ವಟಪೂರ್ಣಿಮೆ (ವಟಸಾವಿತ್ರಿ ವ್ರತ)

ವಟಪೂರ್ಣಿಮೆ ವ್ರತವನ್ನು ಜ್ಯೇಷ್ಠ ಹುಣ್ಣಿಮೆಗೆ ಮಾಡುತ್ತಾರೆ. ಈ ವರ್ಷ ಜೂನ್ ೩ ರಂದು ಈ ವ್ರತವಿದೆ. ಸಾವಿತ್ರಿಯನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ. ಈ ವ್ರತದ ಪ್ರಧಾನ ದೇವತೆ ಸಾವಿತ್ರಿ ಸಹಿತ ಬ್ರಹ್ಮದೇವ. ಸತ್ಯವಾನ, ನಾರದ ಮತ್ತು ಯಮಧರ್ಮ ಇವರು ಉಪ ದೇವತೆಗಳಾಗಿದ್ದಾರೆ.

ವ್ರತವನ್ನು ಆಚರಿಸುವ ಪದ್ಧತಿ

ಅ. ಸಂಕಲ್ಪ : ಪ್ರಾರಂಭದಲ್ಲಿ ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯಸಂಪನ್ನ ದೀರ್ಘಾಯುಷ್ಯ ದೊರೆ ಯಲಿ’, ಎಂದು ಸಂಕಲ್ಪ ಮಾಡಬೇಕು.

ಆ. ಪೂಜೆ : ವಟಕ್ಕೆ ಷೋಡಶೋಪಚಾರ ಪೂಜೆ- ಅಭಿಷೇಕ ವಾದ ನಂತರ ವಟಕ್ಕೆ ಅಂದರೆ ವಟದ ಕೊಂಬೆಯ ಸುತ್ತಲೂ  ಪ್ರದಕ್ಷಿಣೆಯ ದಿಕ್ಕಿನಲ್ಲಿ ಹತ್ತಿಯ ದಾರದಿಂದ ಮೂರು ಸುತ್ತು ಸುತ್ತಬೇಕು. ಪೂಜೆಯ ಕೊನೆಯಲ್ಲಿ ‘ಅಖಂಡ ಸೌಭಾಗ್ಯ ಲಭಿಸಲಿ, ಪ್ರತಿಯೊಂದು ಜನ್ಮದಲ್ಲಿ ಈ ಪತಿಯೇ ಲಭಿಸಲಿ, ಹಾಗೆಯೇ ಧನಧಾನ್ಯ ಮತ್ತು ಕುಲದ ವೃದ್ಧಿಯಾಗಲಿ’, ಎಂದು ಸಾವಿತ್ರೀ ಸಹಿತ ಬ್ರಹ್ಮದೇವನಿಗೆ ಪ್ರಾರ್ಥಿಸುತ್ತಾರೆ.

ಇ. ಉಪವಾಸ : ಸ್ತ್ರೀಯರು ಈ ದಿನ ಉಪವಾಸ ಮಾಡಬೇಕು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)