ಉತ್ತರಾಖಂಡನಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ನ ಘಟನೆಗಳ ಹಿಂದೆ ಕೇರಳದ ನಂಟು !

  • ‘ಲವ್ ಜಿಹಾದ್’ ಆರೋಪಿ ಕೇರಳಕ್ಕೆ ಹೋಗಿ ಬಂದಿರುವುದು ಬಹಿರಂಗ !

  • ‘ಲವ್ ಜಿಹಾದ್’ ಹಿಂದೆ ದೊಡ್ಡ ಪಿತೂರಿಯ ಸಾಧ್ಯತೆ !

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿಯ ಪಛೂವ ಡೆಹರಾಡೂನ್ ಪ್ರದೇಶದಲ್ಲಿ ‘ಲವ್ ಜಿಹಾದ್’ನ ತಾಣ ಆಗುತ್ತಿರುವುದು ಬಹಿರಂಗವಾಗಿದೆ. ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರನ್ನು ಮತಾಂತರಗೊಳಿಸಿ ವಿವಾಹಕ್ಕಾಗಿ ಅನಿವಾರ್ಯಗೊಳಿಸಲಾಗುತ್ತಿದೆ. ಹಿಂದೂ ಸಂಘಟನೆಗಳ ಮಾಹಿತಿಯ ಪ್ರಕಾರ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಇಲ್ಲಿಯ ಉಪಹಾರಗೃಹಕ್ಕೆ ಕರೆತರಲಾಗುತ್ತದೆ. ಅಲ್ಲಿಯ ಕೋಣೆಗಳಲ್ಲಿ ಅವರ ಲೈಂಗಿಕ ಶೋಷಣೆ ಮಾಡಲಾಗುತ್ತದೆ. ಅದರ ಅಶ್ಲೀಲ ವಿಡಿಯೋ ತಯಾರಿಸಿ ನಂತರ ಆ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಿ ಅವರಿಗೆ ಮತಾಂತರ ಮತ್ತು ವಿವಾಹಕ್ಕಾಗಿ ಅನಿವಾರ್ಯಗೊಳಿಸುತ್ತಾರೆ.

ಕಳೆದ ಎರಡು ವಾರಗಳಲ್ಲಿ ಪಛೂವ ಡೆಹರಾಡೂನ್ ಇಲ್ಲಿ ಲವ್ ಜಿಹಾದ್ ನ ೮ ರಿಂದ ೧೦ ಪ್ರಕರಣಗಳು ಬೆಳಕಿಗೆ ಬಂದಿವೆ. ವರ್ತಮಾನ ಘಟನೆಯಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಹಿಂದೂ ಯುವತಿಗೆ ಫರಹಾನ್ ಇವನು ಪ್ರೀತಿಯ ಬಲೆಗೆ ಸೆಳೆದನು. ಆಕೆಯ ಜೊತೆಗೆ ಲೈಂಗಿಕ ಸಂಬಂಧ ಇರಿಸಿ ಅದರ ವಿಡಿಯೋ ತಯಾರಿಸಿದನು. ಮತ್ತು ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಆ ಯುವತಿ ಬೇರೆ ಯುವಕನ ಜೊತೆ ವಿವಾಹವಾದ ನಂತರ ಕೂಡ ಫರಹಾನ್ ಆಕೆಗೆ ಬ್ಲಾಕ್ ಮೇಲ್ ಮಾಡಿ ಹೋಟೆಲಿಗೆ ಕರೆಸುತ್ತಿದ್ದನು. ಇದರ ಮಾಹಿತಿ ‘ವೈದಿಕ ಮಿಷನ್’ ಈ ಸಂಘಟನೆಗೆ ದೊರೆತ ನಂತರ ಪೊಲೀಸರಿಗೆ ದೂರ ನೀಡಲಾಯಿತು. ಅದರ ನಂತರ ಪೊಲೀಸರು ಫರಹನನ್ನು ಬಂಧಿಸಿದರು. ಫರಹಾನಿಗೆ ಸಹಾಯ ಮಾಡುವ ಅವನ ಸಹೋದರ ನಯಿಮ್ ಸಲ್ಮಾನಿ ಇವನನ್ನು ಕೂಡ ಬಂಧಿಸಲಾಯಿತು. ಪಛೂವ ದೆಹರಾಡೂನ್ ಇಲ್ಲಿಯ ಲವ್ ಜಿಹಾದ್ ನ ೩ ಘಟನೆಯಲ್ಲಿನ ಆರೋಪಿಗಳು ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದರು. ಇದರಿಂದ ಉತ್ತರಾಖಂಡದಲ್ಲಿನ ಮುಸಲ್ಮಾನ ಯುವಕರಿಗೆ ಕೇರಳದಲ್ಲಿ ಲವ್ ಜಿಹಾದ್ ನ ಪ್ರಶಿಕ್ಷಣ ನೀಡಲಾಗುತ್ತಿದೆಯೇ ?’ ಇದನ್ನು ಈಗ ಪೊಲೀಸರು ಹುಡುಕಬೇಕು. ಅದರ ಜೊತೆಗೆ ‘ಈ ಪ್ರದೇಶದಲ್ಲಿ ಲವ್ ಜಿಹಾದದ ಷಡ್ಯಂತ್ರ ರೂಪಿಸಲಾಗಿದೆಯೇ ? ಇದನ್ನು ಕೂಡ ಹುಡುಕಲಾಗುತ್ತಿದೆ.

ಕಠಿಣ ಕ್ರಮ ಕೈಗೊಳ್ಳಿ ! – ಪೊಲೀಸರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶ

ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಮತಾಂತರ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದಾರೆ. ‘ದೇವಭೂಮಿ ಉತ್ತರಾಖಂಡವು ಲವ್ ಜಿಹಾದ್‌ನ ನೆಲೆಯಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.

ಸಂಪಾದಕರ ನಿಲುವು

ದೇವಭೂಮಿ ಉತ್ತರಾಖಂಡನಲ್ಲಿ ಮುಸಲ್ಮಾನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ; ಆದರೆ ಈ ಸಂಚು ನೋಡಿದರೆ ಮುಂದಿನ ಕೆಲವು ವರ್ಷಗಳಲ್ಲಿ ಅದರಲ್ಲಿ ಹೆಚ್ಚಳವಾದರೆ ಆಶ್ಚರ್ಯ ಏನು ಇಲ್ಲ !