ಬಂಗಾಳದಲ್ಲಿ ಮುಂದಿನ ೨-೩ ವಾರಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬಿಡುಗಡೆ ಅಸಾಧ್ಯ !

ಚಲನಚಿತ್ರ ಸದ್ಯದಲ್ಲಿ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ !

ಕೋಲಕಾತಾ (ಬಂಗಾಳ) – ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ. ಸದ್ಯ ಒಂದೇ ಒಂದು ಚಿತ್ರಮಂದಿರದಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಇನ್ನು ೨-೩ ವಾರಗಳ ಕಾಲ ರಾಜ್ಯದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ರಾಜ್ಯದ ಚಿತ್ರಮಂದಿರಗಳಲ್ಲಿ ಇತರೆ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ. ಅವುಗಳ ಮುಂಗಡಕಾಯ್ದಿರಿಸುವಿಕೆ ಆಗಿರುವುದರಿಂದ ಸದ್ಯಕ್ಕೆ ‘ದಿ ಕೇರಳ ಸ್ಟೋರಿ’ ಪ್ರದರ್ಶಿಸುವ ಸಾಧ್ಯತೆ ಇಲ್ಲ. ಹಲವು ಚಿತ್ರಮಂದಿರಗಳಲ್ಲಿ ಮಾಲೀಕರು ಚಿತ್ರ ಪ್ರದರ್ಶನಕ್ಕೆ ನಿರಾಕರಿಸಿದ್ದಾರೆ. ಪೊಲೀಸರು ಮತ್ತು ಆಡಳಿತದವರು ಬೆದರಿಕೆ ಹಾಕಿರುವುದರಿಂದ ಅವರು ನಿರಾಕರಿಸಿದ್ದಾರೆ ಎಂದು ಚಲನಚಿತ್ರದ ನಿರ್ಮಾಪಕ ವಿಪುಲ್ ನಿವರು ಈಗಾಗಲೇ ಆರೋಪಿಸಿದ್ದಾರೆ.

ಸದ್ಯ ರಾಜ್ಯದ ಉತ್ತರ ೨೪ ಪರಗಣಾ ಜಿಲ್ಲೆಯ ಬನಗಾವನ ಚಿತ್ರಮಂದಿರದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುತೂಹಲಕಾರಿಯೆಂದರೆ, ಈ ಚಿತ್ರದ ಸಂಗೀತಕಾರ ಬಿಶಾಖ್ ಜ್ಯೋತಿ ಇವರು ಇದೆ ಗ್ರಾಮದವರಾಗಿದ್ದಾರೆ. ಈ ಕುರಿತು ಅವರು, ‘‘ನನ್ನ ಹಳ್ಳಿಯ ಚಿತ್ರಮಂದಿರದಲ್ಲಿ ಈ ಚಲನಚಿತ್ರ ಪ್ರದರ್ಶನವಾಗುತ್ತಿದೆ ಎಂದು ತಿಳಿದು ತುಂಬಾ ಆನಂದವಾಯಿತು. ರಾಜ್ಯದ ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಚಲನಚಿತ್ರದ ಪ್ರದರ್ಶನಕ್ಕೆ ನಿರಾಕರಿಸಲಾಗಿತ್ತಿದೆ. ರಾಜ್ಯದ ಇತರೆ ಚಿತ್ರಮಂದಿರಗಳಲ್ಲಿ ಈ ಚಲನಚಿತ್ರ ತೋರಿಸಲಾಗುವುದು” ಎಂದು ಹೇಳಿದರು.