ಆನ್ ಲೈನ್ ಆಟದ ಮಾಧ್ಯಮದಿಂದ ಮತಾಂತರ: ನಮಾಜಗಾಗಿ ಮಸೀದಿಗೆ ಹೋಗತೊಡಗಿದ ಜೈನ ಹುಡುಗ

ಗಾಝಿಯಾಬಾದ (ಉತ್ತರಪ್ರದೇಶ) – ಉತ್ತರಪ್ರದೇಶದ ಗಾಝಿಯಾಬಾದನಲ್ಲಿ ಮತಾಂತರದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಜೈನ ಕುಟುಂಬದ 17 ವರ್ಷದ ಹುಡುಗನಿಗೆ `ಆನ್ ಲೈನ್ ಗೇಮಿಂಗ್ ಆಪ್’ ಮೂಲಕ ಬ್ರೈನ್ ವಾಷ್ ಮಾಡಲಾಯಿತು. ತದನಂತರ ಆ ಹುಡುಗ 5 ಸಲ ನಮಾಜಗಾಗಿ ಮಸೀದಿಗೆ ಹೋಗ ತೊಡಗಿದನು. ಕುಟುಂಬದವರಿಗೆ ಈ ಮಾಹಿತಿ ಸಿಗುತ್ತಲೇ ಹುಡುಗನು ಝಾಕೀರ ನಾಯಿಕನ ಪ್ರಭಾವದಲ್ಲಿ ಮತಾಂತರಗೊಂಡಿರುವುದಾಗಿ ಒಪ್ಪಿಕೊಂಡನು. ಸಂತ್ರಸ್ತ ಹುಡುಗನ ಪೋಷಕರು ಗಾಝಿಯಾಬಾದನ ಕವಿನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಂದು ವಾರ್ತಾವಾಹಿನಿಯು ನೀಡಿದ ಮಾಹಿತಿಯನುಸಾರ, ಸಂತ್ರಸ್ತ ಹುಡುಗನ ಕುಟುಂಬ ಗಾಝಿಯಾಬಾದನ ರಾಜನಗರದಲ್ಲಿ ವಾಸಿಸುತ್ತಿದ್ದಾರೆ. ಸಂತ್ರಸ್ತ ಹುಡುಗನು ವ್ಯಾಯಾಮಶಾಲೆಗೆ (ಜಿಮ್ ನಲ್ಲಿ) ಹೋಗುವ ನೆಪಮಾಡಿಕೊಂಡು ಪ್ರತಿದಿನ 5 ಸಲ ಮನೆಯಿಂದ ಹೊರಗೆ ಹೋಗುತ್ತಿದ್ದನು. ಪೋಷಕರಿಗೆ ಅವನ ನಡುವಳಿಕೆ ಸಂದೇಹ ಬಂದಾಗ ಅವರು ಮಗನ ಬೆನ್ನತ್ತಿದಾಗ ಅವನು ಪ್ರತಿ ಸಲವೂ ಮಸೀದಿಗೆ ಹೋಗಿ ನಮಾಜ ಮಾಡುತ್ತಿರುವುದು ಕಂಡು ಬಂದಿತು. ಈ ಬಗ್ಗೆ ಅವರು ತಮ್ಮ ಮಗನೊಂದಿಗೆ ಚರ್ಚಿಸಿದಾಗ ಅವನು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿದನು.

ಪೋಷಕರು ಮಗನ ಮೊಬೈಲ ಮತ್ತು ಲ್ಯಾಪಟಾಪ್ ಪರಿಶೀಲನೆ ಮಾಡಿದಾಗ ಅವರಿಗೆ ಇಸ್ಲಾಂಗೆ ಸಂಬಂಧಿಸಿದ ಬಹಳಷ್ಟು ಅಂಶಗಳು ಕಂಡು ಬಂದಿತು. ಈ ಸಮಯದಲ್ಲಿ ಅವರಿಗೆ ಒಂದು `ಆನ್ ಲೈನ್ ಗೇಮಿಂಗ ಆಪ್’ ಮಾಧ್ಯಮದಿಂದ ಅವರ ಮಗನಿಗೆ ಬದ್ದೊ ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಆಗಿರುವುದು ಕಂಡು ಬಂದಿತು. ಪೀಡಿತ ಪುತ್ರನು ಬದ್ದೋನಿಂದ ಕಂಪ್ಯೂಟರ್ ಗೆ ಸಂಬಂಧಿಸಿದ ಸಾಹಿತ್ಯವನ್ನು ಖರೀದಿಸಿದ್ದನು. ಆಗಿನಿಂದ ಅವನೊಂದಿಗಿನ ಮಿತ್ರತ್ವ ಆಳವಾಗುತ್ತಾ ಹೋಯಿತು. ಸಂತ್ರಸ್ತ ಹುಡುಗನು ಬದ್ಧೋನೊಂದಿಗೆ ಮೊಬೈಲ ಮೇಲೆ ಗಂಟೆಗಟ್ಟಲೇ ಮಾತನಾಡುತ್ತಿದ್ದನು. ಅವನ ಮೊಬೈಲನಲ್ಲಿ ಅನೇಕ ಸಂದೇಹಾಸ್ಪದ ನಂಬರುಗಳು ಕಂಡು ಬಂದಿವೆ. ತಮ್ಮ ಮಗ ಅಪ್ರಾಪ್ತನಾಗಿದ್ದು, ಅವನ ಬ್ರೈನ್ ವಾಷ್ ಮಾಡಿಸಲಾಗಿದೆ. ಆದ್ದರಿಂದ ಈಗ ಅವನು ಮನೆ ಬಿಟ್ಟು ಮಸೀದಿಯಲ್ಲಿ ಇಮಾಮನೊಂದಿಗೆ ವಾಸಿಸುವುದಾಗಿ ಹೇಳುತ್ತಿದ್ದಾನೆ. ಇಷ್ಟೇ ಅಲ್ಲ ನಮ್ಮ ಮಗ ದೇಶವಿರೋಧಿ ಕೃತ್ಯಗಳಲ್ಲಿ ಸಹಭಾಗಿಯಾಗಿರುವ ಹೆದರಿಕೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.

ಈ ಸಂಪೂರ್ಣ ಪ್ರಕರಣದಲ್ಲಿ ಕವಿನಗರದ ಪೊಲೀಸ ಅಧೀಕ್ಷಕ ಅಭಿಷೇಕ ಶ್ರೀವಾತ್ಸವ ಇವರು, ಸಂತ್ರಸ್ತ ಹುಡುಗನ ಪೋಷಕರ ದೂರಿನ ಆಧಾರದಲ್ಲಿ ಸಂಜಯನಗರದ ಮಸಿದಿಯ ಇಮಾಮ ಮತ್ತು ಮುಂಬಯಿಯ ನಿವಾಸಿ ಬದ್ದೋ ಇವರಿಬ್ಬರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಕೊಳ್ಳಲಾಗುತ್ತಿದೆ ಎಂದು ಹೇಳಿದರು.