ಸನ್‌ಫ್ರಾನಿಸ್‌ಕೊ (ಅಮೆರಿಕ)ದಲ್ಲಿ ರಾಹುಲ್ ಗಾಂಧಿಯವರ ಕಾರ್ಯಕ್ರಮದಲ್ಲಿ ಖಲಿಸ್ತಾನದ ಬೇಡಿಕೆ !

ಖಲಿಸ್ತಾನಿ ಧ್ವಜಗಳೂ ಹಾರಿಸಿದರು !

ರಾಹುಲ್ ಗಾಂಧಿ

ಸನ್‌ಫ್ರಾನಿಸ್‌ಕೊ (ಅಮೇರಿಕಾ) – ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಸ್ತುತ ಅಮೇರಿಕಾದ ಪ್ರವಾಸದಲ್ಲಿದ್ದಾರೆ. ಮೇ ೩೧ ರಂದು ಅವರು ಕ್ಯಾಲಿಫೋರ್ನಿಯಾದಲ್ಲಿ ಭಾರತೀಯರನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು. ರಾಹುಲ್ ಗಾಂಧಿ ಭಾಷಣದ ವೇಳೆ ಕೆಲವರು ಖಲಿಸ್ತಾನಿ ಧ್ವಜಗಳನ್ನು ಹಾರಿಸಿ, ಖಲಿಸ್ತಾನದ ಬೇಡಿಕೆಯ ಘೋಷಣೆಗಳನ್ನು ಕೂಗಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯ ಹೊಂಎಯನ್ನು ಭಾರತದಲ್ಲಿ ನಿಷೇಧಿಸಲಾದ ಖಲಿಸ್ತಾನಿ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ ಸ್ವೀಕರಿಸಿದೆ.

‘ಸಿಖ್ಸ್ ಫಾರ್ ಜಸ್ಟೀಸ್’ನ ಮುಖ್ಯಸ್ಥ ಗುರುಪತವಂತ್ ಸಿಂಗ್ ಪನ್ನು ಇವನು ಈ ಘಟನೆಯ ವಿಡಿಯೋವನ್ನು ಪ್ರಸಾರ ಮಾಡಿದ್ದಾನೆ. ೧೯೮೪ರ ಸಿಖ್ ದಂಗೆಯಲ್ಲಿ ನಾವು ಎನು ಮಾಡಿದ್ದೆವು, ಇದನ್ನು ಎಲ್ಲರೂ ನೋಡಿದ್ದೀರಾ ? ರಾಹುಲ್ ಗಾಂಧಿ ಅಮೆರಿಕದಲ್ಲಿ ಎಲ್ಲಿ ಬೇಕಾದರೂ ಹೋಗುತ್ತಾರೆ. ಖಲಿಸ್ತಾನ್ ಪರ ಸಿಖ್ಖರು ಅವರ ಮುಂದೆ ನಿಲ್ಲುತ್ತಾರೆ. ಜೂನ್ ೨೨ಕ್ಕೆ ಮೋದಿಯವರ ಸರದಿ ಇದೆ, ಎಂದು ಆತ ಹೇಳಿದ್ದಾನೆ.

ಸಂಪಾದಕೀಯ ನಿಲುವು

ಇದರಿಂದ ಕಾಂಗ್ರೆಸ್ ಮತ್ತು ಖಲಿಸ್ತಾನಿಗಳ ನಡುವೆ ಒಡಂಬಡಿಕೆ ಇರುವುದೆಂದು ಯಾರಾದರೂ ಆರೋಪಿಸಿದರೆ ತಪ್ಪೇನು ?