ಲವ್ ಜಿಹಾದನಂತಹ ಘಟನೆಗಳನ್ನು ತಡೆಯಲು ಸರಕಾರ ಈಗಲಾದರೂ ಲವ್ ಜಿಹಾದ್ ವಿರೋಧಿ ಕಠಿಣ ಕಾನೂನು ರಚಿಸುವುದೇ ?
ಪುರೋಲಾ (ಉತ್ತರಾಖಂಡ) – ಇಲ್ಲಿ ಇಬ್ಬರು ಮುಸಲ್ಮಾನ ಯುವಕರು ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯನ್ನು ಅಪಹರಿಸಲು ಪ್ರಯತ್ನಿಸಿದರು. ಇದು `ಲವ್ ಜಿಹಾದ್’ ಪ್ರಕರಣವಾಗಿದೆಯೆಂದು ಹೇಳುತ್ತಾ ಆಕ್ರೋಶಗೊಂಡ ಹಿಂದೂ ಸಮಾಜ ರಸ್ತೆಗಿಳಿಯಿತು.
ಒಂದು ವಾರ್ತಾವಾಹಿನಿಯು ನೀಡಿದ ಮಾಹಿತಿಯನುಸಾರ, ಮೇ 31, 2023 ರಂದು ಪುರೋಲಾದ ಖರಸಾರಿ ಪ್ರದೇಶದಲ್ಲಿ ಇಬ್ಬರು ಮತಾಂಧ ಯುವಕರು ಒಂಭತ್ತನೇಯ ತರಗತಿಯಲ್ಲಿ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿನಿಗೆ ಆಮಿಷವೊಡ್ಡಿ ಹೊತ್ತೊಯ್ದಿದ್ದರು. ವಿದ್ಯಾರ್ಥಿನಿಯು ಇಬ್ಬರು ಯುವಕರೊಂದಿಗೆ ಹೋಗುತ್ತಿರುವುದನ್ನು ನೋಡಿ ಸ್ಥಳೀಯರಿಗೆ ಸಂಶಯ ಬಂದಿತು. ಅವರು ರಿಕ್ಷಾ ನಿಲ್ಲಿಸಿ ವಿಚಾರಿಸಿದಾಗ ಸತ್ಯ ಬಯಲಾಯಿತು. ಪೊಲೀಸರು ಇಬ್ಬರೂ ಯುವಕರನ್ನು ಬಂಧಿಸಿದ್ದಾರೆ. ಈ ಪ್ರಕರಣ ಬಹಿರಂಗಗೊಂಡ ಬಳಿಕ ಪುರೋಲಾದ ಆಕ್ರೋಶಗೊಂಡ ಹಿಂದೂಗಳು ರಸ್ತೆಗಿಳಿದು ವಿರೋಧಿಸಿದರು. ಅವರು ಆ ಮತಾಂಧರನ್ನು ಪುರೋಲಾ ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯರ ಆಕ್ರೋಶವನ್ನು ನೋಡಿ ಮುಸಲ್ಮಾನ ಸಮಾಜದ 42 ಅಂಗಡಿಕಾರರು ತಮ್ಮ ತಮ್ಮ ಅಂಗಡಿಗಳನ್ನು ಬಿಟ್ಟು ರಾತ್ರೋರಾತ್ರಿ ಪಲಾಯನ ಮಾಡಿದರು.
9वीं की छात्रा के अपहरण का प्रयास, उत्तरकाशी में सड़क पर उतरा आक्रोशित हिन्दू समाज: रातोंरात फरार हुए 42 मुस्लिम दुकानदार#Uttarakhand #LoveJihadhttps://t.co/uzHHQoZsPV
— ऑपइंडिया (@OpIndia_in) May 31, 2023
ವಿಶ್ವ ಹಿಂದೂ ಪರಿಷತ್ತಿನ ಸ್ಥಳೀಯ ಮುಖಂಡ ವೀರೇಂದ್ರ ರಾವತ ಇವರು, ಮುಸಲ್ಮಾನ ಸಮಾಜದ ಜನರು ಹೊರಗಿನಿಂದ ಬಂದು ಪುರೋಲದಲ್ಲಿ ಅಂಗಡಿಗಳನ್ನು ತೆರೆಯುತ್ತಾರೆ. ಇದರೊಂದಿಗೆ ಅವರು ಸ್ಥಳೀಯ ಜನರ ವಿಶೇಷವಾಗಿ ಹಿಂದೂ ಹುಡುಗಿಯರ ಬ್ರೈನ ವಾಶ್ ಮಾಡುತ್ತಾರೆ. ಉತ್ತರ ಕಾಶಿಯ ಪೊಲೀಸ ಅಧೀಕ್ಷಕ ಅರ್ಪಣ ಯದುವಂಶಿಯವರು ಜನರಿಗೆ ಶಾಂತಿಯನ್ನು ಕಾಪಾಡುವಂತೆ ಕರೆ ನೀಡಿದ್ದಾರೆ. ಅಪ್ರಾಪ್ತ ಹುಡುಗಿಯನ್ನು ಅಪಹರಿಸುವ ಪ್ರಯತ್ನ ಮಾಡುವ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.