ಲಂಡನ್ ನಲ್ಲಿ ಟಿಪ್ಪು ಸುಲ್ತಾನ್ ಖಡ್ಗ ೧೪೩ ಕೋಟಿ ರೂಪಾಯಿಗೆ ಹರಾಜು !

ಲಂಡನ (ಇಂಗ್ಲೆಂಡ್) – ೧೮ ನೇ ಶತಮಾನದಲ್ಲಿ ತಯಾರಿಸಿರುವ ಕ್ರೂರ ಟಿಪ್ಪು ಸುಲ್ತಾನ್ ನ ಖಡ್ಗ ೧೪೩ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ‘ಬೋನಹಂಸ್’ ಈ ಹರಾಜು ಗೃಹದಿಂದ ನೀಡಿರುವ ಮಾಹಿತಿಯ ಪ್ರಕಾರ ಸಿಕ್ಕಿರುವ ಹಣ ಅಪೇಕ್ಷೆಗಿಂತಲೂ ಇವಳು ಪಟ್ಟು ಹೆಚ್ಚಾಗಿರುವುದು ಎಂದು ಹರಾಜ ಗೆದ್ದುರುವವರ ಅಭಿಪ್ರಾಯವಾಗಿದೆ. ಈ ಖಡ್ಗ ಇಲ್ಲಿಯವರೆಗೆ ಮಾರಾಟ ಮಾಡಲಾದ ಎಲ್ಲಕ್ಕಿಂತ ತುಟ್ಟಿ ಭಾರತೀಯ ಮತ್ತು ಇಸ್ಲಾಮಿ ವಸ್ತು ಆಗಿದೆ. ಹರಾಜುಗೃಹದ ಜಾಲತಾಣದ ಪ್ರಕಾರ, ಟಿಪ್ಪು ಪರಾಭವದ ನಂತರ ಖಡ್ಗ ಅವನ ಶಯನ ಕಕ್ಷದಲ್ಲಿ ದೊರೆತಿತ್ತು. ಮೊಗಲ ಶಸ್ತ್ರ ನಿರ್ಮಿಸುವವರು ಈ ಖಡ್ಗವನ್ನು ಜರ್ಮನ್ ಬ್ಲೇಡದಿಂದ ತಯಾರಿಸಿದ್ದರು. ಮೇ ೪, ೧೭೯೯ ರಂದು ಟಿಪ್ಪು ಸುಲ್ತಾನಿನ ಪರಾಭವದ ನಂತರ ಶ್ರೀರಂಗಪಟ್ಟಣದಿಂದ ಅವನ ಬಹಳಷ್ಟು ಶಸ್ತ್ರಗಳನ್ನು ಲೂಟಿ ಮಾಡಲಾಗಿತ್ತು. ಅದರಲ್ಲಿ ಈ ಖಡ್ಗದ ಸಮಾವೇಶವಿತ್ತು.