ಜೂನ್ ೮ ರಿಂದ ಸ್ವೀಡನ್‌ನಲ್ಲಿ ಮೊದಲ ಲೈಂಗಿಕ ಕ್ರಿಯೆಯ ಸ್ಪರ್ಧೆ !

ಸ್ವಿಡನ್ ನಲ್ಲಿ ಲೈಂಗಿಕ ಕ್ರಿಯೆಗೆ ‘ಕ್ರೀಡೆ’ ಎಂದು ಮನ್ನಣೆ

ಸ್ವೀಡನ್ (ಸ್ಟಾಕ್‌ಹೋಮ್) – ಯುರೋಪನ ಸ್ವಿಡನ್ ದೇಶದಲ್ಲಿ ಇದೇ ಮೊದಲಬಾರಿಗೆ ಲೈಂಗಿಕ ಕ್ರಿಯೆಗೆ ‘ಕ್ರೀಡೆ’ ಎಂದು ಮನ್ನಣೆ ನೀಡಿದೆ. ಯುರೋಪಿಯನ್ ರಾಷ್ಟ್ರಗಳಿಗೆ ಗೋಟೆನ್‌ಬರ್ಗ್ ನಗರವು ಇದೇ ಮೊದಲಬಾರಿಗೆ ಲೈಂಗಿಕ ಕ್ರಿಯೆಯ ಸ್ಪರ್ಧೆಯನ್ನು ಆಯೋಜಿಸಿದೆ. ಬರುವ ಜೂನ್ ೮ ರಿಂದ ಮುಂದಿನ ಕೆಲವು ವಾರಗಳವರೆಗೆ ಸ್ಪರ್ಧೆಯು ಮುಂದುವರಿಯುತ್ತದೆ.

ಇದನ್ನು ‘ಸ್ವೀಡಿಷ್ ಫೆಡರೇಶನ್ ಆಫ್ ಸೆಕ್ಸ್’ ಯು ಆಯೋಜಿಸಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ‘ಆಟ’ಕ್ಕಾಗಿ ಸುಮಾರು ೪೫ ನಿಮಿಷದಿಂದ ಒಂದು ಗಂಟೆಯವರೆಗೆ ನಿಗದಿಪಡಿಸಲಾಗುತ್ತದೆ. ೩ ತೀರ್ಪುಗಾರರು ಮತ್ತು ಪ್ರೇಕ್ಷಕರ ಅಂಕಗಳ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಗುತ್ತದೆ. ಈ ಸ್ಪರ್ಧೆಯು ೧೬ ವಿಷಯಗಳಲ್ಲಿ ನಡೆಯಲಿದೆ. ಲೈಂಗಿಕತೆಯನ್ನು ಕ್ರೀಡೆಯಾಗಿ ಗುರುತಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಸ್ವೀಡಿಷ್ ಫೆಡರೇಶನ್ ಆಫ್ ಸೆಕ್ಸ್‌ನ ಅಧ್ಯಕ್ಷ ಡ್ರ್ಯಾಗನ್ ಬ್ರಾಟಿಚ್ ಅವರು ಹೇಳಿದ್ದಾರೆ.

ಸಂಪಾದಕರ ನಿಲುವು

  • ಪಾಶ್ಚಿಮಾತ್ಯ ದೇಶಗಳಲ್ಲಿ ನೈತಿಕತೆಯ ಅಧಃಪತನ ಬಹಳ ಹಿಂದಿನಿಂದಲೂ ನಡೆಯುತ್ತಿರುವುದರಿಂದ ಈಗ ಅದು ಉತ್ತುಂಗಕ್ಕೇರಿದೆ ಎಂಬುದು ಗಮನಕ್ಕೆ ಬರುತ್ತದೆ !
  • ಪಾಶ್ಚಾತ್ಯರ ಅಂಧಾನುಕರಣೆ ಮಾಡುವ ಭಾರತೀಯರು ನಾಳೆ ಈ ರೀತಿಯ ಸ್ಪರ್ಧೆಯನ್ನು ಆಯೋಜಿಸಲು ಪ್ರಾರಂಭಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !