ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಬಳಿ ಹಿಂದೂ ದ್ವೇಷಿ ‘ ಅಮ್ನೆಸ್ಟಿ ಇಂಡಿಯಾ ‘ ದ ಬೇಡಿಕೆ !
ನವದೆಹಲಿ – ಭಾರತ ಮತ್ತು ಹಿಂದೂ ವಿರೋಧಿ ಮಾನವಾಧಿಕಾರ ಸಂಘಟನೆ ‘ ಅಮ್ನೆಸ್ಟಿ ಇಂಟರ್ನ್ಯಾಷನಲ್ ನ ಭಾರತೀಯ ಶಾಖೆ ಅಮ್ನೆಸ್ಟಿ ಇಂಡಿಯಾವು ಕರ್ನಾಟಕದಲ್ಲಿ ಆಯ್ಕೆ ಆಗಿರುವ ಕಾಂಗ್ರೆಸ್ ಸರಕಾರಕ್ಕಾಗಿ ಹಿಂದೂ ವಿರೋಧಿ ಬೇಡಿಕೆಗಳ ಒಂದು ಸೂಚಿ ಜಾರಿಗೊಳಿಸಿದೆ. ಇದರಲ್ಲಿ ರಾಜ್ಯದ ಶಾಲೆಗಳಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿನ ಹಿಜಾಬ ನಿಷೇಧ ತೆರವುಗೊಳಿಸುವುದು, ಗೋ ಹತ್ಯೆಗೆ ಅನುಮತಿ ನೀಡುವುದು, ಮತ್ತು ದೇವಸ್ಥಾನಗಳ ಬಳಿ ಮುಸಲ್ಮಾನರ ಅಂಗಡಿಗಳಿಗೆ ನಿಷೇಧ ಹೇರುವವರ ವಿರುದ್ಧ ಕ್ರಮ ಕೈಗೊಳ್ಳುವುದುಮುಂತಾದ ಬೇಡಿಕೆಗಳನ್ನು ಮಾಡಲಾಗಿದೆ. ಈ ಸಂಧರ್ಭದಲ್ಲಿನ ಕೆಲವು ಟ್ವೀಟ್ ಮಾಡುತ್ತಾ ಈ ಸಂಘಟನೆಯಿಂದ ಬೇಡಿಕೆ ಸಲ್ಲಿಸಲಾಗಿದೆ.
೧. ‘ ಅಮ್ನೆಸ್ಟಿ ಇಂಡಿಯಾ ‘ ದ ಪ್ರಕಾರ ಹಿಜಾಬ್ ನಿಷೇಧ ಇದು ಮುಸಲ್ಮಾನ ಹುಡುಗಿಯರ ಅಭಿವ್ಯಕ್ತಿ ಸ್ವಾತಂತ್ರ್ಯ , ಧರ್ಮ ಸ್ವಾತಂತ್ರ್ಯ ಮತ್ತು ಶಿಕ್ಷಣದ ಅಧಿಕಾರ ಇವುಗಳಲ್ಲಿ ಒಂದು ಪರ್ಯಾಯವನ್ನು ಆಯ್ಕೆ ಮಾಡಲು ಅನಿವಾರ್ಯಗೊಳಿಸುತ್ತದೆ. ಇದರಿಂದ ಈ ಹುಡುಗಿಯರು ಸಮಾಜದಲ್ಲಿ ಸಹಭಾಗಿ ಆಗುವ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
೨. ‘ ಅಮ್ಮೆಸ್ಟಿ ಇಂಡಿಯಾ ‘ದಿಂದ ರಾಜ್ಯದಲ್ಲಿನ ಗೋಹತ್ಯೆ ಕಾನೂನಿನ ವ್ಯವಸ್ಥೆಯ ಅಭ್ಯಾಸ ಮಾಡುವುದರ ಜೊತೆಗೆ ಅದನ್ನು ರದ್ದುಪಡಿಸಲು ಒತ್ತಾಯಿಸಿದೆ. ಗೋ ಹತ್ಯೆ ನಿಷೇಧ ಮತ್ತು ಮತಾಂತರದ ಬಗ್ಗೆ ರೂಪಿಸಿರುವ ಕಾನೂನಿನ ದುರುಪಯೋಗ ಆಗಬಹುದು . ಇದು ಅಲ್ಪಸಂಖ್ಯಾತರ ವಿರುದ್ಧ ಶಸ್ತ್ರದ ರೀತಿಯಲ್ಲಿ ಉಪಯೋಗ ಆಗುವ ಸಾಧ್ಯತೆಯಿದೆ ಎಂದು ಹೇಳಿದೆ
೩. ಮುಸಲ್ಮಾನ ಅಂಗಡಿಗಳ ಮೇಲಿನ ಬಹಿಷ್ಕಾರದ ಬಗ್ಗೆ ‘ ಅಮ್ನೆಸ್ಟಿ ಇಂಡಿಯಾ ಯು ಮುಂದಿನಂತೆ ಹೇಳಿದೆ, ‘ರಾಜ್ಯದಲ್ಲಿ ಚುನಾವಣೆಯ ಮೊದಲು ಮುಸಲ್ಮಾನರ ಮೇಲೆ ಆರ್ಥಿಕ ಬಹಿಷ್ಕಾರ ಮತ್ತು ಹಿಂಸಾಚಾರ ನಡೆಸಲು ಕರೆ ನೀಡಲಾಗಿತ್ತು. ಧರ್ಮ, ಜಾತಿ ಆಧಾರಿತ ಭೇದಭಾವ ಮತ್ತು ಅಪರಾಧ ನಿಲ್ಲಿಸಲು ಪ್ರಯತ್ನಿಸಬೇಕು.
(ಸೌಜನ್ಯ : India Today)
ಆದಷ್ಟು ಬೇಗನೆ ಯೋಗ್ಯ ನಿರ್ಣಯ ತೆಗೆದುಕೊಳ್ಳಲಾಗುವುದು ! – ಕಾಂಗ್ರೆಸ್
ಅಮ್ನೆಸ್ಟಿ ಇಂಡಿಯಾದ ಬೇಡಿಕೆಗಳ ಬಗ್ಗೆ ಕರ್ನಾಟಕದಲ್ಲಿನ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಸಂಸದ ಪ್ರಕಾಶ್ ರಾಥೋಡ್ ಇವರು ಸರಕಾರವು ಕಾರ್ಯ ಕಲಾಪ ಕೈಗೆತ್ತಿಕೊಂಡು ಕೆಲವು ದಿನಗಳಷ್ಟೇ ಆಗಿದೆ, ಇದರ ಬಗ್ಗೆ ಆದಷ್ಟು ಬೇಗನೆ ಯೋಗ್ಯ ನಿರ್ಣಯ ತೆಗೆದುಕೊಳ್ಳಲಾಗುವುದು ಎಂಬ ಆಶಯ ನನಗಿದೆ ಎಂದು ಹೇಳಿದರು.
ಸಂಪಾದಕರ ನಿಲುವು* ಅಮ್ನೆಸ್ಟಿ ಈ ಸಂಸ್ಥೆ ಮಾನವಾಧಿಕಾರಕ್ಕಾಗಿ ಕಾರ್ಯ ಮಾಡುತ್ತಿದೆ, ಎಂದು ಜಗತ್ತಿನಾದ್ಯಂತ ಹೇಳುತ್ತಿದೆ ಆದರೂ ಹಿಂದೂದ್ವೇಷಿ ಮತ್ತು ಭಾರತ ವಿರೋಧಿ ಕಾರ್ಯ ಚಟುವಟಿಕೆ ಮಾಡುತ್ತಿದೆ, ಇದು ಆಗಾಗ ಬಹಿರಂಗವಾಗಿದೆ. ಈಗಲೂ ಅದರ ಬೇಡಿಕೆಯಿಂದ ಭಾರತ ದ್ವೇಷಿ ಮತ್ತು ಹಿಂದೂದ್ವೇಷಿ ಸ್ವರೂಪ ಬಹಿರಂಗವಾಗಿದೆ. * ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿಗಳಾಗುವಾಗ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮುಂತಾದ ಪಕ್ಷಗಳ ಸರಕಾರಗಳು ಹಿಂದೂ ವಿರೋಧಿ ಕಾನೂನು ರೂಪಿಸುತ್ತಾರೆ , ಆವಾಗ ಈ ಸಂಸ್ಥೆ ಮೌನವಾಗಿರುತ್ತದೆ, ಇದನ್ನು ತಿಳಿದುಕೊಳ್ಳಿ ! |