‘ಮುಸ್ಲಿಂ ಲೀಗ ಇದು ಸಂಪೂರ್ಣ ಜಾತ್ಯತೀತ ಪಕ್ಷ’ ! (ಅಂತೆ) – ರಾಹುಲ್ ಗಾಂಧಿ

ರಾಹುಲ್ ಗಾಂಧಿಯರ ಅಂತರಾಷ್ಟ್ರೀಯ ಹಾಸ್ಯ !

ವಾಷಿಂಗ್ಟನ್ (ಅಮೇರಿಕಾ) – ಮುಸ್ಲಿಂ ಲೀಗ ಇದು ಸಂಪೂರ್ಣವಾಗಿ ಜಾತ್ಯತೀತ ಪಕ್ಷವಾಗಿದೆ, ಎಂದು ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಇವರು ಇಲ್ಲಿಯ ಪತ್ರಕರ್ತರು ಕೇರಳಾದ ಮುಸ್ಲಿಂ ಲೀಗ್ ಜೊತೆಗೆ ಮೈತ್ರಿ ಮಾಡುವ ಸಂದರ್ಭದಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದರು. ಅವರು, ‘ವಿರೋಧಿಗಳು ಒಟ್ಟಾಗುತ್ತಿದ್ದಾರೆ, ನಾವೆಲ್ಲರೂ ವಿರೋಧ ಪಕ್ಷದ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ, ಇದರ ಹಿನ್ನೆಲೆಯಲ್ಲಿ ಇನ್ನೂ ಬಹಳಷ್ಟು ಒಳ್ಳೆಯ ಕೆಲಸ ನಡೆಯುತ್ತಿದೆ.’ ಎಂದು ಅವರು ಹೇಳಿದರು. ಪ್ರಸ್ತುತ ರಾಹುಲ ಗಾಂಧಿ ೬ ದಿನಗಳಿಗಾಗಿ ಅಮೇರಿಕಾದ ಪ್ರವಾಸದಲ್ಲಿದ್ದಾರೆ.

ರಾಹುಲ ಗಾಂಧಿ ಮಾತು ಮುಂದುವರೆಸುತ್ತಾ, ನನಗೆ ಭಾರತೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ಬೇಕಿದೆ ಎಂದು ಅನಿಸುತ್ತದೆ. ಎಲ್ಲಾ ಭಾರತೀಯ ಜನಾಂಗಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕಿದೆ. ನಾನು ಜನರಲ್ಲಿ ಅವರ ಧರ್ಮ ಮತ್ತು ಜಾತಿಯ ಆಧಾರದಲ್ಲಿ ಭೇದ ಮಾಡುತ್ತಿಲ್ಲ. ಭಾರತ ಎಂದರೆ ಏನು ಮತ್ತು ಹೇಗೆ ಇರಬೇಕು ? ಇದು ಗಾಂಧೀವಾದಿ ವಿಚಾರಗಳಂತೆ ನಾನು ಬೆಳೆದಿದ್ದೇನೆ. ನಾನು ಜೀವ ಬೆದರಿಕೆಗೆ ಹೆದರುವುದಿಲ್ಲ. ಕೊನೆಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಿನ ಸಾಯುವುದೇ ಇದೆ. ಇದನ್ನು ನಾನು ನನ್ನ ಅಜ್ಜಿ ಮತ್ತು ತಂದೆಯಿಂದ ಕಲಿತಿದ್ದೇನೆ. ನಾನು ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದರು.

(ಸೌಜನ್ಯ : TIMES NOW)

ಸಂಪಾದಕೀಯ ನಿಲುವು

ಮುಸ್ಲಿಂ ಲೀಗ್ ಇದು ಜಾತ್ಯತೀತ ಪಕ್ಷವಾಗಿದ್ದರೇ ಮತಾಂಧ ಪಕ್ಷ ಯಾವುದು ? ಇದನ್ನು ಕಂಡು ಹಿಡಿಯಬೇಕು !

ಯಾವ ಪಕ್ಷ ಭಾರತದ ವಿಭಜನೆ ಮಾಡಿದೆ, ಆ ಪಕ್ಷಕ್ಕೆ ರಾಹುಲ ಗಾಂಧಿ ಯಾವ ಆಧಾರದಲ್ಲಿ ಜಾತ್ಯತೀತ ಎಂದು ನಿಶ್ಚಯಿಸಿದ್ದಾರೆ ? ಇದು ಅವರು ಸ್ಪಷ್ಟಪಡಿಸಬೇಕು !