ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರು ಹೇಳಿದ ಅಮೃತವಚನಗಳು
‘ಸಾಧನೆಯಲ್ಲಿ ಪ್ರಾಥಮಿಕ ಪ್ರಯಾಣದಲ್ಲಿ ವ್ಯಷ್ಟಿ ಸಾಧನೆಯು ಉತ್ತಮವಾಗಿರುವುದು ಆವಶ್ಯಕ ವಿರುತ್ತದೆ. ಸಾಧನೆಯಲ್ಲಿ ದೇವರ ಬಗ್ಗೆ ಇರುವ ಭಾವಕ್ಕೆ ತುಂಬಾ ಮಹತ್ವವಿದೆ. ಭಾವಜಾಗೃತಿಗಾಗಿ ಪ್ರಯತ್ನಿಸಿದರೆ ಜನ್ಮ-ಮರಣಗಳ ಚಕ್ರದಿಂದ ಬೇಗ ಮುಕ್ತರಾಗಲು ಸಾಧ್ಯವಾಗುತ್ತದೆ; ಆದರೆ ಜೀವನದಲ್ಲಿ ಅಷ್ಟೇ ಸಾಕಾಗುವುದಿಲ್ಲ. ಮುಂದೆ ಸಂತತ್ವದ ಕಡೆಗೆ ಮಾರ್ಗಕ್ರಮಣ ಮಾಡಬೇಕಾಗುತ್ತದೆ. ಇದಕ್ಕಾಗಿ ವ್ಯಷ್ಟಿ ಸಾಧನೆಯಿಂದ ಸಮಷ್ಟಿ ಸಾಧನೆಯ ಕಡೆಗೆ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದಾಗಿ ಸಾಧಕನಲ್ಲಿ ವ್ಯಾಪಕತೆ ಬರಲು ಸಹಾಯವಾಗುತ್ತದೆ. ಆದುದರಿಂದ ಕಾಲಕ್ಕನುಸಾರ ಸಮಷ್ಟಿ ಭಾವವನ್ನು ಹೆಚ್ಚಿಸುವ ಅವಶ್ಯಕತೆಯಿರುತ್ತದೆ. ಗುರುಗಳ ಸಮಷ್ಟಿ ರೂಪದೊಂದಿಗೆ ಏಕರೂಪವಾಗುವುದು, ಎಂದರೆ ಅವರ ಸಮಷ್ಟಿ ಕಾರ್ಯದ ಹೊಣೆಯನ್ನು ಸುಯೋಗ್ಯ ರೀತಿಯಲ್ಲಿ ನಿಭಾಯಿಸುವುದು. ಅವರ ಸಮಷ್ಟಿ ಕಾರ್ಯದ ಬೋಧನೆಗನುಸಾರ ಕಾರ್ಯವನ್ನು ತಳಮಳದಿಂದ ಮುನ್ನಡೆ ಸುವುದು, ಎಂದರೆ ತನ್ನಲ್ಲಿ ಸಮಷ್ಟಿ ಭಾವವನ್ನು ವೃದ್ಧಿಸುವುದು.
ಪರಾತ್ಪರ ಗುರು ಡಾ. ಆಠವಲೆಯವರು, “ತನ್ನ ಪ್ರಗತಿಗಾಗಿ ಮನೆಯಲ್ಲಿ ಕುಳಿತು ಒಬ್ಬನೇ ಸಾಧನೆ ಮಾಡುವುದಕ್ಕಿಂತ ಸಮಾಜಕ್ಕೆ ಹೋಗಿ ಎಲ್ಲರಿಗೂ ಸಾಧನೆಯನ್ನು ಹೇಳಿ ‘ಎಲ್ಲರ ಆಧ್ಯಾತ್ಮಿಕ ಉನ್ನತಿಯಾಗಬೇಕು, ಎಂಬ ಉದ್ದೇಶದಿಂದ ಗುರುಗಳ ಕಾರ್ಯವನ್ನು ತಳಮಳದಿಂದ ಸಮಷ್ಟಿಯ ವರೆಗೆ ತಲುಪಿಸುವವನು ದೇವರಿಗೆ ಇಷ್ಟವಾಗುತ್ತಾನೆ, ಎನ್ನುತ್ತಾರೆ.
– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ (೨೫.೩.೨೦೨೦)