಾಧಕರು ನನ್ನನ್ನು ಪ್ರತ್ಯಕ್ಷ ಯಾವತ್ತೂ ನೋಡಿಲ್ಲ, ಹೀಗಿದ್ದರೂ ಸಹ ತಾವೆಲ್ಲ ಸಾಧಕರು ನನ್ನ ಗುರುಗಳು ಹೇಳಿದ ಈ ಕಾರ್ಯವನ್ನು ಬಲದಿಂದ ಮುಂದೊಯ್ಯುತ್ತಿರುವಿರಿ. ಆದ್ದರಿಂದ ಇಂದು ನಾನು ನಿಮ್ಮೆಲ್ಲರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ! ಇದೆಲ್ಲವನ್ನು ನೋಡಿ ನನಗೆ, ಈ ಕಾರ್ಯವು ಮುಂದಿನ ಕಾಲದಲ್ಲಿ ಇದೇ ರೀತಿ ಜೋರಾಗಿ ಉತ್ತರೋತ್ತರ ಹೆಚ್ಚುತ್ತ ಹೋಗುವುದು ಎಂಬುದರ ಖಾತ್ರಿ ಇದೆ !

ಪ.ಪೂ. ಭಕ್ತರಾಜ ಮಹಾರಾಜರು, ಪರಮವಂದನೀಯ ಸಪ್ತರ್ಷಿಗಳು ಮತ್ತು ಪೂ. ಓಂ ಉಲಗನಾಥನ್ ಇವರ ಚರಣಗಳಲ್ಲಿ ವಂದಿಸಿ ನಾನು ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ !

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೧೧.೫.೨೦೨೩)