‘ದಿ ಕೇರಳ ಸ್ಟೋರಿ ಈ ಚಲನಚಿತ್ರವೆಂದರೆ ತನಗೆ ತಾನೇ ಅನೇಕ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಕಥೆಯಾಗಿದೆ. ‘ಹುಡುಗಿಯರು ಯಾವ ವಯಸ್ಸಿನಲ್ಲಿ ಈ ಚಲನಚಿತ್ರವನ್ನು ನೋಡಬೇಕೋ, ಆ ವಯಸ್ಸಿನಲ್ಲಿ ಅವರು ಅದನ್ನು ನೋಡುವ ಹಾಗಿಲ್ಲ, ಎಂಬ ಪ್ರಮಾಣಪತ್ರ ಈ ಚಲನಚಿತ್ರಕ್ಕೆ ಲಭಿಸಿದೆ. ಈ ಚಲನಚಿತ್ರದಲ್ಲಿನ ಪ್ರಸಂಗಗಳಿಗಿಂತ ಹೆಚ್ಚು ಜಿಗುಪ್ಸೆ ತರುವಂತಹ ಹಿಂಸೆ ಹಾಗೂ ಭೀಬತ್ಸ ಪ್ರಣಯಗಳನ್ನು ಮಕ್ಕಳು ಇತರೆಡೆ ನೋಡಿಬಿಟ್ಟಿರುತ್ತಾರೆ, ಇದು ಬಹುಶಃ ಜಾಣ ಕಿವುಡುತನ ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿಯ (ಸೆನ್ಸರ್ ಬೋರ್ಡ್ನ) ಗಮನಕ್ಕೆ ಬಂದಿರಲಿಕ್ಕಿಲ್ಲವೆನಿಸುತ್ತದೆ.
೧. ಚಲನಚಿತ್ರದಲ್ಲಿನ ‘ಮಾತನಾಡುವ ದೃಶ್ಯಗಳು ಬಹಳಷ್ಟು ವಿಷಯಗಳನ್ನು ಹೇಳುತ್ತವೆ !
‘ಯಾವಾಗಲೂ ನಾವು ನೋಡುವಾಗ ‘ಇದು ಚಲನಚಿತ್ರ ವಾಗಿದೆ, ಎಂಬ ಅರಿವನ್ನು ಪ್ರತಿಯೊಂದು ಚೌಕಟ್ಟಿನಿಂದ (‘ಫ್ರೇಮ್ನಿಂದ) ಮಾಡಿಕೊಡುವ ಅನೇಕ ಚಲನಚಿತ್ರಗಳು ಬರುತ್ತವೆ ಹಾಗೂ ಹೋಗುತ್ತವೆ. ನಾಲ್ವರು ಹುಡುಗಿಯರ ಸುತ್ತಲೂ ಹೆಣೆದಿರುವ ‘ದಿ ಕೇರಳ ಸ್ಟೋರಿ ಚಲನಚಿತ್ರದ ಕಥೆ, ಇದು ವಾಸ್ತವದಲ್ಲಿ ೪ ವಿಚಾರಧಾರೆಗಳ ಪ್ರವಾಹವಾಗಿದೆ. ಅವುಗಳಲ್ಲಿ ಇಬ್ಬರು ಹಿಂದೂಗಳಿದ್ದಾರೆ, ಒಬ್ಬಳು ಕ್ರೈಸ್ತ ಹಾಗೂ ಒಬ್ಬಳು ಮುಸಲ್ಮಾನಳಾಗಿದ್ದಾಳೆ. ಹಿಂದೂಗಳಲ್ಲಿ ಒಬ್ಬಳು ಸಾಮ್ಯವಾದಿಯಾಗಿದ್ದಾಳೆ. ಹಿಂದುತ್ವ, ಸಾಮ್ಯವಾದ, ಕ್ರೈಸ್ತವಾದ, ಮತ್ತು ಇಸ್ಲಾಮ್‌ನ ಮೇಲೆ ಸಣ್ಣ ಸಣ್ಣ ವಿಷಯಗಳ ಬಗ್ಗೆ ತೋರಿಸಿದ ವಿಶ್ಲೇಷಣೆಯು ತುಂಬಾ ಮಹತ್ವದ್ದಾಗಿದೆ. ಅದರಲ್ಲಿರುವ ಸಂಭಾಷಣೆಗಿಂತಲೂ ಅಲ್ಲಿ ಕೇವಲ ಕೆಮರಾ ಚಲಿಸುವಾಗ ಕೆಲವು ದೃಶ್ಯಗಳೇ ಮಾತನಾಡುತ್ತವೆ, ಅದನ್ನು ತಿಳಿದುಕೊಳ್ಳುವುದು ತುಂಬಾ ಅಗತ್ಯವಿದೆ. ಊಟಕ್ಕೆ ಹೋದಾಗ ಮುಸಲ್ಮಾನ ಹುಡುಗಿ, ಕ್ರೈಸ್ತ, ಸಾಮ್ಯವಾದಿ ಹಾಗೂ ಹಿಂದೂ ಹುಡುಗಿಯರ ವರ್ತನೆ, ಕುಳಿತುಕೊಳ್ಳುವುದು, ಊಟದ ಮೊದಲು ಪ್ರಾರ್ಥನೆ ಮಾಡುವುದು ಹಾಗೂ ಅಲ್ಲಿನ ಸಂಭಾಷಣೆ ಇತ್ಯಾದಿ ಪ್ರತಿಯೊಬ್ಬರೂ ಬಾಲ್ಯಾವಸ್ಥೆಯಿಂದ ಅಂಗೀಕರಿಸಿದ ಆಚಾರಗಳ ಅರಿವಾಗುತ್ತದೆ. ಮೂವರು ಹುಡುಗಿಯರು ನೃತ್ಯ ಮಾಡಲು ಹೋದಾಗ ಮುಸಲ್ಮಾನ ಹುಡುಗಿ ಅಲ್ಲಿಯೇ ಕುಳಿತಿರುತ್ತಾಳೆ. ಈ ದೃಶ್ಯ ಸಾಮಾನ್ಯವಾಗಿದೆ. ಆದರೆ ಬಹಳಷ್ಟು ವಿಷಯಗಳನ್ನು ಹೇಳುತ್ತದೆ.
೨. ಐಸಿಸ್ ಮತ್ತು ಸಾಂಸ್ಕೃತಿಕ ವಿಸ್ತಾರವಾದದ ಉಗ್ರವಾದಿ ಸ್ವರೂಪದ ಅರಿವು ಮೂಡಿಸುವ ಚಲನಚಿತ್ರ !
ಇಲ್ಲಿ ಹೇಳಲಿಕ್ಕಿರುವ ಹಾಗೂ ನಮ್ಮನ್ನೇ ಪ್ರಶ್ನಿಸುವಂತಹ ಬಹಳಷ್ಟು ವಿಷಯಗಳಿವೆ. ‘ಈ ಚಲನಚಿತ್ರ ಇಸ್ಲಾಮ್ ವಿರೋಧಿಯಲ್ಲ, ಆದರೆ ಭಯೋತ್ಪಾದನೆಯ ವಿರುದ್ಧವಿದೆ. ಇಸ್ಲಾಮ್‌ನ ಬಗ್ಗೆ ವಿವರಿಸಿ ಹೇಳುವುದಾಗಿದೆ. ‘ಜಗತ್ತಿನಾದ್ಯಂತ ಪರಸ್ಪರರ ವಿರುದ್ಧವಿರುವ ಇಸ್ಲಾಮೀ ಮತ್ತು ಸಾಮ್ಯವಾದಿ ವಿಚಾರಧಾರೆ ಭಾರತದಲ್ಲಿ ಮಾತ್ರ ಕೈ ಕೈ ಹಿಡಿದು ಪರಸ್ಪರರನ್ನು ಬೆಂಬಲಿಸುತ್ತಾ ತಿರುಗಾಡುತ್ತದೆ, ಎಂಬುದನ್ನು ಹೇಳುವ ಚಲನಚಿತ್ರ ಇದಾಗಿದೆ. ಕೇವಲ ಹಿಂದೂಗಳೇ ಅಲ್ಲ, ಮುಸಲ್ಮಾನರೂ ಈ ಚಲನಚಿತ್ರವನ್ನು ನೋಡಲೇ ಬೇಕು. ‘ಸಂಪೂರ್ಣ ಜಗತ್ತು ಇಸ್ಲಾಮ್‌ಮಯವಾದರೆ ಏನಾಗಬಹುದು ?, ಎಂಬುದು ಈ ಚಲನಚಿತ್ರವನ್ನು ನೋಡಿದಾಗ ಅರಿವಾಗಬಹುದು. (ಚಲನಚಿತ್ರದಲ್ಲಿ ‘ಲಿಪ್ ಸ್ಟಿಕ್ ಹಚ್ಚಿದರೆ, ಕೈ ಕತ್ತರಿಸುವ ಶಿಕ್ಷೆ ಇಸ್ಲಾಮ್‌ನಲ್ಲಿದೆ, ಎಂಬುದನ್ನು ಭಾರತದಲ್ಲಿ ಯಾರೂ ಹೇಳಿರಲಿಲ್ಲ, ಎಂಬ ಸಂಭಾಷಣೆಯೂ ಬಹಳಷ್ಟು ವಿಷಯಗಳನ್ನು ಹೇಳುತ್ತದೆ.) ಚಲನಚಿತ್ರವನ್ನು ನೋಡಿ ಸಾಂಸ್ಕೃತಿಕ ವಿಸ್ತಾರವಾದದ ಉಗ್ರವಾದಿ ಸ್ವರೂಪ ಈ ಚಲನಚಿತ್ರದಿಂದ ಅರಿವಾಗಬಹುದು. ನಾವು ಹಿಂದೂ ಧರ್ಮದವರಾಗಿರುವುದು ಎಷ್ಟು ಯೋಗ್ಯವಾಗಿದೆ ಎಂಬುದರ ಅರಿವಾಗುವುದು. ಸಾಮ್ಯವಾದದ ಹುಚ್ಚುತನದಿಂದ ಹೊರಗೆ ಬಾರದವರಿಗೆ ‘ನಾವು ಏನನ್ನು ಕಳೆದುಕೊಂಡಿದ್ದೇವೆ ?, ಎಂಬುದು ಅರಿವಾಗುವುದು. ಹೇಗೆ ಈ ಚಲನಚಿತ್ರ ಇಸ್ಲಾಮ್ ವಿರೋಧಿಯಲ್ಲವೋ, ಹಾಗೆಯೇ ಅದು ಕೇರಳ ವಿರೋಧಿಯೂ ಅಲ್ಲ. ಈ ಚಲನಚಿತ್ರ ಐಸಿಸ್‌ಅನ್ನು ವಿರೋಧಿಸುತ್ತದೆ. ಭಾರತದ ಮುಸಲ್ಮಾನರು, ‘ಐಸಿಸ್‌ನ ವಿರುದ್ಧದ ಚಲನಚಿತ್ರವೆಂದರೆ ಇಸ್ಲಾಮ್ ವಿರುದ್ಧದ ಚಲನಚಿತ್ರವಾಗಿದೆಯೇ ?, ‘ಕೇರಳದಲ್ಲಿ ನಡೆಯುವ ಘಟನೆಗಳೆಂದರೆ ಕೇರಳದ ವಿರುದ್ಧವಾಗಿದೆಯೇ ?, ಎಂಬುದನ್ನು ನಿರ್ಧರಿಸಬೇಕು.
೩. ಕುಟುಂಬ, ಸಂಸ್ಕೃತಿ, ಶ್ರದ್ಧೆ ಹಾಗೂ ಧರ್ಮವನ್ನು ಮುಗಿಸಿಬಿಡಲು ಅವಲಂಬಿಸಿದ ಪದ್ಧತಿಯ ಕಥೆಯನ್ನು ಹೇಳುವ ಚಿಲನಚಿತ್ರ !
ಇಸ್ಲಾಮೀ ಸಾಂಸ್ಕೃತಿಕ ವಿಸ್ತಾರವಾದ ಹಾಗೂ ಸಾಮ್ಯವಾದಿಗಳು ಕೈಜೋಡಿಸಿಕೊಂಡು ಕುಟುಂಬ, ಸಂಸ್ಕೃತಿ, ಶ್ರದ್ಧೆ ಮತ್ತು ಧರ್ಮವನ್ನು ನಷ್ಟಗೊಳಿಸಲು ಅವಲಂಬಿಸಿದ ಪದ್ಧತಿಯ ಕಥೆಯನ್ನು ಹೇಳುವ ಚಲನಚಿತ್ರ ಇದಾಗಿದೆ. ‘ನನ್ನ ಹಸುಗೂಸನ್ನು ಹಿಂತಿರುಗಿಸಿ, ಎಂದು ಬೊಬ್ಬೆ ಹೊಡೆಯುವ ಮಾತೆಯಿಂದ ಆರಂಭವಾಗುವ ಈ ಚಲನಚಿತ್ರದ ಕಥೆ, ತಮ್ಮನ್ನು ಬಿಟ್ಟು ಹೋಗಿರುವ ಮಗಳ ಜೀವನವೇ ಧ್ವಂಸವಾಗಿರುವುದನ್ನು ನೋಡಿ ದುಃಖಿಸುವ ಅವಳ ತಾಯಿಯ ಸಮೀಪಕ್ಕೆ ಕೊನೆಗೆ ಬಂದು ನಿಲ್ಲುತ್ತದೆ. ಮೂವರು ಹುಡುಗಿಯರ ದುಃಖದ ಜೊತೆಗೆ ಇಬ್ಬರು ತಾಯಿಯರ ದುಃಖವೂ ಇದೆ. ಪ್ರಾರಂಭದಿಂದ ಕೊನೆಯವರೆಗೆ ಪರಿಶುದ್ಧವಾಗಿದ್ದ ಕುಟುಂಬದಲ್ಲಿನ ‘ತಾಯಿಯ ನೋವನ್ನು ಸೂಕ್ಷ್ಮವಾಗಿ ನಿರೂಪಿಸುವುದು ನಲುಗಿಸಿ ಬಿಡುತ್ತದೆ. ಅಜ್ಜಿ, ತಾಯಿ ಮತ್ತು ಮೊಮ್ಮಗಳ ಸಂಬಂಧ, ‘ತಮ್ಮ ಮಗಳು ಇಸ್ಲಾಮ್ ಸ್ವೀಕರಿಸಿ ನಿಕಾಹ ಮಾಡುತ್ತಿದ್ದಾಳೆ, ಎಂಬುದು ತಿಳಿದ ನಂತರ ಅಳಿಯನೊಂದಿಗೆ ಮಗಳನ್ನೂ ಸ್ವೀಕರಿಸಲು ಸಿದ್ಧವಾಗಿರುವ ತಾಯಿ, ‘ಮಗಳು ಬರಲು ಬಯಸುವುದಿಲ್ಲ, ಎಂಬುದು ತಿಳಿದ ನಂತರ ಕಳವಳಗೊಂಡ ತಾಯಿ, ಮಗಳು ಬರದಿರುವ ಕಾರಣ ತಿಳಿದನಂತರ ಸಂಚಾರಿವಾಣಿ ಕೈಯಿಂದ ಜಾರಿಬಿದ್ದ ತಾಯಿ, ಮಗಳು ಸಂಪರ್ಕಿಸಿದ್ದಾಳೆಂದು ಅವಳನ್ನು ಭೇಟಿಯಾಗಲು ಬುತ್ತಿ ತೆಗೆದುಕೊಂಡು ಹೋಗುವ ತಾಯಿ ಮತ್ತು ಕೊನೆಗೆ ಮಗಳಿಗೆ ‘ತಾಯಿಯಾದಾಗ ಹೇಗನಿಸುತ್ತದೆ ?, ಎಂದು ಸಂಚಾರಿವಾಣಿಯಲ್ಲಿ ವಿಚಾರಿಸುವ ತಾಯಿ, ಇದೊಂದು ಸಲಗ್ನ ಅನುಬಂಧ (ಸಂಬಂಧ) ಆಗಿದ್ದು, ಇದು ಮುರಿದ ಕುಟುಂಬದ ಎಳೆಯನ್ನು ಬಿಡಿಸುತ್ತಾ ಹೋಗುತ್ತದೆ.
೪. ಇದು ಕೇವಲ ಚಲನಚಿತ್ರ ಮಾತ್ರವಲ್ಲ, ಇದೊಂದು ವಿಚಾರವಾಗಿದೆ !
ಬಹುಶಃ ಆ ತಾಯಿಯ ದುಃಖ ನನ್ನನ್ನು ಇನ್ನೂ ಅನೇಕ ದಿನಗಳ ವರೆಗೆ ಹಿಂಸಿಸುತ್ತಾ ಇರಬಹುದು. ಪ್ರತಿಯೊಬ್ಬ ತಾಯಿ-ತಂದೆ ಈ ಚಲನಚಿತ್ರವನ್ನು ನೋಡಲೇ ಬೇಕು. ಇದು ಕೇವಲ ಚಲನಚಿತ್ರವಲ್ಲ, ಇದು ಪ್ರತಿಯೊಬ್ಬರೂ ಮಾಡಬೇಕಾದ ವಿಚಾರವಾಗಿದೆ.
– ಶ್ರೀ. ಪ್ರಸನ್ನ ಶಿವರಾಮ ಬರ್ವೆ, ಪಣಜಿ ಗೋವಾ.(೭.೫.೨೦೨೩) (ಆಧಾರ : ‘ಪ್ರಸನ್ನ ವದನೆ ಈ ಬ್ಲಾಗ್ನಿಂದ)